ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ ಸಂತೋಷ ಮತ್ತು ಕೃಪೆಯ ಮಳೆಯಾಗುತ್ತದೆ. ತಾಯಿ ಲಕ್ಷ್ಮಿ ಭೂಮಿಗೆ ಬಂದು ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ.


COMMERCIAL BREAK
SCROLL TO CONTINUE READING

ತಾಯಿ ಲಕ್ಷ್ಮಿ(Laxmi Pooja) ಕೃಪೆಗೆ ಪಾತ್ರರಾಗಲು ಈ ಮಾಸದಲ್ಲಿ ದೀಪಾವಳಿ, ಗೋಪೂಜೆ, ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ನೀವು ಮಾಡುವ ವಿಶೇಷ ಪೂಜೆಯಿಂದಾಗಿ ವರ್ಷವಿಡೀ ಧನ-ಸಂಪತ್ತಿನ ಕೊರತೆ ಎದುರಾಗುವುದಿಲ್ಲ. ತಾಯಿ ಲಕ್ಷ್ಮಿ ಕೃಪೆಗಾಗಿ ದೀಪಾವಳಿ ಆಚರಿಸಲಾಗುತ್ತದೆ. ಆದ್ರೆ ಕಾರ್ತಿಕ ಮಾಸದಲ್ಲಿ ಪ್ರತಿದಿನ ನಾವು ಮಾಡುವ ಉಪಾಯದಿಂದ ತಾಯಿ ಲಕ್ಷ್ಮಿ ಸಂತೋಷಗೊಳ್ತಾಳೆ.


Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ


ಕಾರ್ತಿಕ ಮಾಸದ ಪ್ರತಿದಿನ ವಿಷ್ಣು ಹಾಗೂ ಲಕ್ಷ್ಮಿಯನ್ನು ಒಟ್ಟಿಗೆ ಪೂಜೆ ಮಾಡಿ. ಗುಲಾಬಿ ಅಥವಾ ಹೊಳೆಯುವ ಬಟ್ಟೆ ಧರಿಸಿ ದೇವರ ಆರಾಧನೆ ಮಾಡಿ.


ಕಾರ್ತಿಕ ಮಾಸದಲ್ಲಿ ಯಾವುದಾದ್ರೂ ಒಂದು ದಿನ ತುಳಸಿ ಗಿಡವನ್ನು ಮನೆಗೆ ತನ್ನಿ. ಕುಟುಂಬ ಹಾಗೂ ದಾಂಪತ್ಯ ಜೀವನದ ಸುಖಕ್ಕಾಗಿ ತುಳಸಿ ಆರಾಧನೆ ಮಾಡಬೇಕು. ಪ್ರತಿದಿನ ಸಂಜೆ ತುಳಸಿ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು.


Vastu Shastra: ಸಾಲದ ಹೊರೆ ಹೆಚ್ಚಾಗಲು ಈ ವಾಸ್ತು ದೋಷಗಳೂ ಕಾರಣವಿರಬಹುದು


ಬೆಳಿಗ್ಗೆ ದೀಪ ಬೆಳಗಿ ತುಳಸಿ ಪೂಜೆ ಮಾಡಬೇಕು. ತುಳಸಿ ಪೂಜೆಗೆ ಕಾರ್ತಿಕ ಮಾಸ ಪ್ರಸಿದ್ಧಿ ಪಡೆದಿದೆ. ಪೂಜೆ ಮಾಡಿದ ನಂತ್ರ ಕುಟುಂಬದ ಸಂತೋಷಕ್ಕೆ ಪ್ರಾರ್ಥನೆ ಮಾಡಬೇಕು.


Bhai Dooj 2020: ಭಾಯ್ ದೂಜ್ ಆಚರಣೆ ಹಿಂದಿನ ಮಹತ್ವ- ಶುಭ ಸಮಯ, ಪೂಜಾ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ