ಬೆಂಗಳೂರು: ಭಗವಾನ್ ಹನುಮಾನ್, ದೋಷನಿವಾರಕ ತನ್ನ ಭಕ್ತರ ಬಕುತಿಗೆ ಬೇಗನೆ ಸಂತುಷ್ಟಗೊಂಡು ಕಷ್ಟ-ಕಾರ್ಪಣ್ಯಗಳಿಂದ ಅವರನ್ನು ರಕ್ಷಿಸುತ್ತಾನೆ. ಭಕ್ತಿಯಿಂದ ಆಂಜನೇಯನನ್ನು ಭಜಿಸುವ ಮೂಲಕ ಜೀವನದಲ್ಲಿ ಎಂತಹದ್ದೇ ಸಂಕಷ್ಟವಿದ್ದರೂ ಪರಿಹಾರ ಪಡೆಯಬಹುದು. ಹನುಮಾನ್ ಜಿ ಅವರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಮಂಗಳವಾರ ಅತ್ಯುತ್ತಮವಾಗಿದೆ ಏಕೆಂದರೆ ಈ ದಿನವನ್ನು ಆತನಿಗೆ ಸಮರ್ಪಿಸಲಾಗಿದೆ.  ಜ್ಯೋತಿಷ್ಯದಲ್ಲಿ, ಮಂಗಳ ಮತ್ತು ಶನಿಯ ಸಮಸ್ಯೆಗಳನ್ನು ನಿವಾರಿಸಲು ಹನುಮಾನ್ ಜಿಯ ಆರಾಧನೆಯನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. 


COMMERCIAL BREAK
SCROLL TO CONTINUE READING

ಮಂಗಳವಾರದಂದು ಆಂಜನೇಯನನ್ನು ಈ ರೀತಿ ಪೂಜಿಸಿ ನಿಮ್ಮ ದುಃಖಕ್ಕೆ ಪರಿಹಾರ ಪಡೆಯಬಹುದು: 
ಜೀವನವು ದುಃಖಗಳಿಂದ ತುಂಬಿದ್ದರೆ, ಮಂಗಳವಾರ (Tuesday Remedies) ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ ಮತ್ತು ಆತನನ್ನು ಪೂಜಿಸಿ. ಇದರಿಂದಾಗಿ ಕ್ರಮೇಣವಾಗಿ ದುಃಖಗಳು ದೂರ ಸರಿದು, ನಿಮ್ಮ ಜೀವನದಲ್ಲಿ ಸಂತೋಷ ತುಂಬಲಿದೆ.


ಉದ್ಯೋಗ ಸಮಸ್ಯೆಯನ್ನು ತೆಗೆದುಹಾಕಲು ಪರಿಹಾರ:
ನೀವು ಕೆಲಸದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವೂ, ನಿಮಗೆ ಬೇಕಾದ ಸ್ಥಾನ ಮತ್ತು ಹಣ ಸಿಗದಿದ್ದರೆ, ಮಂಗಳವಾರ, ಹನುಮಾನ್ ಜಿಗೆ ವಿಳ್ಳೆದೆಲೆ ಹಾರವನ್ನು ಅರ್ಪಿಸಿ ನಿಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿ.


ಇದನ್ನೂ ಓದಿ- Ganeshotsav 2021: ಗಣೇಶೋತ್ಸವದ ಸಮಯದಲ್ಲಿ ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ


ಹಣದ ಕೊರತೆಯನ್ನು ನಿವಾರಿಸಲು ಪರಿಹಾರ: ಹನುಮಾನ್ ಜಿಗೆ (Hanuman Ji) ಸುಗಂಧ ದ್ರವ್ಯ ಮತ್ತು ಗುಲಾಬಿ ಹೂಮಾಲೆಯನ್ನು ನೀಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. 


ಹಣ ಕೈಯಲ್ಲಿ ಉಳಿಯದಿದ್ದರೆ ಈ ಕ್ರಮ ಕೈಗೊಳ್ಳಿ: ಅನೇಕ ಜನರು ಕಷ್ಟ-ಪಟ್ಟು ದುಡಿದು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಆದರೆ ಅವರ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಇಂತಹ ಪರಿಸ್ಥಿತಿಯನ್ನು ತಡೆಗಟ್ಟಲು, ಮಂಗಳವಾರ, ಆಲದ ಮರದ ಎಲೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತರ ಈ ಎಲೆಯ ಮೇಲೆ ಕುಂಕುಮದಿಂದ ಶ್ರೀ ರಾಮ್ ಎಂದು ಬರೆದು ನಿಮ್ಮ ಪರ್ಸ್ ನಲ್ಲಿಡಿ. ಹೀಗೆ ಮಾಡುವುದರಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ.


ಇದನ್ನೂ ಓದಿ- Astrology: ತುಂಬಾ ರೋಮ್ಯಾಂಟಿಕ್ ಆಗಿರುತ್ತಾರಂತೆ ಈ 4 ರಾಶಿಯ ಜನ, ನಿಮ್ಮ ಸಂಗಾತಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆಯೇ?


ಸಂತೋಷ ಮತ್ತು ಶಾಂತಿಯನ್ನು ಪಡೆಯಲು ಪರಿಹಾರ: ಇದಕ್ಕಾಗಿ , ಮಂಗಳವಾರ ಹನುಮಾನ್ ಜಿ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಇದಲ್ಲದೇ, ಮಂಗಳವಾರ ಅಥವಾ ಶನಿವಾರದಿಂದ ಆರಂಭವಾಗಿ, 21 ದಿನಗಳ ಕಾಲ ಹನುಮಾನ್ ಜಿ ದೇವಸ್ಥಾನಕ್ಕೆ ಬೆಲ್ಲ ಮತ್ತು ಕಾಳುಗಳನ್ನು ಅರ್ಪಿಸಿ. ಕೊನೆಯ ದಿನ ಕಡಲೇಕಾಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣಗೊಂಡು ಶಾಂತಿ ನೆಲೆಸಲಿದೆ ಎಂದು ಹೇಳಲಾಗುತ್ತದೆ. 


ಶನಿ ದೋಷ ನಿವಾರಣೆಗೆ ಪರಿಹಾರಗಳು :
ಹನುಮಾನ್ ಜಿಯನ್ನು ಪೂಜಿಸುವುದರಿಂದ ಮಂಗಳ ಗ್ರಹವನ್ನು ಬಲಪಡಿಸುವುದಲ್ಲದೆ ಶನಿ ದೋಷವನ್ನು ತೆಗೆದುಹಾಕುತ್ತದೆ. ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸುವುದರಿಂದ ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.