Narak Chaturdashi 2022 Date:  ನರಕ ಚತುರ್ದಶಿಯ ದಿನ   ಯಮರಾಜನನ್ನು ಪೂಜಿಸಲಾಗುತ್ತದೆ. ಈ ದಿನದಂದು ಯಮರಾಜನನ್ನು ಪೂಜಿಸುವುದರಿಂದ ವ್ಯಕ್ತಿಯನ್ನು ಅಕಾಲಿಕ ಮರಣದ ಭಯ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ. ಅಂದಹಾಗೆ, ಈ ದಿನ ಹಳೆಯ ದೀಪವನ್ನು ಬೆಳಗಿಸುವ ಸಂಪ್ರದಾಯವಿದೆ. ಹಳೆಯ ದೀಪ ಇಲ್ಲ ಎಂದಾದರೆ ಹೊಸ ದೀಪವನ್ನು ಕೂಡಾ ಬೆಳಗಬಹುದು. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಅಕ್ಟೋಬರ್ 24 ರಂದು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಯಮನನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಕಾಲಿಕ ಮರಣದ ಅಪಾಯ ತಪ್ಪಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು  ಭೂಲೋಕದಲ್ಲಿ ಮಾಡುವ ಪಾಪದ ಫಲ ಮರಣದ  ನಂತರ ಸಿಗುತ್ತದೆ ಎಂದು ಹೇಳಲಾಗುತ್ತದೆ. ನರಕ ಚತುರ್ದಶಿಗೆ ಸಂಬಂಧಿಸಿದ ದಂತಕಥೆಯ  ಏನು ಹೇಳುತ್ತದೆ ನೋಡೋಣ. 


ಇದನ್ನೂ ಓದಿ : Astro Tips : ಲವಂಗದ ಈ ಪರಿಹಾರ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ!


ಯಮರಾಜನಿಗೂ ನರಕ ಚತುರ್ದಶಿಗೂ ಸಂಬಂಧವಿದೆಯಂತೆ : 
ನರಕ ಚತುರ್ದಶಿಯ ದಂತಕಥೆಯ ಪ್ರಕಾರ, ರತಿ  ದೇವ್ ಎಂಬ ರಾಜನಿದ್ದನು. ಅವನು  ಧರ್ಮನಿಷ್ಠನಾಗಿದ್ದನು. ತನ್ನ ಜೀವನದಲ್ಲಿ ಯಾವ ಪಾಪವನ್ನು ಮಾದಿರಲಿಲ್ಲ. ಆದರೆ ಮರಣದ ನಂತರ ಅವನಿಗೆ ನರಕ ಪ್ರಾಪ್ತಿಯಾಗುತ್ತದೆ. ಇದನ್ನೆಲ್ಲ ನೋಡಿದ ರಾಜನಿಗೆ ತಾನು ಯಾವ ಪಾಪವನ್ನು ಮಾಡದೇ ಹೋದರೂ ನರಕಕ್ಕೆ ಬಂದಿರುವ ಕಾರಣ ತಿಳಿಯುವುದಿಲ್ಲ. ಆತ ಈ ಬಗ್ಗೆ ಯಮದೂತನನ್ನು ಪ್ರಶ್ನಿಸುತ್ತಾನೆ.   ಇದಕ್ಕೆ ಪ್ರತಿಕ್ರಿಯಿಸಿದ  ಯಮ ದೂತ , ಒಮ್ಮೆ ಹಸಿವಿನಿಂದ ನಿಮ್ಮ ದ್ವಾರಕ್ಕೆ ಬಂದ ಬ್ರಾಹ್ಮಣನನ್ನು ಬರೀ ಗೈಯ್ಯಲ್ಲಿ ಹಿಂದೆ ಕಳುಹಿಸಿದ್ದಿ. ಇದು ಅದೇ ಕರ್ಮದ ಫಲ ಎಂದು ನುಡಿಯುತ್ತಾನೆ.


ಇದನ್ನು ಕೇಳಿದ ರಾಜ,  ತನಗೆ ಒಂದು ವರ್ಷಗಳ ಸಮಯಾವಕಾಶ ನೀಡುವಂತೆ ಕೋರುತ್ತಾನೆ. ನಂತರ ತನ್ನ ಸಮಸ್ಯೆಗಳನ್ನು ಋಷಿ ಮುನಿಗಳಿಗೆ ತಿಳಿಸುತ್ತಾನೆ. ಇದಾದ ನಂತರ ಋಷಿಗಳು ಕಾರ್ತಿಕ ಮಾಸದ ಚತುರ್ದಶಿಯಂದು ಉಪವಾಸವನ್ನು ಆಚರಿಸುವಂತೆ ಸೂಚಿಸುತ್ತಾರೆ. ಮಾತ್ರವಲ್ಲ ಈ ಸಮಯದಲ್ಲಿ ಬ್ರಾಹ್ಮಣರನ್ನುಕರೆದು  ಬೋಜನ ಮಾಡಿಸಿ ಕ್ಷಮೆಯಾಚಿಸುವಂತೆ ಸೂಚಿಸುತ್ತಾರೆ.  ರಾಜ ಋಷಿ ಮುನಿಗಳು ಹೇಳಿದಂತೆ ನಡೆದುಕೊಳ್ಳುತ್ತಾನೆ. ಒಂದು ವರ್ಷದ ನಂತರ ಮತ್ತೆ ಯಮದೂತ ಬಂದು ರಾಜನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಈ ಬಾರಿ ರಾಜನಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಅಂದಿನಿಂದ ಕಾರ್ತಿಕ ಮಾಸದ ಚತುರ್ದಶಿಯಂದು ದೀಪ ಬೆಳಗಿಸುವ ಸಂಪ್ರದಾಯ ಪ್ರಾರಂಭವಾಯಿತು. ಇದರಿಂದ ನಾವು ಮಾಡಿದ ಪಾಪಗಳಿಗೆ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. : 


ಇದನ್ನೂ ಓದಿ : ದೀಪಾವಳಿಗೂ ಮುನ್ನವೇ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಲಕ್ಷ್ಮೀ .. ! ಎರಡೂವರೆ ವರ್ಷ ಎದುರಾಗುವುದಿಲ್ಲ ಆರ್ಥಿಕ ಸಮಸ್ಯೆ


ನರಕ ಚತುರ್ದಶಿ ಪೂಜೆಯ ಮಹತ್ವ :
ನರಕ ಚತುರ್ದಶಿಯನ್ನು ಯಮ ಚತುರ್ದಶಿ, ರೂಪ ಚೌದಾಸ್, ರೂಪ ಚತುರ್ದಶಿ  ಎಂದು ಕರೆಯಲಾಗುತ್ತದೆ. ಈ ದಿನ ಯಮರಾಜನನ್ನು ಪೂಜಿಸುವುದರಿಂದ ದೀರ್ಘಾಯುಷ್ಯ ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಹಳೆಯ ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ. ಈ ದಿನ ಯಮನ ಹೆಸರಿನ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಬೆಳಗಿಸಲಾಗುತ್ತದೆ. ನಿಮ್ಮ ಬಳಿ ಹಳೆಯ ದೀಪವಿಲ್ಲದಿದ್ದರೆ, ನೀವು ಹೊಸ ದೀಪವನ್ನು ಕೂಡಾ ಬೆಳಗಿಸಬಹುದು. ಈ ದಿನ ಸಾಸಿವೆ ಎಣ್ಣೆಯ ದೀಪವನ್ನು ಮಾತ್ರ ಬೆಳಗಿಸಲಾಗುತ್ತದೆ ಮತ್ತು ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.