Pine Apple Face Pack: ಅನಾನಸ್ ಫೇಸ್ ಪ್ಯಾಕ್ ಮುಖದಲ್ಲಿನ ಕಲೆಗಳು ಹಾಗೂ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ನಾವೆಲ್ಲರೂ ಹೊಳೆಯುವ ಚರ್ಮ ಬೇಕೆಂದು ಬಯಸುವುದು ಸಹಜ. ಹೀಗಾಗಿ, ಅನೇಕರು ದುಬಾರಿ ಉತ್ಪನ್ನಗಳನ್ನು ಕರೀದಿಸಿ ಮುಖಕ್ಕೆ ಹಚ್ಚುತ್ತಾರೆ. ಆದರೆ ಎಷ್ಟೇ ಹಣ ಕರ್ಚು ಮಾಡದರೂ ಕೂಡ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅದರಿಂದಾಗಿಯೇ ನಿಮಗಾಗಿ ಒಂದು ಫೇಸ್ ಪ್ಯಾಕ್ ಐಡಿಯಾ ಇಲ್ಲಿದೆ...
ಅನಾನಸ್ ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಅನಾನಸ್ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಇದನ್ನೂ ಓದಿ: ಈ ಒಂದು ಎಣ್ಣೆ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ರಾಮಬಾಣ..!
ಕಲೆಗಳನ್ನು ಹೋಗಲಾಡಿಸಿ:
ಅನಾನಸ್ ಮುಖದ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಅನಾನಸ್ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಆರಿದ ನಂತರ ನೀರಿನಿಂದ ತೊಳೆಯಿರಿ.
ವಯಸ್ಸಾಗುವುದನ್ನು ತಡೆಯಿರಿ:
ನೀವು ಚಿಕ್ಕವರಾಗಿ ಕಾಣಬೇಕೆಂದರೆ, ಅನಾನಸ್ ಫೇಸ್ ಪ್ಯಾಕ್ ಅನ್ನು ಆಗಾಗ್ಗೆ ಬಳಸಿ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿದ್ದು ಅದು ಚರ್ಮಕ್ಕೆ ಹಾನಿ ಮಾಡುವ ಗುಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಚಹಾ ಸೇವನೆಯಿಂದ ನಿಮ್ಮ ಚರ್ಮ ಒಳಗಿನಿಂದ ಕಾಂತಿಯುತವಾಗಿ ಕಾಣುತ್ತದೆ..!
ಮೊಡವೆ:
ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನಾನಸ್ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು. ಇದಕ್ಕಾಗಿ, ಅನಾನಸ್, ಎರಡು ಚಮಚ ಜೇನುತುಪ್ಪ ಮತ್ತು 3 ಚಮಚ ಗ್ರೀನ್ ಟೀಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಪೇಸ್ಟ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ಹತ್ತು ನಿಮಿಷಳ ನಂತರ ಮುಖ ತೊಳೆಯಿರಿ.
ಹೊಳೆಯುವ ಚರ್ಮ:
ನಿಮ್ಮ ಮುಖವು ಹೊಳೆಯುತ್ತಿರಬೇಕಾದರೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್ ಅನ್ನು ಬಳಸಿ. ಇದು ಮುಖದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಅನಾನಸ್ ಹಣ್ಣನ್ನು , ಕಡಲೆಹಿಟ್ಟು, ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಹೊಳೆಯುತ್ತಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.