ಬೆಂಗಳೂರು : ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ. ಹೊಸ ವರ್ಷವನ್ನು ಸ್ವಾಗತಿಸಲು ಜನ ಕೂಡಾ ಉತ್ಸುಕರಾಗಿದ್ದಾರೆ. ಹೊಸ ವರ್ಷದ ಸಂತೋಷದ ಹೊನಲು ಹೊತ್ತು ತರಲಿ ಎನ್ನುವುದೇ ಎಲ್ಲರ ಆಶಯ. ಈ ಆಶಯದೊಂದಿಗೆ ದೇವಾನುದೇವತೆಗಳ ಆರಾಧನೆಯೊಂದಿಗೆ ಜನರು ಹೊಸ ವರ್ಷವನ್ನು ಆರಂಭಿಸುತ್ತಾರೆ. ದೇವರ ಆಶೀರ್ವಾದದಿಂದ  ಇಡೀ ವರ್ಷ ಸುಖಮಯವಾಗಿ ನಡೆಯಲಿ ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ.


COMMERCIAL BREAK
SCROLL TO CONTINUE READING

 ಹೊಸ ವರ್ಷದಲ್ಲಿ ಲಕ್ಷ್ಮೀ ದೇವಿ ಕೃಪೆಗೆ ಹೇಗೆ ಪಾತ್ರರಾಗುವುದು ಎನ್ನುವುದನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದರಲ್ಲಿ ಮುಖ್ಯವಾದದ್ದು ಶುಚಿತ್ವ. ಲಕ್ಷ್ಮೀ ಕೃಪೆ ಸಿಗಬೇಕಾದರೆ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೊಸ ವರ್ಷ ಪ್ರಾರಂಭವಾಗುವ ಮೊದಲು, ಸಂಪತ್ತಿನ ಅಧಿದೇವತೆಯ ಕೃಪೆ ಸಿಗಬೇಕಾದರೆ ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೀಗೆ ಮನೆ ಸ್ವಚ್ಚಗೊಳಿಸುವಾಗ ಈ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ಬಹಳ ಮುಖ್ಯ.  


ಇದನ್ನೂ ಓದಿ :  Remedies For Mercury: ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು ಸರಳ ಸಲಹೆಗಳು


ಕೆಟ್ಟು ನಿಂತಿರುವ ಗಡಿಯಾರ : 
ಸಾಮಾನ್ಯವಾಗಿ ಜನರು ಕೆಲವೊಂದು ವಸ್ತುಗಳನ್ನು ಕೆಟ್ಟ ನಂತರವೂ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ವಾಸ್ತು ಪ್ರಕಾರ ಈ ರೀತಿ ಮಾಡುವುದು ಸರಿಯಲ್ಲ.  ಮುಖ್ಯವಾಗಿ ಕೆಟ್ಟು ನಿಂತ ಗಡಿಯಾರವನ್ನು ಯಾವುದೇ ಕಾರಣಕ್ಕೂ ಮನೆಯ ಒಳಗೆ ಇಡಬಾರದು. ಅದನ್ನು ಕೂಡಲೇ ಮನೆಯಿಂದ ಹೊರ ಹಾಕಬೇಕು. ಇಲ್ಲವಾದರೆ ಇದು ನಕಾರಾತ್ಮಕ ಶಕ್ತಿಯನ್ನು  ಉಂಟು ಮಾಡುತ್ತದೆ. ಕೆಟ್ಟು ನಿಂತಿರುವ ಗಡಿಯಾರ ಮನೆಯಲ್ಲಿದ್ದರೆ ಇದು ಇಡೀ ವರ್ಷ ಅಶುಭ ಫಲವನ್ನು ನೀಡುತ್ತದೆ. 


ಮುರಿದ ಪೀಠೋಪಕರಣಗಳು :
ಮನೆಯಲ್ಲಿರುವ ಮೇಜು, ಸೋಫಾ, ಕುರ್ಚಿ ಮುಂತಾದ ಪೀಠೋಪಕರಣಗಳು ಮುರಿದು ಹೋಗಿದ್ದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮುರಿದ ಫರ್ನೀಚರ್ ಗಳಿದ್ದರೆ ತಕ್ಷಣ ಅವುಗಳನ್ನು ಮನೆಯಿಂದ ಹೊರ ಹಾಕಿ. ಕೆಟ್ಟ ಪೀಠೋಪಕರಣಗಳು ಮನೆಗೆ ದುರಾದೃಷ್ಟವನ್ನು ಹೊತ್ತು ತರುತ್ತವೆ ಎನ್ನುವುದು ನಂಬಿಕೆ.  ಹೀಗಾಗಿ ಮನೆಯಲ್ಲಿರುವ ಫರ್ನೀಚರ್ ಗಳು ಸುಸ್ಥಿತಿಯಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. 


ಇದನ್ನೂ ಓದಿ :  ಕನಸಿನಲ್ಲಿ ಹಣ ಕಾಣಿಸುತ್ತಿದೆಯೇ ? ಈ ಕನಸಿನ ಅರ್ಥವೇನು ಗೊತ್ತಾ ?


ಹಳೆಯ ಬೂಟುಗಳು  :
ಚಪ್ಪಲಿಗೂ ಶನಿದೇವನಿಗೂ ಸಂಬಂಧವಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಮನೆಯಲ್ಲಿ ಹಳೆಯ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡುವುದು ಅಶುಭವೆಂದು ಹೇಳಲಾಗಿದೆ. ಇದು ದರಿದ್ರವನ್ನು ಉಂಟು ಮಾಡುತ್ತದೆ ಎನ್ನಲಾಗಿದೆ. ಹೀಗಿರುವಾಗ ಹೊಸ ವರ್ಷ ಆರಂಭವಾಗುವುದಕ್ಕೆ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ. 


ಮುರಿದಿರುವ ಮೂರ್ತಿಗಳು : 
ಕೆಲವರು ದೇವರು ಮತ್ತು ದೇವತೆಗಳ ಒಡೆದ ವಿಗ್ರಹಗಳನ್ನು ಮನೆಗಳಲ್ಲಿ  ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಮೂರ್ತಿ ಒಡೆದ ನಂತರ ಅದನ್ನು ದೇವರ ಮನೆಯಿಂದ ತೆಗೆದರೂ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಒಡೆದ ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಮಾತ್ರವಲ್ಲ, ಮನೆಯಲ್ಲಿಯೇ ಇಟ್ಟುಕೊಳ್ಳಬಾರದು. ನಿಮ್ಮ ಮನೆಯಲ್ಲಿ ಒಡೆದ ಮೂರ್ತಿ ಇದ್ದರೆ ಹೊಸ ವರ್ಷ ಆರಂಭಕ್ಕೆ ಮುನ್ನ ಅದನ್ನು ಮನೆಯಿಂದ ಹೊರ ಹಾಕಿ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.