ತುಳಸಿ ಸಸಿಯ ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ ಮನೆಯೊಳಗೆ ಲಕ್ಷ್ಮೀ ಪ್ರವೇಶ ಖಂಡಿತಾ
Tulsi Tips for money: ವಾಸ್ತು ಶಾಸ್ತ್ರದಲ್ಲಿ, ತುಳಸಿ ಸಸ್ಯಕ್ಕೆ ಸಂಬಂಧಿಸಿದಂತೆ ಕೆಲವು ಪರಿಣಾಮಕಾರಿ ಪರಿಹಾರಗಳು-ತಂತ್ರಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ತುಳಸಿ ಬೇರಿನ ಪರಿಹಾರಗಳು ತುಂಬಾ ಪರಿಣಾಮಕಾರಿಯಾದದ್ದು.
Tulsi Tips for money : ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿ ಇರುವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ. ಮಾತ್ರವಲ್ಲ ತುಳಸಿ ಸುತ್ತಮುತ್ತಲಿನ ಪರಿಸರದ ಮೇಲೆ ಕೂಡಾ ಸಕಾರಾತ್ಮಕ ಪರಿಣಾಮವನ್ನೇ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ, ತುಳಸಿ ಸಸ್ಯಕ್ಕೆ ಸಂಬಂಧಿಸಿದಂತೆ ಕೆಲವು ಪರಿಣಾಮಕಾರಿ ಪರಿಹಾರಗಳು-ತಂತ್ರಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ತುಳಸಿ ಬೇರಿನ ಪರಿಹಾರಗಳು ತುಂಬಾ ಪರಿಣಾಮಕಾರಿಯಾದದ್ದು.
ತುಳಸಿಯ ಈ ಪರಿಹಾರಗಳು ಅದೃಷ್ಟದ ಬಾಗಿಲು ತೆರೆಯುತ್ತದೆ :
- ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸುವುದರಿಂದ ಅನೇಕ ಲಾಭಗಳಾಗುತ್ತವೆ. ಮತ್ತೊಂದೆಡೆ, ಪ್ರತಿದಿನ ಸಂಜೆ ತುಳಸಿ ಕಟ್ಟೆಯ ಮುಂದೆ ದೀಪವನ್ನು ಬೆಳಗಿಸುವ ಮೂಲಕ, ತಾಯಿ ಲಕ್ಷ್ಮೀ ಸದಾ ಮನೆಯಲ್ಲಿ ನೆಲೆಯಾಗುವಂತೆ ಮಾಡಬಹುದು.
ಇದನ್ನೂ ಓದಿ : Akshaya Tritiya 2023 : ಈ ಅಕ್ಷಯ ತೃತೀಯ ದಿನ ಇವುಗಳಲ್ಲಿ ಒಂದನ್ನು ಮನೆಗೆ ತನ್ನಿ, ವರ್ಷವಿಡೀ ಆರ್ಥಿಕ ಲಾಭ!
- ನಿಮ್ಮ ಪ್ರಗತಿಯಲ್ಲಿ ಅಡೆತಡೆಗಳಿದ್ದರೆ ಅಥವಾ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗದಿದ್ದರೆ, ಏಕಾದಶಿಯ ದಿನದಂದು ಒಂದು ಪರಿಹಾರ ಕ್ರಮವನ್ನು ಕೈಗೊಳ್ಳಿ. ಹೀಗೆ ಮಾಡುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನುವುದು ನಂಬಿಕೆ. ಇದಕ್ಕಾಗಿ ಪ್ರತಿ ಏಕಾದಶಿಯಂದು ಉಪ್ಪು ಸೇರಿಸದ ಹಿಟ್ಟು ಕಲಸಿ ಅದನ್ನು ಹಣತೆಯಂತೆ ಬಳಸಿ ದೀಪವನ್ನು ಬೆಳಗಬೇಕು. ಆದರೆ ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು ಎಂಬುದನ್ನು ನೆನಪಿನಲ್ಲಿಡಿ.
- ಏಕಾದಶಿಯ ದಿನದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮೀಯನ್ನು ಪೂಜಿಸಿದ ನಂತರ ತುಳಸಿಯ ಬೇರಿಗೆ ಅರಿಶಿನ ಮತ್ತು ಬೆಲ್ಲವನ್ನು ಅರ್ಪಿಸಬೇಕು. ಇದು ನಿಮ್ಮ ಜೀವನದಲ್ಲಿನ ದುರಾದೃಷ್ಟವನ್ನು ಹೊಡೆದೋಡಿಸಿ ಯಶಸ್ಸು, ಸಂಪತ್ತು, ಕೀರ್ತಿ ಒದಗಿ ಬರುವಂತೆ ಮಾಡುತ್ತದೆ.
ಇದನ್ನೂ ಓದಿ : ಈ ಚೈತ್ರ ನವರಾತ್ರಿ ಅಷ್ಟಮಿ-ನವಮಿಯಂದು ಅಪರೂಪದ ಯೋಗ! ಪೂಜೆಯ ಮಂಗಳಕರ ಸಮಯ ತಿಳಿಯಿರಿ
- ಏಕಾದಶಿಯ ದಿನದಂದು ತುಳಸಿ ಗಿಡದ ಬಳಿ ಕುಳಿತು 'ಓಂ ನಮೋ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ನಂತರ ತುಳಸಿ ಮಾತೆ ಮತ್ತು ಭಗವಾನ್ ವಿಷ್ಣುವಿಗೆ ನಿಮ್ಮ ಮನದ ಆಸೆಯನ್ನು ತಿಳಿಸಿ. ಶೀಘ್ರದಲ್ಲೇ ನಿಮ್ಮ ಆಸೆ ಈಡೇರುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.