ಬೆಂಗಳೂರು: ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯ ಮತ್ತು ಕೆಟ್ಟ ದಿನಗಳು ಬರುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಜೀವನದಲ್ಲಿ ಕೆಲವು ಸಂದರ್ಭಗಳಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಎಷ್ಟೇ ಮಿತವಾಗಿ ಖರ್ಚು ಮಾಡಿದರೂ, ಸಾಲ ಮಾಡಲೇ ಬಾರದು ಎಂದು ನಿರ್ಧರಿಸಿದರೂ ನಮಗೆ ತಿಳಿಯದೆಯೇ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತೇವೆ. ಸಾಕಷ್ಟು ಪ್ರಯತ್ನದ ಹೊರತಾಗಿಯೂ ಸಾಲದಿಂದ ಹೊರಬರಲು ಸಾಧ್ಯವಾಗುತ್ತಿರುವುದಿಲ್ಲ. ಇದಕ್ಕೆ ವಾಸ್ತು ದೋಷಗಳು ಸಹ ಕಾರಣವಿರಬಹುದು ಎಂದು ನಿಮಗೆ ತಿಳಿದಿದೆಯೇ?
ವಾಸ್ತು ಜವಾಬ್ದಾರಿ :
ನಿಮ್ಮ ಮನೆಯ ವಾಸ್ತು (Vastu) ಖಂಡಿತವಾಗಿಯೂ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ ನಿಮ್ಮ ಸಾಂಸಾರಿಕ, ಆರ್ಥಿಕ ಜೀವನದ ಮೇಲೆ ವಾಸ್ತು ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ವಾಸ್ತು ದೋಷಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಬಗ್ಗೆ ನೀವು ಗಮನಹರಿಸಲು ಸಾಧ್ಯವಾಗಬಹುದು.
ನೀವೂ ಸಹ ಸುಖ-ಸಮೃದ್ಧಿ ಜೀವನ ಬಯಸಿದರೆ ಇಂದೇ ನಿಮ್ಮ ಮನೆಯ ವಾಸ್ತು ದೋಷ ಸರಿಪಡಿಸಿ
1. ನಿಮ್ಮ ಮನೆಯ ಉತ್ತರ ದಿಕ್ಕು ಉಳಿದ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿದ್ದರೆ, ಅದು ವಾಸ್ತು ದೋಷ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
2. ಮನೆ ನಿರ್ಮಿಸುವಾಗ, ನೀವು ಉತ್ತರ ದಿಕ್ಕನ್ನು ಪೂರ್ಣವಾಗಿ ಕವರ್ ಮಾಡಿ, ದಕ್ಷಿಣ ದಿಕ್ಕನ್ನು ಖಾಲಿ ಬಿಟ್ಟರೆ, ಅದನ್ನು ವಾಸ್ತು ದೋಷ ಎಂದೂ ಪರಿಗಣಿಸಲಾಗುತ್ತದೆ.
3. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ದಿಕ್ಕಿನಲ್ಲಿ ನೀರಿನ ಸಂಪ್ ಇದ್ದರೆ, ಅದನ್ನು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ.
ವಾಸ್ತುವಿನ ರೀತಿ ಮಗುವಿನ ರೂಂ ಅಲಂಕರಿಸಿದರೆ ಸಿಗಲಿವೆ ಈ ಪ್ರಯೋಜನಗಳು
4. ವಾಸ್ತು ಪ್ರಕಾರ ಹೆಚ್ಚಿನ ಶಾಖವನ್ನು ಉಂಟುಮಾಡುವ ಯಾವುದೇ ಯಂತ್ರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಎಂದಿಗೂ ಇಡಬೇಡಿ. ಇದನ್ನು ಮಾಡುವುದರಿಂದ, ನಿಮ್ಮ ವ್ಯವಹಾರದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.
5. ನೀರಿನ ಟ್ಯಾಂಕ್ (Water Tank) ಅನ್ನು ಎಂದಿಗೂ ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಈ ದಿಕ್ಕು ಬೆಂಕಿಯ ಅಂಶವನ್ನು ಪ್ರತಿಬಿಂಬಿಸುತ್ತದೆ, ನೀರನ್ನು ಬೆಂಕಿಯ ದಿಕ್ಕಿನಲ್ಲಿ ಇಡುವುದು ಶತ್ರುವನ್ನು ಬೆಳೆಸಿದಂತೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ವಾಸ್ತು ಪ್ರಕಾರ ಇಂತಹ ತಪ್ಪುಗಳನ್ನು ಮಾಡದಿದ್ದರೆ ಮನೆಯಲ್ಲಿ ಲಕ್ಷ್ಮೀ ನೆಲೆಸಿ ನೀವು ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ.