Shani Dev: ಶನಿದೇವನನ್ನು ಸಂತೋಷಪಡಿಸಲು ಈ ಎರಡು ಕೆಲಸ ಮಾಡಿದರೆ ಸಾಕಂತೆ!
Shani Dev: ಶನಿ ದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ಜೀವಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಶನಿದೇವ ಫಲಾಫಲಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ.
ಬೆಂಗಳೂರು: ಹಿಂದೂ ಧರ್ಮಗ್ರಂಥಗಳಲ್ಲಿ ಶನಿ ದೇವನ ಮಹಿಮೆಯನ್ನು ಅಪ್ರತಿಮ ಎಂದು ವಿವರಿಸಲಾಗಿದೆ. ಆತನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಶನಿ ದೇವ ಎಲ್ಲರನ್ನು ಸಮಾನವಾಗಿ ಕಾಣುತ್ತಾನೆ. ಎಲ್ಲರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುತ್ತಾನೆ ಮತ್ತು ಅದಕ್ಕೆ ತಕ್ಕಂತೆ ಫಲಾಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.
ಪ್ರತಿ ಶನಿವಾರ ಶನಿ ದೇವನನ್ನು ಪೂಜಿಸಿ:
ಸನಾತನ ಧರ್ಮದಲ್ಲಿ ಶನಿ ದೇವನ (Shani Dev) ಈ ವೈಭವವನ್ನು ಗಮನದಲ್ಲಿಟ್ಟುಕೊಂಡು, ಅವನನ್ನು ಸಂತೋಷವಾಗಿಡುವುದು ಅಗತ್ಯವೆಂದು ಹೇಳಲಾಗಿದೆ. ಶನಿ ದೇವರನ್ನು ಪ್ರತಿ ಶನಿವಾರ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ, ಅದು ಗ್ರಹಗಳ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಶನಿ ದೇವನ ಅನಂತ ಅನುಗ್ರಹವೂ ಅವರಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತದೆ. ಶನಿ ದೇವನನ್ನು ಸಂತೋಷವಾಗಿಡಲು ಪ್ರತಿ ಶನಿವಾರ ನಾವು ಏನು ಮಾಡಬೇಕು (ಶನಿ ದೇವನನ್ನು ಹೇಗೆ ಪೂಜಿಸಬೇಕು) ಎಂದು ತಿಳಿಯೋಣ...
ಇದನ್ನೂ ಓದಿ- Saturday Tips: ಶನಿವಾರದಂದು ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗುತ್ತೆ
ಬಂಡೆಯ ಮುಂದೆ ಎಣ್ಣೆ ದೀಪವನ್ನು ಇರಿಸಿ:
ಪ್ರತಿ ಶನಿವಾರ ದೇವಸ್ಥಾನದಲ್ಲಿ (Shani Mandir) ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಈ ದೀಪವನ್ನು ಶನಿ ದೇವರ ವಿಗ್ರಹದ ಮುಂದೆ ಅಲ್ಲ, ದೇವಾಲಯದಲ್ಲಿ ಇರಿಸಲಾಗಿರುವ ಬಂಡೆ ಅಥವಾ ಶಿಲೆಯ ಮುಂದೆ ಬೆಳಗಿಸಿ. ಹತ್ತಿರದಲ್ಲಿ ಶನಿ ದೇವಾಲಯವಿಲ್ಲದಿದ್ದರೆ, ಅರಳಿ ಮರದ ಮುಂದೆ ಎಣ್ಣೆಯ ದೀಪವನ್ನು ಹಚ್ಚಿ. ಸುತ್ತಲೂ ಅರಳಿ ಮರವಿಲ್ಲದಿದ್ದರೆ, ಅಗತ್ಯವಿರುವವರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡಿ.
ಇದನ್ನೂ ಓದಿ- Shani Dev: ಮುಂದಿನ 3 ವರ್ಷ ಈ 4 ರಾಶಿಗಳ ಜಾತಕದವರಿಗೆ ಶನಿ ಶಿಕ್ಷೆಯಿಂದ ಮುಕ್ತಿ
ಅಗತ್ಯವಿರುವವರಿಗೆ ಕಪ್ಪು ವಸ್ತುಗಳನ್ನು ದಾನ ಮಾಡಿ:
ಶನಿ ದೇವನ ಆರಾಧನೆಯ ಸಮಯದಲ್ಲಿ, ಓಂ ಪ್ರಂ ಪ್ರಿಂ ಪ್ರೋಂ ಶನಿಶ್ಚರಾಯ ನಮಃ ಮಂತ್ರವನ್ನು ಪಠಿಸಿ: ನಿರಂತರವಾಗಿ. ಪೂಜೆಯ ನಂತರ, ಸಾಸಿವೆ ಎಣ್ಣೆ, ಕಪ್ಪು ಉದ್ದಿನ ಕಾಳು ಅಥವಾ ಯಾವುದೇ ಕಪ್ಪು ವಸ್ತುವನ್ನು ಬಡವರಿಗೆ ದಾನ ಮಾಡಿ. ಇದನ್ನು ದಾನ ಮಾಡಿದ ನಂತರ, ಶನಿ ಚಾಲೀಸವನ್ನು ಪಠಿಸಿ. ಇದರ ನಂತರ, ಹನುಮಾನ್ ಜಿಯನ್ನು ಪೂಜಿಸಿದ ನಂತರ, ಆತನ ವಿಗ್ರಹದ ಮೇಲೆ ಸಿಂಧೂರವನ್ನು ಹಚ್ಚಿ ಮತ್ತು ಬಾಳೆಹಣ್ಣನ್ನು ಅರ್ಪಿಸಿ. ಈ ರೀತಿ ಮಾದುವುರಿಂದ ಶನಿ ದೇವ ತನ್ನ ಭಕ್ತರಲ್ಲಿ ಸಂತಸಗೊಳ್ಳುತ್ತಾನೆ ಮತ್ತು ನಕಾರಾತ್ಮಕ ಶಕ್ತಿಯಿಂದಲೂ ಪರಿಹಾರವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ