December Planatery Transit: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಡಿಸೆಂಬರ್ 5, 2022 ರಂದು ಶುಕ್ರ   ತನ್ನ ರಾಶಿಯನ್ನು ಪರಿವರ್ತಿಸಲಿದೆ. ಸೋಮ ಪ್ರದೋಶದ ದಿನ ಧನ-ವಿಲಾಸಿತನ ನೀಡುವ ಈ ಗ್ರಹದ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಶುಭ-ಅಶುಭ ಫಲಿತಾಂಶಗಳನ್ನು ನೀಡಲಿದೆ. ಶುಕ್ರ ವೃಶ್ಚಿಕ ರಾಶಿಯಿಂದ ಹೊರಟು ಧನು ರಾಶಿಗೆ ಪ್ರವೇಶಿಸಲಿದೆ. ಬಳಿಕ ಡಿಸೆಂಬರ್ 29, 2022ರವರೆಗೆ ಶುಕ್ರ ಅದೇ ರಾಶಿಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ 5 ರಾಶಿಗಳ ಜಾತಕದವರಿಗೆ ಶುಕ್ರ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಆ ರಾಶಿಗಳು ಯಾವುದು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಈ ರಾಶಿಗಳ ಮೇಲೆ ಶುಕ್ರಗೊಚರದ ನಕಾರಾತ್ಮಕ ಪರಿಣಾಮಗಳು
ಮಿಥುನ ರಾಶಿ- ಶುಕ್ರನ ಈ ರಾಶಿ ಪರಿವರ್ತನೆ ಮಿಥುನ ರಾಶಿಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ, ಕೆಲಸದ ಸ್ಥಳದಲ್ಲಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ಕೆಲಸದ ಹೊರೆ ಹೆಚ್ಚುತ್ತಲೇ ಇರುತ್ತದೆ. ಎಚ್ಚರಿಕೆಯಿಂದ ಕೆಲಸ ಮಾಡಿ. ಆರ್ಥಿಕ ಪರಿಸ್ಥಿತಿಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಎದುರಾಗಲಿವೆ.


ಕರ್ಕ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ನಿಮ್ಮ ರಹಸ್ಯ ಶತ್ರುಗಳನ್ನು ಸಕ್ರೀಯಗೊಳಿಸಲಿದೆ. ಈ ಅವಧಿಯಲ್ಲಿ ವಿರೋಧಿಗಳು ನಿಮಗೆ ಹಾನಿ ತರಲು ಯತ್ನಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಅಲ್ಲದೆ, ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ, ಇಲ್ಲದಿದ್ದರೆ ಸಮಸ್ಯೆಗಳು ಉದ್ಭವಿಸಬಹುದು. ಬಜೆಟ್ ನೋಡಿದ ನಂತರವೇ ಖರ್ಚು ಮಾಡಿ.


ತುಲಾ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ತುಲಾ ರಾಶಿಯವರಿಗೆ ಕಷ್ಟವನ್ನು ಹೆಚ್ಚಿಸಲಿದೆ. ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಅಪಾಯಕಾರಿ ಹೂಡಿಕೆಗಳನ್ನು ಮಾಡಬೇಡಿ. ಕಠಿಣ ಪರಿಶ್ರಮದಿಂದ ಮಾತ್ರ ನೀವು ಯಶಸ್ಸನ್ನು ಪಡೆಯುವಿರಿ. ಅದೃಷ್ಟ ನಿಮ್ಮೊಂದಿಗೆ ಇರುವುದಿಲ್ಲ. ಎಲ್ಲವನ್ನು ಕಣ್ಮುಚ್ಚಿ ನಂಬಬೇಡಿ.


ಧನು ರಾಶಿ: ಶುಕ್ರನ ಈ ಸಂಚಾರ ಧನು ರಾಶಿಯಲ್ಲಿ ನಡೆಯುತ್ತಿದೆ. ಹೀಗಾಗಿ ಧನು ರಾಶಿಯವರಿಗೆ ಇದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಕೆಲಸ ಬದಲಾಯಿಸಲು ಇದು ಸರಿಯಾದ ಸಮಯವಲ್ಲ. ತಾಳ್ಮೆಯಿಂದಿರಿ. ನಿಮ್ಮ ಮಾತಿನ ಮೇಲೂ ಹಿಡಿತವಿರಲಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.


ಇದನ್ನೂ ಓದಿ-Gemstone: ಈ ರತ್ನದ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತದೆ


ಮಕರ ರಾಶಿ: ಶುಕ್ರನ ಈ ಧನು ಗೋಚರ ಮಕರ ರಾಶಿಯವರು ಎಚ್ಚರಿಕೆಯ ಕರೆಗಂಟೆಯಾಗಿದೆ. ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳದೆ ಸದ್ದಿಲ್ಲದೆ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಚಾಲನೆ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಿ. ಗಾಯಕ್ಕೆ ಗುರಿಯಾಗುವ ಸಂಭವವಿದೆ. ಹಣಕಾಸಿನ ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ.


ಇದನ್ನೂ ಓದಿ-fruits with salt: ಈ ಹಣ್ಣುಗಳಿಗೆ ಉಪ್ಪು ಬೆರೆಸಿ ತಿಂದರೆ ಪರೋಕ್ಷವಾಗಿ ವಿಷ ಸೇವಿಸಿದಂತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.