Kitchen Tips: ಗೃಹಶೋಭೆಯಲ್ಲಿ ಅಡುಗೆ ಮನೆಯ ವ್ಯವಸ್ಥೆ ಹೀಗಿರಲಿ: ಇಲ್ಲಿದೆ ಕೆಲ ಟಿಪ್ಸ್
ನಿಮ್ಮ ಮನೆಯ ಅಡುಗೆ ಕೋಣೆಯನ್ನು ಮಾಡರ್ನ್ ಎನ್ನಿಸುವ ಸಾಮಗ್ರಿಗಳಿಂದ ಅಲಂಕರಿಸಿ. ಅವುಗಳು ಅಡುಗೆಮನೆಯ ಅಂದವನ್ನು ಹೆಚ್ಚಿಸಿ ನೋಟ ಬದಲಿಸುತ್ತದೆ. ಅಲಂಕಾರಿಕ ದೀಪಗಳು, ಕಪ್-ಸಾಸರ್, ಅಡುಗೆ ಸಾಮಗ್ರಿ ಸೆಟ್‌ಗಳು, ದೀಪಗಳು, ಪೇಂಟ್ ಹೀಗೆ ಹಲವಾರು ವಿನ್ಯಾಸದಿಂದ ಅಡುಗೆಮನೆಗೆ ಭಿನ್ನ ನೋಟ ಸಿಗುವಂತೆ ಮಾಡಬಹುದು. ಇನ್ನು ಹಬ್ಬದ ಸಮಯಗಳಲ್ಲಿ ಅನೇಕ ಆಫರ್‌ಗಳು ಮಾರುಕಟ್ಟೆಯಲ್ಲಿ ನಡೆಯುತ್ತದೆ. ಆ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅಡುಗೆ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಮನೆಯೆಂದರೆ ಮೊದಲು ನೆನಪಿಗೆ ಬರುವುದು ಅಡುಗೆ ಮನೆ. ಕಾರಣ ಮೆಚ್ಚಿನ ಆಹಾರ ತಯಾರಾಗುವ ಪ್ರೀತಿಯ ಸ್ಥಳವದು. ಹೀಗಾಗಿ ಅಡುಗೆ ಮನೆಯನ್ನು ಸುಂದರವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆಯಲ್ಲಿ ವಿಧವಿಧವಾದ ಡಿಸೈನ್‌ಗಳು ಬಂದಿವೆ. ಜೊತೆಗೆ ಅವುಗಳ ಸ್ವಚ್ಛತೆ, ಅಂದಚಂದ ಹೆಚ್ಚಳ ಮಾಡುವಂತಹ ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನಿಮ್ಮ ಮನೆಯ ಅಡುಗೆ ಕೋಣೆಯನ್ನು ಮಾಡರ್ನ್ ಎನ್ನಿಸುವ ಸಾಮಗ್ರಿಗಳಿಂದ ಅಲಂಕರಿಸಿ. ಅವುಗಳು ಅಡುಗೆಮನೆಯ ಅಂದವನ್ನು ಹೆಚ್ಚಿಸಿ ನೋಟ ಬದಲಿಸುತ್ತದೆ. ಅಲಂಕಾರಿಕ ದೀಪಗಳು, ಕಪ್-ಸಾಸರ್, ಅಡುಗೆ ಸಾಮಗ್ರಿ ಸೆಟ್‌ಗಳು, ದೀಪಗಳು, ಪೇಂಟ್ ಹೀಗೆ ಹಲವಾರು ವಿನ್ಯಾಸದಿಂದ ಅಡುಗೆಮನೆಗೆ ಭಿನ್ನ ನೋಟ ಸಿಗುವಂತೆ ಮಾಡಬಹುದು. ಇನ್ನು ಹಬ್ಬದ ಸಮಯಗಳಲ್ಲಿ ಅನೇಕ ಆಫರ್‌ಗಳು ಮಾರುಕಟ್ಟೆಯಲ್ಲಿ ನಡೆಯುತ್ತದೆ. ಆ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅಡುಗೆ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಇದನ್ನು ಓದಿ: ಈ ದಿನಾಂಕದಂದು ಜನಿಸಿದವರ ವೈವಾಹಿಕ ಜೀವನದಲ್ಲಿ ಎದುರಾಗಲಿದೆ ಸಮಸ್ಯೆ ..!
ಕಾಫಿ ಕಪ್, ಚಮಚ–ಸೌಟುಗಳು, ಸಾಸರ್‌ಗಳು ಮುಂತಾದ ಅಡುಗೆ ಮನೆಯ ಪರಿಕರಗಳು ಯಾವಾಗಲೂ ಅಡುಗೆ ಮನೆಯ ಅಂದವನ್ನು ಹೆಚ್ಚಿಸುತ್ತವೆ ಎಂದರೆ ತಪ್ಪಾಗಲಾರದು. ಬಣ್ಣ ಬಣ್ಣದ ಹಾಗೂ ಗಾಢ ಹೊಳಪಿನ ಅಡುಗೆ ಮನೆಯ ವಸ್ತುಗಳು ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಮನೆಯ ಹಾಲ್ ಹಾಗೂ ಬೆಡ್‌ರೂಮ್, ಲೀವಿಂಗ್ ರೂಮ್ ಮಾತ್ರವಲ್ಲ ಅಡುಗೆ ಕೋಣೆಯಲ್ಲೂ ಅಲಂಕಾರಿಕ ವಸ್ತುಗಳನ್ನು ಇರಿಸುವ ಮೂಲಕ ಅಂದವನ್ನು ಹೆಚ್ಚಿಸಬಹುದು. ಅಂದದ ಗಾಜಿನ ಟೀ- ಕಾಫಿ ಕೆಟಲ್, ಚಮಚದ ಸ್ಟ್ಯಾಂಡ್ ಮುಂತಾದವುಗಳನ್ನು ಖರೀದಿಸುವ ಮೂಲಕ ಅಡುಗೆ ಕೋಣೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.
ಇದನ್ನು ಓದಿ: ವರ್ಷ ಪೂರ್ತಿ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ
ಇನ್ನು ಇತ್ತೀಚಿನ ದಿನಗಳಲ್ಲಿ ಬಾನ್ಸಾಯ್ ಟ್ರೀ (ಕುಬ್ಜ ಮರ)ಗಳು ಹೆಚ್ಚು ಪ್ರಚಲಿತ ಪಡೆದುಕೊಂಡಿದೆ. ಅವುಗಳನ್ನು ಮನೆಯ ಮುಂಭಾಗದಲ್ಲಿ, ಗಾರ್ಡನ್‌ಗಳಲ್ಲಿ ಮಾತ್ರ ಬಳಕೆ ಮಾಡದೆ ಅಡುಗೆ ಕೋಣೆಯಲ್ಲೂ ಉಪಯೋಗಿಸಬಹುದು. ಇವುಗಳು ಹೆಚ್ಚಿನ ಅಂದವನ್ನು ನೀಡುತ್ತದೆ. ಜೊತೆಗೆ ಔಷಧೀಯ ಗುಣಗಳುಳ್ಳ ಗಿಡಗಳನ್ನು ಸಹ ಬೆಳೆಸಬಹುದು. ಆದರೆ ಅಡುಗೆಮನೆಯಲ್ಲಿ ನೇತು ಹಾಕುವ ಗಿಡಗಳನ್ನು ಇಡದೇ ಇರುವುದು ಸೂಕ್ತ. ಇವು ಸೀಲಿಂಗ್‌ನ ಅಂದವನ್ನು ಕೆಡಿಸುತ್ತವೆ.
ಅಡುಗೆ ಮನೆಯಿಂದ ಕರಿದ, ಹುರಿದ ವಾಸನೆ ಬರುವುದು ಸಹಜ. ಇದನ್ನು ಸದಾ ಸ್ವಚ್ಛವಾಗಿಟ್ಟುಕೊಂಡರೂ ವಾಸನೆ ಅಡುಗೆ ಮನೆಯನ್ನು ಅಂದವನ್ನು ಹಾಳು ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಕಾಂಪ್ಯಾಕ್ಟ್ ಡಿಫ್ಯೂಸರ್ ಅಥವಾ ಪರಿಮಳ ಬೀರುವ ವಸ್ತುಗಳನ್ನು ಇರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.