ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದಕ್ಕಾಗಿ ಈ ಐದು ವಸ್ತುಗಳನ್ನು ಮನೆಗೆ ತನ್ನಿ
ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು
ಬೆಂಗಳೂರು : ಮನೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಹಣಕಾಸಿನ ಲಾಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿ ಮತ್ತು ಕುಬೇರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಆ ವ್ಯಕ್ತಿ ಶ್ರೀಮಂತನಾಗುವುದನ್ನು ಯಾರೂ ತಡೆಯುವುದು ಸಾಧ್ಯವಾಗುವುದಿಲ್ಲ. ಅಂಥವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು. ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸಂತೋಷ ಮತ್ತು ಸಮೃದ್ಧಿಯ ಬಾಗಿಲು ತೆರೆಯುತ್ತದೆ.
ಗಣೇಶ-ಲಕ್ಷ್ಮಿ-ಕುಬೇರನ ವಿಗ್ರಹ :
ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸಲು, ಲಕ್ಷ್ಮೀ ಕುಬೇರ ಮತ್ತು ಗಣೇಶನ ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಇಡಬೇಕು. ಈ ಮೂರು ದೇವರುಗಳನ್ನು ಪ್ರತಿನಿತ್ಯ ಸರಿಯಾದ ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.
ಇದನ್ನೂ ಓದಿ : ಮನೆಯ ಮುಖ್ಯ ದ್ವಾರಕ್ಕೆ ಈ ಸಸ್ಯದ ಬೇರನ್ನು ನೇತು ಹಾಕಿದರೆ ಒಲಿದು ಬರುವಳು ಭಾಗ್ಯ ಲಕ್ಷ್ಮೀ
ಕಲಶ :
ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಅಷ್ಟದಳ ಕಮಲದ ಮಂಗಲ ಕಲಶವನ್ನು ಸ್ಥಾಪಿಸಿ ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಆ ಕಲಶದಲ್ಲಿ ನೀರು ತುಂಬಿಸಿ ತಾಮ್ರದ ನಾಣ್ಯವನ್ನು ಹಾಕಿ. ಇದರ ನಂತರ ತೆಂಗಿನ ಗರಿಗಳನ್ನು ಹಾಕಿ ತೆಂಗಿನಕಾಯಿಯನ್ನು ಇಡಬೇಕು.
ಕವಡೆ :
ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಬಿಳಿ ಕವಡೆಯನ್ನು ಅರಿಶಿನ ಅಥವಾ ಕುಂಕುಮದಲ್ಲಿ ನೆನೆಸಿ ಒಣಗಿಸಿ. ಇದಾದ ನಂತರ ಆ ಕವಡೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಕಮಾನಿನಲ್ಲಿ ಇಡಿ. ಹಳದಿ ಕವಡೆಯು ಲಕ್ಷ್ಮೀ ದೇವಿಯ ಸಂಕೇತವಾಗಿದೆ. ಹೀಗೆ ಮನೆಯಲ್ಲಿ ಕವಡೆಗಳನ್ನು ಇಟ್ಟುಕೊಳ್ಳುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ.
ನಾಣ್ಯಗಳು :
ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದ ಪಡೆಯಲು ಮನೆಯ ತಿಜೋರಿಯಲ್ಲಿ ಅಥವಾ ಪರ್ಸ್ ನಲ್ಲಿ 3 ನಾಣ್ಯಗಳನ್ನು ಇರಿಸಿ. ಈ ನಾಣ್ಯಗಳನ್ನು ಕೆಂಪು ದಾರದಿಂದ ಕಟ್ಟಿ ಮನೆಯ ದೇವರ ಮನೆಯಲ್ಲಿ ನೇತು ಹಾಕಲೂ ಬಹುದು. ಈ ರೀತಿ ಮಾಡುವುದರಿಂದ ಅದೃಷ್ಟ ಒಲಿಡು ಬರುತ್ತದೆ. ಮಾತ್ರವಲ್ಲ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
ಇದನ್ನೂ ಓದಿ : ಶುಕ್ರವಾರ ತಪ್ಪದೇ ಈ ಕೆಲಸಮಾಡಿ..! ಲಕ್ಷ್ಮೀ ಒಲುಮೆ, ಸಂಪತ್ತು ವೃದ್ದಿ ಖಂಡಿತ
ಮೀನಿನ ಪ್ರತಿಮೆ :
ವಾಸ್ತು ಶಾಸ್ತ್ರದ ಪ್ರಕಾರ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯಕ್ಕಾಗಿ, ಮೀನಿನ ಬೆಳ್ಳಿಯ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು. ಈ ರೀತಿಯ ಪ್ರತಿಮೆಯು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಗೋಡೆಯ ಮೇಲೆ ಮೀನಿನ ವರ್ಣಚಿತ್ರವನ್ನು ಸಹ ಹಾಕಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.