Hearbal Tea: ಸೀಬೆಹಣ್ಣು ಅಥವಾ ಪೇರಲೆ ಹಣ್ಣು ಆಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಪೊಟ್ಯಾಸಿಯಂ ಹಾಗೂ ಫೈಬರ್ ಗಳ ಆಗರವಾಗಿದೆ. ಸೀಬೇಹಣ್ಣಿನ ಗಿಡದ ಎಲೆಗಳಿಂದ ತಯಾರಿಸಲಾಗುವ ಚಹಾ ಕೂಡ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಜನರು ಸೀಬೇಹಣ್ಣಿನ ಎಲೆಗಳಿಂದ ತಯಾರಿಸಲಾಗಿರುವ ಟೀ ಸೇವನೆಯನ್ನು ಹಲವಾರು ದಶಕಗಳಿಂದ ಮಾಡುತ್ತಿದ್ದಾರೆ. ಆದರೆ, ದಿನಗಳು ಕಳೆಯುತ್ತಿದ್ದಂತೆ ಇದರ ಜನಪ್ರೀಯತೆ ಕಡಿಮೆಯಾಗುತ್ತಾ ಹೊರಟಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಚಹಾ ಬರುತ್ತಿರುವುದು ಇದರ ಹಿಂದಿನ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಒಂದು ವೇಳೆ ನೀವೂ ಕೂಡ ಸಂಪೂರ್ಣ ಪ್ರಾಕೃತಿಕ ಸಾಮಗ್ರಿಗಳ ಮೇಲೆ ನಂಬಿಕೆಯನ್ನು ಇಡಲು ಬಯಸುತ್ತಿದ್ದರೆ ಹಾಗೂ ನಿಮ್ಮ ದಿನದ ಆರಂಭವನ್ನು ಸಂಸ್ಕರಿಸಿದ ಸಾಮಗ್ರಿಗಳಿಂದ ತಯಾರಿಸಲಾಗುವ ಪಾನೀಯದಿಂದ ಆರಂಭಿಸಲು ಹಿಂದೇಟು ಹಾಕುತ್ತಿದ್ದರೆ, ಸೀಬೆಹಣ್ಣಿನ ಎಲೆಗಳ ಟೀ ಸೇವನೆ ಒಂದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ನೀವು ಹೆಚ್ಚಿಗೆ ಕಷ್ಟಪಡುವ ಅವಶ್ಯಕತೆ ಇಲ್ಲ. ತೋಟ ಹಾಗೂ ಮನೆಯ ಹಿತ್ತಲಲ್ಲೇ ನೀವು ಸೀಬೆಹಣ್ಣಿನ ಗಿಡವನ್ನು ಬೆಳೆಸಬಹುದು. ಸೀಬೇಹಣ್ಣಿ ಎಲೆಗಳ ಚಹಾದಲ್ಲಿ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಹಾಗಾದರೆ ಬನ್ನಿ ಸೀಬೆಹಣ್ಣಿ ಎಲೆಗಳ ಚಹಾ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ


ಸೀಬೆಹಣ್ಣಿನ ಎಳೆಗಳ ಟೀ ಹೇಗೆ ತಯಾರಿಸಬೇಕು 
ಬೇಕಾಗುವ ಸಾಮಗ್ರಿ

ಸೀಬೆಹಣ್ಣಿನ ತಾಜಾ ಎಳೆಗಳು, ಅರ್ಧ ಚಮಚೆ ಸಾಮಾನ್ಯ ಟೀ ಪೌಡರ್, 1/4 ಚಮಚೆ ನೀರು ಹಾಗೂ ಜೇನುತುಪ್ಪ ಅಥವಾ ಬೆಲ್ಲದಿಂದ ನೀವು ಈ ಚಹಾ ತಯಾರಿಸಬಹುದು.


ತಯಾರಿಸುವ ವಿಧಾನ
ಮೊದಲು ಸೀಬೆಹಣ್ಣಿನ 10 ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಟೀ ಪಾತ್ರೆಯಲ್ಲಿ ಮೊದಲು ಪಾತ್ರೆಯ 1/4 ರಷ್ಟು ನೀರನ್ನು ಹಾಕಿ ಮಧ್ಯಮ ಬೆಂಕಿಯಲ್ಲಿ ಕುದಿಸಿಕೊಳ್ಳಿ. ಬಳಿಕ ಅದರಲ್ಲಿ ಶುಚಿಗೊಳಿಸಿದ ಸೀಬೆಹಣ್ಣಿನ ಎಲೆಗಳನ್ನು ಹಾಕಿ ಹಾಗೂ 5 ನಿಮಿಷ ಕುದಿಸಿ. ಇದರಲ್ಲಿ ಅರ್ಧ ಚಮಚೆ ಸಾಮಾನ್ಯ ಟೀ ಪೌಡರ್ ಅನ್ನು ಬೆರೆಸಿ. ಇದು ಬಣ್ಣ ಹಾಗೂ ಸ್ವಾದ ನೀಡುತ್ತದೆ. ಬಳಿಕ ಮತ್ತೆ ಸ್ವಲ್ಪ ನೀರನ್ನು ಹಾಕಿ 10 ನಿಮಿಷಗಳ ಕಾಲ ಕುಡಿಸಿ ಬಳಿಕ ಸೋಸಿ. ಕೊನೆಯಲ್ಲಿ ಅದರಲ್ಲಿ ಜೇನುತುಪ್ಪ ಅಥವಾ ಬೆಲ್ಲವನ್ನು ಬೆರೆಸಿ.


ಇದನ್ನೂ ಓದಿ-Boiled Lemon Water: ಕುದಿಸಿದ ನಿಂಬೆ ನೀರಿನ ಲಾಭಗಳು ನಿಮಗೆಷ್ಟು ಗೊತ್ತು? ಈ ಸಮಯ ಸೇವಿಸಿದರೆ ಉತ್ತಮ


ಈ ಟೀ ಸೇವನೆಯ ಲಾಭಗಳು
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಹೃದಯಕ್ಕೆ. ಕೊಲೆಸ್ಟ್ರಾಲ್ ದೇಹದಲ್ಲಿನ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಂ ಮೇಲೆ ಪ್ರಕಟವಾದ ಲೇಖನವೊಂದರ ಪ್ರಕಾರ, ಸೀಬೆ ಎಲೆಗಳ ಚಹಾವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕೇವಲ ಎಂಟು ವಾರಗಳಲ್ಲಿ  ಕಡಿಮೆಯಾಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ-Hair Fall Juice: ಕೂದಲುದುರುವ ಸಮಸ್ಯೆಯೇ? ಈ ಎಬಿಸಿ ಜ್ಯೂಸ್ ನಿಮ್ಮ ಆಹಾರದಲ್ಲಿರಲಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.