ಸಂಗಾತಿ ಜೊತೆ ಜಗಳವಾಡದೇ ಇರಲು ಈ ʼ5ʼ ಮಾರ್ಗಗಳನ್ನು ಅನುಸರಿಸಿ ಸಾಕು..!
Relationship Tips : ಸಂಬಂಧಗಳಲ್ಲಿ ಸರಸ ವಿರಸ ಇರಲೇಬೇಕು. ಆದ್ರೆ ವಿರಸ ಹೆಚ್ಚಾಗಬಾರದು. ನಿಮ್ಮ ಪ್ರೀತಿಪಾತ್ರರ ಜೊತೆ ಜಗಳವಾಡುತ್ತೀರಾ..? ಪರವಾಗಿಲ್ಲ, ಇನ್ನು ಮುಂದೆ ಈ ಸಲಹೆಗಳನ್ನು ಪಾಲಿಸಿ ಅವರ ಜೊತೆ ಸಂತೋಷವಾಗಿರಿ.
Relationship Tips in Kannada : ಪ್ರೀತಿಯ ವಿಷಯಕ್ಕೆ ಬಂದರೆ ಅಥವಾ ಪ್ರೀತಿಯೊಂದಿಗೆ ಬೆರೆತಿರುವ ಯಾವುದೇ ಸಂಬಂಧದಲ್ಲಿ, ಯಾವಾಗಲೂ ಜಗಳಗಳು ಮತ್ತು ವಾದಗಳು ಇದ್ದೇ ಇರುತ್ತವೆ. ಇದು ಸಾಮಾನ್ಯ ಎಂದು ನೆನಪಿನಲ್ಲಿಟ್ಟುಕೊಂಡು, ನಿಮ್ಮ ಪ್ರೀತಿಪಾತ್ರರನ್ನು ನೀವು ಹೇಗೆ ಶಾಂತಗೊಳಿಸಬಹುದು ಎಂಬುದರ ಕುರಿತು ನೀವು ಮೊದಲು ಯೋಚಿಸಬೇಕು. ಬನ್ನಿ ಈ ಕುರಿತು ನಾವು ನಿಮಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡುತ್ತೇವೆ.
ಪ್ರೇಮಿಗಳ ನಡುವೆ ಜಗಳವಿಲ್ಲದೆ ಯಾವುದೇ ಪ್ರಣಯ ಸಂಬಂಧ ಪರಿಪೂರ್ಣವಲ್ಲ. ಕೆಲವೊಮ್ಮೆ ನಾವು ನಮಗೆ ಅರಿವಿಲ್ಲದೆ ನಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತೇವೆ. ಇದು ಕೆಲವೊಮ್ಮೆ ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಅವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ನಿಮ್ಮ ನಡುವೆ ನಡೆದ ಯಾವುದೋ ಒಂದು ವಿಷಯಕ್ಕೆ ಅವರು ನಿಮ್ಮ ಮೇಲೆ ಕೋಪಗೊಂಡಿದ್ದರೆ ಅವರನ್ನು ಶಾಂತಗೊಳಿಸುವ ಕೆಲವು ವಿಧಾನಗಳು ಇಲ್ಲಿವೆ. ಇದನ್ನು ಬಳಸಿಕೊಳ್ಳಿ.
ಇದನ್ನೂ ಓದಿ: ಹೃದಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ, ಡಯಾಬಿಟಿಸ್ ರೋಗಿಗಳು ಈ ರೀತಿ ತೂಕ ಇಳಿಕೆ ಮಾಡಿಕೊಳ್ಳಬಹುದು!
ಮಾತನಾಡಿ : ನಿಮ್ಮ ಗೆಳೆಯ ಅಥವಾ ಗೆಳತಿ ಇದ್ದಕ್ಕಿದ್ದಂತೆ ಮಾತನಾಡುವುದನ್ನು ನಿಲ್ಲಿಸಿದರೆ, ಏಕೆ ಎಂದು ಕೇಳಿ. ಅವರು ಮೊದಲು ಕೋಪಗೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಯಾಕೆ ಈ ಕೋಪ? ನಿನಗೇಕೆ ನನ್ನ ಮೇಲೆ ಕೋಪ? ಇದನ್ನು ಸರಿ ಮಾಡಲು ನಾನು ಏನು ಮಾಡಬಹುದು ಎಂಬಂತಹ ಪ್ರಶ್ನೆಗಳನ್ನು ಕೇಳಿ. ನೀವು ತಪ್ಪು ಎಂದು ನಿಮಗೆ ತಿಳಿದಿದ್ದರೆ, ಹಿಂಜರಿಕೆಯಿಲ್ಲದೆ ಕ್ಷಮೆಯನ್ನು ಕೇಳಿ.
ಸಮಯ ನೀಡಿ : ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಅಸಮಾಧಾನಗೊಂಡಿರುವ ಕಾರಣ ನಿಮ್ಮೊಂದಿಗೆ ಮಾತನಾಡದಿದ್ದರೆ, ಅದು ಏನೆಂದು ಅವರನ್ನು ಕೇಳಿ. ಒಂದು ವೇಳೆ ಅವರು ʼನನ್ನನ್ನು ಸ್ವಲ್ಪ ಸಮಯ ಬಿಟ್ಟುಬಿಡು..ʼ ಅಂತ ಹೇಳಿದ್ರೆ, ಸ್ವಲ್ಪ ಸಮಯ ಅವರಿಂದ ದೂರವಿರಿ. "ನೀನು ಬಂದು ಮಾತಾಡಿದಾಗಲೆಲ್ಲ ನಾನಿದ್ದೇನೆ..:" ಎಂದು ಪ್ರೀತಿಯ ಭಾಷೆ ನೀಡಿ. ಸುಲಭವಾಗಿ ಕೋಪ ಕರಗುತ್ತದೆ.
ಆಲಿಸಿ : ಕೋಪ ಕಡಿಮೆಯಾದ ಗೆಳೆಯ ಅಥವಾ ಗೆಳತಿ ಖಂಡಿತವಾಗಿಯೂ ನಿಮ್ಮೊಂದಿಗೆ ಮಾತನಾಡಲು ಬರುತ್ತಾರೆ. ಆಗ ನೀವು ಅವರಿಗೆ ನಿಮ್ಮ ಸಂಪೂರ್ಣ ಗಮನವನ್ನು ನೀಡಿ, ಅವರು ಹೇಳುವುದನ್ನು ಆಲಿಸಿ. ಅವರು ಏನೇ ಹೇಳಿದರೂ ಅಡ್ಡಿಪಡಿಸಬೇಡಿ, ಮಾತನಾಡುವುದಕ್ಕೆ ಬಿಡಿ. ಕೋಪಗೊಂಡಾಗ ನಿಮಗೆ ಏನಾದರೂ ನೋವುಂಟುಮಾಡಿದರೆ, ಅದನ್ನು ಅವನಿಗೆ ಸ್ಪಷ್ಟಪಡಿಸಿ. ತಿಳಿ ಹೇಳಲು ಪ್ರಯತ್ನಿಸಿ
ಇದನ್ನೂ ಓದಿ: ಈ ಆಯುರ್ವೇದ ಮೂಲಿಕೆ ಕೂದಲು ಉದುರುವಿಕೆಯಿಂದ ಮುಕ್ತಿ ನೀಡುತ್ತದೆ
ಭಾವನೆಗಳಿಗೆ ಬೆಲೆ ಕೊಡಿ : ನಿಮ್ಮ ಗೆಳೆಯ ಅಥವಾ ಗೆಳತಿ ಯಾವುದೇ ಕಾರಣವಿಲ್ಲದೆ ಕೋಪಗೊಂಡಿದ್ದಾರೆ ಎಂದು ನೀವು ಭಾವಿಸಬಹುದು. ಆದರೆ, ನೀವು ಅವರ ಸ್ಥಾನದಲ್ಲಿಲ್ಲ. ಆದ್ದರಿಂದ, ಅವರು ಎಷ್ಟು ನೋವು ಅನುಭವಿಸುತ್ತಿದ್ದಾರೆ ಮತ್ತು ಏಕೆ ಕೋಪಗೊಂಡಿದ್ದಾರೆ ಎಂದು ನಿಮಗೆ ಅರ್ಥವಾಗುವುದಿಲ್ಲ. ಅವರ ಭಾವನೆಗಳ ಬಗ್ಗೆ ಮಾತನಾಡುವಾಗ, 'ಇದೆಲ್ಲ ವಿಷಯವೇ..' ಎಂದು ಹೇಳಿದರೆ ಅವರಿಗೆ ನೋವಾಗುತ್ತದೆ. ಆದ್ದರಿಂದ, ಅವರ ಭಾವನೆಗಳಿಗೆ ಬೆಲೆ ಕೊಡಿ.
ಕ್ಷಮೆಯಾಚಿಸಿ : ನಿಮ್ಮ ಗೆಳೆಯ ಅಥವಾ ಗೆಳತಿ ಕೋಪಗೊಳ್ಳಲು ನೀವೇ ಕಾರಣ ಎಂದು ನಿಮಗೆ ತಿಳಿದಿದ್ದರೆ, ಕ್ಷಮೆಯಾಚಿಸಲು ಹಿಂದೆ ಮುಂದೆ ನೋಡಬೇಡಿ. ನಿಮ್ಮ ಕಡೆಯಿಂದ ತಪ್ಪಿದ್ದರೆ ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗಬೇಡಿ. ಉದ್ದೇಶಪೂರ್ವಕವಲ್ಲದ ತಪ್ಪಿಗೆ ನೀವು ಮಾನಸಿಕವಾಗಿ ಕ್ಷಮೆಯಾಚಿಸಿದರೆ, ನಿಮ್ಮ ಗೆಳತಿ ಅಥವಾ ಗೆಳೆಯ ನಿಮ್ಮನ್ನು ಸಂಪೂರ್ಣವಾಗಿ ಕ್ಷಮಿಸುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ