ನವದೆಹಲಿ: ನಾಳೆ ಅಂದರೆ 4ನೇ ಡಿಸೆಂಬರ್ 2021, ಶನಿವಾರದಂದು ವರ್ಷದ ಕೊನೆಯ ಸೂರ್ಯಗ್ರಹಣ (Solar eclipse) ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಆದರೆ ಅದರ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ (Zodiac sign) ಜನರ ಮೇಲೆ ಇರುತ್ತದೆ. ಇದೇ ಕಾರಣಕ್ಕೆ ಗ್ರಹಣದಿಂದಾಗುವ ಶುಭ, ಅಶುಭ ಪರಿಣಾಮಗಳ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ಶನಿ ಅಮಾವಾಸ್ಯೆಯ (Shani amavasya) ದಿನದಂದು ಈ ಗ್ರಹಣವು ಸಂಭವಿಸುತ್ತದೆ. ಹಾಗೆಯೇ ರಾಹುವಿನ ನೆರಳು ಕೂಡಾ ಗ್ರಹಣದ ಮೇಲಿರುತ್ತದೆ. ಹೀಗಾಗಿ ಜನರಲ್ಲಿ ಕಾಳಜಿ ಹೆಚ್ಚಾಗಿದೆ. ತಜ್ಞರ ಪ್ರಕಾರ, ಈ ಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅಶುಭ ಮತ್ತು ಕೆಲವರಿಗೆ ಮಂಗಳಕರವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಈ ರಾಶಿಚಕ್ರ ಚಿಹ್ನೆಗಳಿಗೆ ಶುಭ :  
ನಾಳೆಯ ಖಗ್ರಾಸ ಸೂರ್ಯಗ್ರಹಣವು (solar eclipse) 4 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರಲಿದೆ. ಈ ಗ್ರಹಣವು ಅವರ ವೃತ್ತಿಜೀವನದಲ್ಲಿ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ಕೆಲಸಗಳಲ್ಲಿ ಯಶಸ್ಸನ್ನು ತರುತ್ತದೆ. 


ಇದನ್ನೂ ಓದಿ: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸುಖ ಸಮೃದ್ದಿ, ಆಗಲಿದೆ ವ್ಯಾಪಾರದಲ್ಲಿ ವೃದ್ದಿ


ಮಿಥುನ ರಾಶಿ : ಈ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ (Gemini) ತುಂಬಾ ಶುಭಕರವಾಗಿರುತ್ತದೆ. ಈ ಜನರ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳು ಕೊನೆಗೊಳ್ಳಲಿದೆ. ಕೆಲಸದ ಸ್ಥಳದಲ್ಲೂ ಭಾರೀ ಲಾಭವಾಗಲಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಶತ್ರುಗಳ ಮೇಲೆ ವಿಜಯ ಪಡೆಯುತ್ತೀರಿ. 


ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ (Virgo) ಈ ಸೂರ್ಯಗ್ರಹಣ ಜೀವನದಲ್ಲಿ ನೆಮ್ಮದಿ ತರಲಿದೆ. ನೀವು ಯಶಸ್ಸನ್ನು ಪಡೆಯುತ್ತೀರಿ. ಜನರ ಸಹಕಾರ ಸಿಗಲಿದೆ. ಒಟ್ಟಾರೆ, ಮುಂದಿನ ದಾರಿ ಸುಲಭವಾಗುತ್ತದೆ. 


ಮಕರ ರಾಶಿ : ಈ ಗ್ರಹಣದಿಂದ ಮಕರ ರಾಶಿಯವರಿಗೆ (Capricorn) ಲಾಭವಾಗಲಿದೆ. ಉನ್ನತ ಸ್ಥಾನಗಳಲ್ಲಿರುವ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಹೊಸ ಮಾರ್ಗಗಳಿಂದ ಹಣ ಹರಿದು ಬರಲಿದೆ.  


ಇದನ್ನೂ ಓದಿ: Mangal Rashi Parivartan 2021 : ಈ ದಿನ ರಾಶಿ ಬದಲಿಸಲಿದೆ ಮಂಗಳ ಗ್ರಹ : ಈ 6 ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!


ಕುಂಭ: ಈ ಗ್ರಹಣವು ಕುಂಭ ರಾಶಿಯವರಿಗೆ (Aquarius) ವೃತ್ತಿಜೀವನಕ್ಕೆ ಉತ್ತಮ ಅವಕಾಶಗಳನ್ನು ತರುತ್ತಿದೆ. ಉದ್ಯೋಗ-ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಈಗ ಕೊನೆಗೊಳ್ಳುತ್ತವೆ. ವೃತ್ತಿಯಲ್ಲಿ ಪ್ರಗತಿ ಕಾಣಲಿದೆ.  ಬಡ್ತಿ-ಗೌರವ ಪಡೆಯಲಿದ್ದೀರಿ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.