ನವದೆಹಲಿ: ಹಿಂದೂ ಧರ್ಮದಲ್ಲಿ ತುಳಸಿಯನ್ನು ಪೂಜ್ಯ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಲಕ್ಷ್ಮಿದೇವಿಯ ವಾಸಸ್ಥಾನವೆಂದು ನಂಬಲಾಗಿದೆ. ಜನರು ಅದನ್ನು ಮನೆಯಲ್ಲಿ ನೆಟ್ಟು ಪೂಜಿಸುತ್ತಾರೆ ಮತ್ತು ಅದಕ್ಕೆ ನೀರನ್ನು ಅರ್ಪಿಸುತ್ತಾರೆ. ತುಳಸಿ ಪೂಜೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಪೂಜೆಯು ಫಲ ನೀಡುವುದಿಲ್ಲ, ಹಾಗೆಯೇ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯೂ ಕೋಪಗೊಳ್ಳುತ್ತಾಳೆ. ತುಳಸಿಗೆ ನೀರು ಅರ್ಪಿಸಿ ಭಕ್ತಿಯಿಂದ ಪೂಜಿಸಬೇಕು. ಆದರೆ 2 ದಿನ ಮಾತ್ರ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬಾರದು.


COMMERCIAL BREAK
SCROLL TO CONTINUE READING

ಭಾನುವಾರ ತುಳಸಿಗೆ ನೀರು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಈ ದಿನದಂದು ತಾಯಿ ತುಳಸಿದೇವಿ ವಿಷ್ಣುವಿಗೆ ನೀರಿಲ್ಲದ ಉಪವಾಸ ವ್ರತ ಆಚರಿಸುತ್ತಾಳಂತೆ.  ಒಂದು ವೇಳೆ ಈ ದಿನ ತಾಯಿಗೆ ನೀರು ಅರ್ಪಿಸಿದರೆ ಅವಳ ಉಪವಾಸ ಮುರಿದಂತಾಗುತ್ತದೆ. ಹೀಗಾಗಿ ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರನ್ನು ಅರ್ಪಿಸಬಾರದು ಎಂದು ಹೇಳಲಾಗಿದೆ.


ಇದನ್ನೂ ಓದಿ: Money Tips: ದಾರಿಯಲ್ಲಿ ಹಣ ಸಿಕ್ರೆ ಏನು ಮಾಡಬೇಕು ಗೊತ್ತಾ?


ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು ಅಥವಾ ತುಳಸಿಗೆ ನೀರನ್ನು ಅರ್ಪಿಸಬಾರದು. ಪ್ರತಿ ಏಕಾದಶಿಯಂದು ತಾಯಿ ತುಳಸಿಯು ವಿಷ್ಣುವಿಗೆ ನೀರಿಲ್ಲದ ಉಪವಾಸ ಆಚರಿಸುತ್ತಾಳೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಏಕಾದಶಿ ದಿನವೂ ತುಳಸಿಗೆ ನೀರು ಅರ್ಪಿಸುವುದನ್ನು ನಿಷೇಧಿಸಲಾಗಿದೆ.


ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಪಾರಿಜಾತ ಗಿಡವಿದ್ದರೆ ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.