ವರ್ಷ ಪೂರ್ತಿ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ

ಈ ವರ್ಷ, ಅನೇಕ ಅಪರೂಪದ ಯೋಗಗಳು ರೂಪುಗೊಳ್ಳುತ್ತದೆ. ಕಳೆದ ಒಂದೂವರೆ ಸಾವಿರ ವರ್ಷಗಳಲ್ಲಿ ಕಾಣದ ಯೋಗಗಳು ಈ ಬಾರಿ ರೂಪುಗೊಳ್ಳಲಿವೆ  

Written by - Ranjitha R K | Last Updated : Apr 7, 2022, 09:14 AM IST
  • ನವ ಸಂವತ್ಸರ ಏಪ್ರಿಲ್ 2 ರಿಂದ ಪ್ರಾರಂಭವಾಗಿದೆ.
  • ಹೊಸ ವರ್ಷದ ರಾಜ ಶನಿ ಮತ್ತು ಮಂತ್ರಿ ಗುರು
  • ಒಂದೂವರೆ ಸಾವಿರ ವರ್ಷಗಳಲ್ಲಿ ಕಾಣದ ಯೋಗಗಳು ಈ ಬಾರಿ ರೂಪುಗೊಳ್ಳಲಿವೆ
ವರ್ಷ ಪೂರ್ತಿ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ title=
shani transit 2022 (file photo)

ಬೆಂಗಳೂರು : ನವ ಸಂವತ್ಸರ ಏಪ್ರಿಲ್ 2 ರಿಂದ ಪ್ರಾರಂಭವಾಗಿದೆ. ವೈದಿಕ ಪಂಚಾಂಗದ ಪ್ರಕಾರ, ಈ ಹೊಸ ವರ್ಷದ ಅಧಿಪತಿ ಶುಕ್ರ ದೇವ (Venus) ಮತ್ತು ಹಿಂದೂ ಹೊಸ ವರ್ಷದ ರಾಜ ಶನಿ (Shani deva)ಮತ್ತು ಮಂತ್ರಿ ಗುರುವಾಗಿರುತ್ತಾರೆ. ಈ ವರ್ಷ, ಅನೇಕ ಅಪರೂಪದ ಯೋಗಗಳು ರೂಪುಗೊಳ್ಳುತ್ತದೆ. ಕಳೆದ ಒಂದೂವರೆ ಸಾವಿರ ವರ್ಷಗಳಲ್ಲಿ ಕಾಣದ ಯೋಗಗಳು ಈ ಬಾರಿ ರೂಪುಗೊಳ್ಳಲಿವೆ. ಹೀಗಾಗಿ ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ. 

ಧನು ರಾಶಿ  : ಹಿಂದೂ ಹೊಸ ವರ್ಷವು ನಿಮಗೆ ಅದೃಷ್ಟವನ್ನು ನೀಡುತ್ತದೆ. ಈ ವರ್ಷದ ರಾಜ ಶನಿದೇವನಾಗಿದ್ದು (Shani deva), ಏಪ್ರಿಲ್ 29 ರಂದು ಶನಿ ಕುಂಭ ರಾಶಿಗೆ (Aquarius)ಸಾಗುತ್ತಾನೆ. ಈ ಸಂದರ್ಭದಲ್ಲಿ ಧನು ರಾಶಿಯವರಿಗೆ ಶನಿ ಸಾಡೇಸಾತಿ (Shani Sadesathi) ಅಥವಾ ಏಳೂವರೆ  ವರ್ಷದ ಶನಿಯಿಂದ ಮುಕ್ತಿ ಸಿಗಲಿದೆ. ಇದರೊಂದಿಗೆ ಈ ರಾಶಿಯವರ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸಬಹುದು. ವ್ಯಾಪಾರದಲ್ಲಿ ಲಾಭವಾಗಬಹುದು. 

ಇದನ್ನೂ ಓದಿ : Budh Gochar: 24 ಗಂಟೆಗಳಲ್ಲಿ ಬದಲಾಗಲಿದೆ ಈ 3 ರಾಶಿಯವರ ಭವಿಷ್ಯ

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶನಿದೇವನ ವಿಶೇಷ ಕೃಪೆ ಇರುತ್ತದೆ. ಶನಿ ದೇವನು ಕುಂಭ ರಾಶಿಗೆ ಪ್ರವೇಶ ಮಾಡಿದ ತಕ್ಷಣ, ಈ ರಾಶಿಯವರು ಶನಿ ಧೈಯ್ಯಾದಿಂದ (Shani dhaiyya) ಮುಕ್ತಿ ಪಡೆಯಲಿದ್ದಾರೆ. ಇದಾದ ಮೇಲೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಪಾರ ಯಶಸ್ಸು ಸಿಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಒಳ್ಳೆಯ ಸುದ್ದಿ ಪಡೆಯಬಹುದು. 

ತುಲಾ : ಪ್ರಸ್ತುತ ತುಲಾ ರಾಶಿಯವರಿಗೆ (Libra) ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿದೆ. ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿದ ತಕ್ಷಣ ತುಲಾ ರಾಶಿಯವರಿಗೆ ಶನಿ ಧೈಯ್ಯಾದಿಂದ ಮುಕ್ತಿ ಸಿಗಲಿದೆ. ಏಪ್ರಿಲ್ 29 ರಂದು ಶನಿಯ ರಾಶಿ ಬದಲಾವಣೆಯಾಗಲಿದೆ.  ಶನಿ ಧೈಯದಿಂದ ಮುಕ್ತಿ ಪಡೆದ ತಕ್ಷಣ ನಿಮ್ಮ ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ರಾಶಿಚಕ್ರದ ಅಧಿಪತಿ ಶುಕ್ರ (Venus). ಶುಕ್ರ ಮತ್ತು ಶನಿಯ ನಡುವೆ ಸ್ನೇಹದ ಭಾವವಿದೆ. ಆದ್ದರಿಂದ, ಹಿಂದೂ ಹೊಸ ವರ್ಷವು ನಿಮಗೆ ಅದೃಷ್ಟವಾಗಿ ಪರಿಣಮಿಸಲಿದೆ. 

ಇದನ್ನೂ ಓದಿ : Vastu Shastra: ಈ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ಕಾಡುತ್ತೆ ಹಣದ ಕೊರತೆ

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News