ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸುಖ ಸಮೃದ್ದಿ, ಆಗಲಿದೆ ವ್ಯಾಪಾರದಲ್ಲಿ ವೃದ್ದಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ 2022 ರ ವರ್ಷವು ಕೆಲವು ವಿಶೇಷ ಬದಲಾವಣೆಗಳನ್ನು ತರುತ್ತಿದೆ. ಈ ರಾಶಿಚಕ್ರದ ಜನರಿಗೆ, ಹೊಸ ವರ್ಷವು ವೃತ್ತಿಜೀವನ, ಪ್ರೇಮ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ವಿಷಯಗಳಲ್ಲಿ ವಿಶೇಷವಾಗಿರಲಿದೆ. 

Written by - Ranjitha R K | Last Updated : Dec 3, 2021, 09:22 AM IST
  • ಮೇಷ ರಾಶಿಯವರ ಲವ್ ಲೈಫ್ ನಲ್ಲಿ ಆಗಲಿದೆ ಬದಲಾವಣೆ
  • ನಿಮ್ಮ ಇಷ್ಟದ ಉದ್ಯೋಗ ಆರಿಸಿಕೊಳ್ಳಬಹುದು
  • ಕೌಟುಂಬಿಕ ಜೀವನ ವಿಶೇಷವಾಗಿರುತ್ತದೆ
 ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸುಖ ಸಮೃದ್ದಿ, ಆಗಲಿದೆ ವ್ಯಾಪಾರದಲ್ಲಿ ವೃದ್ದಿ title=
2022 horoscope (file photo)

ನವದೆಹಲಿ : 2022ರ ಜಾತಕಫಲ ಹೇಗಿರಲಿ ಎಂಬ ಬಗ್ಗೆ ಎಲ್ಲರೂ ಉತ್ಸುಕರಾಗಿರುತ್ತಾರೆ. ಹೊಸ ವರ್ಷದಲ್ಲಿ ತಮ್ಮ ಜೀವನದಲ್ಲಿ (new year horoscope) ವಿಶೇಷ ಏನಾಗಲಿದೆ ಎಂದು ತಿಳಿಯಲು ಪ್ರತಿಯೊಬ್ಬರೂ ಬಯಸುತ್ತಾರೆ.  ವೃತ್ತಿ ಅಥವಾ ವ್ಯವಹಾರ ಅಥವಾ ಪ್ರೇಮ ಜೀವನ ಮತ್ತು ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. . ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಮೇಷ ರಾಶಿಯವರಿಗೆ 2022 ರ ವರ್ಷವು ಕೆಲವು ವಿಶೇಷ ಬದಲಾವಣೆಗಳನ್ನು ತರುತ್ತಿದೆ. ಈ ರಾಶಿಚಕ್ರದ ಜನರಿಗೆ, ಹೊಸ ವರ್ಷವು ವೃತ್ತಿಜೀವನ, ಪ್ರೇಮ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ವಿಷಯಗಳಲ್ಲಿ ವಿಶೇಷವಾಗಿರಲಿದೆ. 

ಮೇಷ ರಾಶಿಯ (Aries) ಕುಟುಂಬ ಜೀವನ 2022 :
ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವಿರುತ್ತದೆ. ಸಹೋದರರಿಂದ ಸಹಕಾರ ದೊರೆಯಲಿದೆ. ಇದರ ಹೊರತಾಗಿ ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಇರಬೇಕು. 

ಇದನ್ನೂ ಓದಿ : Last Solar Eclipse of 2021 : ಸೂರ್ಯ ಗ್ರಹಣದ ವೇಳೆ ತಪ್ಪಿಯೂ ಮಾಡದಿರಿ ಈ ಕೆಲಸಗಳನ್ನು, ಎದುರಾಗಬಹುದು ತೊಂದರೆ

ಹಣಕಾಸು ಜಾತಕ 2022  :
ಹೊಸ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ (new year financial life) ಉತ್ತಮವಾಗಿರಲಿದೆ. ಆದರೆ ದುಂದುವೆಚ್ಚದಿಂದ ಆರ್ಥಿಕ ನಷ್ಟ ಉಂಟಾಗುವುದು. 2022 ರಲ್ಲಿ, ಭೂಮಿ, ಮನೆ, ಹೊಸ ವಾಹನಗಳಲ್ಲಿ ಹೂಡಿಕೆ (investment) ಮಾಡಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳಲ್ಲಿ ಹಣ ವ್ಯಯವಾಗಲಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.

ಲವ್ ಲೈಫ್ 2022 :
2022 ರಲ್ಲಿ, ಪ್ರೀತಿಯ ಜೀವನದಲ್ಲಿ (2022 love life) ನಿಕಟತೆ ಹೆಚ್ಚಾಗುತ್ತದೆ. ಸಂಗಾತಿಯಿಂದ ಸಾಕಷ್ಟು ಪ್ರೀತಿ ಸಿಗಲಿದೆ. ವರ್ಷದ ಆರಂಭದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಂತರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. 

ಉದ್ಯೋಗ ಮತ್ತು ವ್ಯಾಪಾರ ಜಾತಕ 2022 :
ವ್ಯವಹಾರದಲ್ಲಿ ಆರ್ಥಿಕ ಯಶಸ್ಸು ಇರುತ್ತದೆ. ಕೆಲಸದಲ್ಲಿ ನಿರತರಾಗಿರುವುದರಿಂದ ಕುಟುಂಬಕ್ಕೆ ಸಮಯ ಸಿಗುವುದು ಕಷ್ಟವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ. ಅಲ್ಲದೆ, ಹೊಸ ವರ್ಷವು ಉದ್ಯೋಗವನ್ನು ಹುಡುಕುತ್ತಿರುವವರಿಗೆ ಮಂಗಳಕರವಾಗಿದೆ. 

ಇದನ್ನೂ ಓದಿ : Mangal Rashi Parivartan 2021 : ಈ ದಿನ ರಾಶಿ ಬದಲಿಸಲಿದೆ ಮಂಗಳ ಗ್ರಹ : ಈ 6 ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!

ವೃತ್ತಿ ಭವಿಷ್ಯ 2022  :
ಹೊಸ ವರ್ಷವು ವಿದ್ಯಾರ್ಥಿ ವರ್ಗಕ್ಕೆ ವಿಶೇಷವಾಗಿರಲಿದೆ. ವೃತ್ತಿಜೀವನದಲ್ಲಿ (Career) ಬೆಳವಣಿಗೆಯ ಸಾಮರ್ಥ್ಯವು ಪ್ರಬಲವಾಗಿದೆ. ಇದಲ್ಲದೇ ಹೊಸ ವರ್ಷದಲ್ಲಿ ನಿಮ್ಮ ಆಯ್ಕೆಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ, ಹೊಸ ವರ್ಷವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ಉತ್ತಮವಾಗಿದೆ, ಯಶಸ್ಸು ಸಿಗಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News