Tips for Dry Skin: ನಿಮ್ಮ ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆಯೇ..?  ತುರಿಕೆ ಚರ್ಮದ ಕಿರಿಕಿರಿ ಮತ್ತು ಹೆಚ್ಚಿನ ಸ್ಕಿನ್‌ ಪ್ರಾಬ್ಲಂಸ್‌ನಿಂದ ಬಳಲುತ್ತಿದ್ದೀರಾ..? ಹಾಗಾದರೆ ಇಲ್ಲಿವೆ ಕೆಲವು ಸಲಹೆಗಳು... ಇವುಗಳನ್ನು ಉಪಯೋಗಿಸಿ ನಿಮ್ಮ ತ್ವಚೆಯನ್ನು ಫ್ರೆಶ್‌ ಆಗಿ ಇರಿಸಿ...


COMMERCIAL BREAK
SCROLL TO CONTINUE READING

ಆವಕಾಡೊ: 
ಆವಕಾಡೊ ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಅದಷ್ಟೇ ಅಲ್ಲದೆ ಅಗತ್ಯವಾದ ಜೀವಸತ್ವಗಳನ್ನು ಈ ಹಣ್ಣು ಹೊಂದಿದೆ. ಈ ಹಣ್ಣು ಚರ್ಮವನ್ನು ಆಳದಿಂದ ಪೋಷಿಸುತ್ತದೆ. ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಒಣ ಚರ್ಮಕ್ಕೆ ಇದು ಉತ್ತಮ ಆಯ್ಕೆಯಾಗಿದೆ.


ಪಪ್ಪಾಯಿ: 
ಪಪ್ಪಾಯಿ ಹಣ್ಣು ಚರ್ಮವನ್ನು ಕಾಂತಿಯುತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮವನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ: ಈ ಹಣ್ಣಿನ ಫೇಸ್‌ ಪ್ಯಾಕ್‌ ನಿಮ್ಮ ತ್ವಚೆಯನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತೆ..!


ಜೇನುತುಪ್ಪ: 
ಜೇನುತುಪ್ಪ ನೈಸರ್ಗಿಕವಾಗಿ ಚರ್ಮವನ್ನು ಆಳದಿಂದ ತೇವಗೊಳಿಸುತ್ತದೆ. ಇದಲ್ಲದೆ, ಇದು ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ. ಅಲ್ಲದೆ, ಇದು ಪರಿಣಾಮಕಾರಿಯಾಗಿ ಚರ್ಮವನ್ನು ಹೊಳಪುಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಜೇನುತುಪ್ಪವನ್ನುನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುತ್ತದೆ.


ತೆಂಗಿನ ಎಣ್ಣೆ: 
ತೆಂಗಿನ ಎಣ್ಣೆಯು ಆರ್ಧ್ರಕ ಗುಣಗಳನ್ನು ಹೊಂದಿದೆ. ಒಣ ತ್ವಚೆ ಇರುವವರಿಗೆ ಇದು ಬಹಳ ಒಳ್ಳೆಯದು. ಏಕೆಂದರೆ ಇದು ಚರ್ಮವನ್ನು ಆಳವಾಗಿ ಪೋಷಿಸುವ ಮೂಲಕ ಚರ್ಮವನ್ನು ತೇವವಾಗಿ ಇರಿಸುತ್ತದೆ. ಸ್ನಾನದ ಮೊದಲು ಅಥವಾ ನಂತರ ನೀವು ಇದನ್ನು ಬಳಸಬಹುದು ಅಥವಾ ರಾತ್ರಿ ಮಲಗುವ ಮುನ್ನ  ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಿ ಮಲಗಬಹುದು.


ರೋಸ್ ವಾಟರ್:  
ರೋಸ್ ವಾಟರ್ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನಮ್ಮ ತ್ವಚೆಯಲ್ಲಿನ pH ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ತ್ವಚೆಯನ್ನು ಫ್ರೆಶ್‌ ಆಗಿ ಇಡುತ್ತದೆ. ಒಣ ಚರ್ಮಕ್ಕೆ ಇದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು. ನಿಮ್ಮ ಚರ್ಮಕ್ಕೆ ರೋಸ್ ವಾಟರ್ ಅನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.