face hair removal tips:ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ ಮಾಡಿ
face hair removal tips: ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ.
ನವದೆಹಲಿ : face hair removal tips: ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ. ಸಮಸ್ಯೆಯ ಪರಹಾರಕ್ಕೆ ನಾನಾ ಪ್ರಯತ್ನಗಳನ್ನು ಕೂಡ ಮಾಡುತ್ತಿರುತ್ತಾರೆ. ಆದರೆ ಪರಿಹಾರ ಸಿಗದೇ ಕೊರಗುತ್ತಾರೆ. ಈ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.
1. ನಿಂಬೆ ಮತ್ತು ಜೇನುತುಪ್ಪ :
ನಿಂಬೆ, ಸಕ್ಕರೆ (Sugar) ಮತ್ತು ಜೇನು ತುಪ್ಪದ ಮಿಶ್ರಣದಿಂದ ಮುಖದ ಮೇಲಿನ ಕೂದಲನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀವು ಎರಡು ಚಮಚ ಸಕ್ಕರೆ, ನಿಂಬೆ ರಸ (lemon) ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು.
-ಈ ಮಿಶ್ರಣವನ್ನು ಸುಮಾರು ಮೂರು ನಿಮಿಷಗಳ ಕಾಲ ಬಿಸಿ ಮಾಡಿ.
-ಅಗತ್ಯವಿದ್ದರೆ, ಮಿಶ್ರಣವನ್ನು ತೆಳುವಾಗಿ ಮಾಡಿಕೊಳ್ಳಿ
-ಪೇಸ್ಟ್ ತಣ್ಣಗಾದ ನಂತರ, ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ.
-ಈಗ ವ್ಯಾಕ್ಸಿಂಗ್ ಸ್ಟ್ರಿಪ್ ಅಥವಾ ಹತ್ತಿ ಬಟ್ಟೆಯನ್ನು ತೆಗೆದುಕೊಳ್ಳಿ .
- ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಪೇಸ್ಟ್ ಮೇಲೆ ಸರಿಯಾಗಿ ಅಂಟಿಸಿ
-ಕೂದಲು ಬೆಳವಣಿಗೆಯ ವಿರುದ್ಧ ದಿಕ್ಕಿಗೆ ಎಳೆಯಿರಿ .
ಜೇನುತುಪ್ಪವು (Honey) ಚರ್ಮವನ್ನು moisturize ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Benefits of Giloy : ಆರೋಗ್ಯಕ್ಕೆ ಪ್ರಯೋಜನಕಾರಿ 'ಅಮೃತ ಬಳ್ಳಿಯ ಕಷಾಯ' : ಮನೆಯಲ್ಲಿಯೇ ತಯಾರಿಸಿ!
2. ಸಕ್ಕರೆ ಮತ್ತು ನಿಂಬೆ ರಸ :
ನೀವು ಸಕ್ಕರೆ ಮತ್ತು ನಿಂಬೆಯೊಂದಿಗೆ ಕೂಡಾ ಮುಖದ ಕೂದಲನ್ನು ತೆಗೆದುಹಾಕಬಹುದು. ಏಕೆಂದರೆ ಸಕ್ಕರೆ ನೈಸರ್ಗಿಕ ಎಕ್ಸ್ ಫ್ಫೋಲಿಯೇಟಿಂಗ್ ಏಜೆಂಟ್ ಮತ್ತು ಬಿಸಿ ಸಕ್ಕರೆ ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತದೆ. ಆದರೆ ನಿಂಬೆ ರಸ ಚರ್ಮದ ಕೂದಲಿನ ಮೇಲೆ ನೈಸರ್ಗಿಕ ಬ್ಲೀಚ್ ನಂತೆ ಕಾರ್ಯನಿರ್ವಹಿಸುತ್ತದೆ.
-ನೀವು ಮೊದಲು 8-9 ಚಮಚ ನೀರಿಗೆ ಎರಡು ಚಮಚ ಸಕ್ಕರೆ ಮತ್ತು ನಿಂಬೆ ರಸ (Lime juice) ಬೆರೆಸಬೇಕು.
- ಅದರಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವವರೆಗೆ ಈ ಮಿಶ್ರಣವನ್ನು ಬಿಸಿ ಮಾಡಿ ನಂತರ ತಣ್ಣಗಾಗಲು ಬಿಡಿ.
-ತಣ್ಣಗಾದ ಮೇಲೆ ಕೂದಲು ಬೆಳೆದಿರುವ ಜಾಗಕ್ಕೆ ಈ ಪೇಸ್ಟ್ ಅನ್ನು ಹಚ್ಚಿ. ಸುಮಾರು 20-25 ನಿಮಿಷಗಳ ಕಾಲ ಬಿಡಿ.
-ವೃತ್ತಾಕಾರದ ಚಲನೆಯಲ್ಲಿ ಉಜ್ಜುವ ಮೂಲಕ ಅದನ್ನು ತಣ್ಣೀರಿನಿಂದ ತೊಳೆಯಿರಿ.
ಇದನ್ನೂ ಓದಿ : Ice Tea : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈ 5 ರೀತಿಯ ಟೀ ಕುಡಿಯಿರಿ!
3. ಓಟ್ ಮೀಲ್ ಮತ್ತು ಬಾಳೆಹಣ್ಣು :
ಓಟ್ ಮೀಲ್ ಮತ್ತು ಬಾಳೆಹಣ್ಣು (Banana) ಕೂಡ ಮುಖದ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ವಿಧಾನವು ತುಂಬಾ ಸುಲಭ. ಓಟ್ ಮೀಲ್ ಉತ್ತಮವಾದ, ಹೈಡ್ರೇಟಿಂಗ್ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಚರ್ಮದ ರೆಡ್ನೆಸ್ಸ್ ದೂರ ಮಾಡಲು ಕೂಡ ಇದು ಸಹಕಾರಿಯಾಗಿದೆ.
-ಮೊದಲು ಎರಡು ಚಮಚ ಓಟ್ ಮೀಲ್ ಅನ್ನು ಮಾಗಿದ ಬಾಳೆಹಣ್ಣಿನೊಂದಿಗೆ ಬೆರೆಸಬೇಕು.
-ಅದರ ಪೇಸ್ಟ್ ತಯಾರಿಸಿ ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ.
-ಇದನ್ನು 15 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
- ಈ ಪೇಸ್ಟ್ ಮುಖದ ಮೇಲಿನ ಕೂದಲು ತೆಗೆದು ಹಾಕಲು ಮಾತ್ರವಲ್ಲ ಚರ್ಮದ ಕಾಂತಿಯನ್ನು ಕೂಡಾ ಹೆಚ್ಚಿಸುತ್ತದೆ.
ಇದನ್ನೂ ಓದಿ : ದೇಹಾರೋಗ್ಯ ಮಾತ್ರ ಅಲ್ಲ, ತ್ವಚೆಯ ಆರೋಗ್ಯಕ್ಕೂ ಪ್ರಯೋಜನಕಾರಿ ನೆಲ್ಲಿಕಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ