Who Should Not Drink Turmeric Milk: ಚಿಕ್ಕಂದಿನಲ್ಲಿ ಹೆಚ್ಚು ದಣಿವಾಗಿ ಮನೆ ತಲುಪಿದಾಗ ಅರಿಶಿಣ ಮಿಶ್ರಿತ ಹಾಲು ಸೇವಿಸಲು ಹಿರಿಯರು ಸಲಹೆ ನೀಡುವುದನ್ನು ನೀವು ನೋಡಿರಬಹುದು. ಏಕೆಂದರೆ ಅರಿಶಿಣ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಯಂತಹ ಜೀವಸತ್ವಗಳು ಹಾಲಿನಲ್ಲಿ ಕಂಡುಬರುತ್ತವೆ. ಆದರೆ ಅರಿಶಿಣದ ಹಾಲು ಕೂಡ ಕೆಲವರಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಂತಹ ಪರಿಸ್ಥಿತಿಯಲ್ಲಿ, ಯಾವ ಜನರು ಅರಿಶಿಣ ಮಿಶ್ರಿತ ಹಾಲನ್ನು ಸೇವಿಸುವುದರಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಈ ಜನರು ಅರಿಶಿಣ ಮಿಶ್ರಿತ ಹಾಲನ್ನು ಸೇವಿಸಬಾರದು
ಕಿಡ್ನಿ ಕಾಯಿಲೆ ಇರುವವರು ಸೇವಿಸಬಾರದು

ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳುತ್ತಿರುವವರು ಅರಿಶಿಣ ಹಾಲನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಅರಿಶಿಣವು ಆಕ್ಸಲೇಟ್ ಅನ್ನು ಹೊಂದಿರುತ್ತದೆ, ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪ್ರಚೋದಿಸುತ್ತದೆ ಮತ್ತು ನೀವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.


ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟ ಹೊಂದಿದವರು ಸೇವಿಸಬಾರದು
ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟವನ್ನು ಹೊಂದಿರುವ ರೋಗಿಗಳು ಅರಿಶಿಣ ಹಾಲನ್ನು ಸೇವಿಸಬಾರದು. ಏಕೆಂದರೆ ಅರಿಶಿಣವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಲೋ ಶುಗರ್ ಲೆವಲ್ ಹೊಂದಿರುವ ರೋಗಿಗಳ ಸಮಸ್ಯೆಯು ಮತ್ತಷ್ಟು ಉಲ್ಭಣಿಸಬಹುದು.

ಕಳಪೆ ಜೀರ್ಣಕ್ರಿಯೆ ಹೊಂದಿರುವ ಜನರು ಸೇವಿಸಬಾರದು
ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರ, ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆಗಳಿದ್ದರೆ ನೀವು ಅರಿಶಿಣ ಹಾಲನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅರಿಶಿಣದ ಹಾಲು ಕುಡಿದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.


ಇದನ್ನೂ ಓದಿ-Cumin-Fennel Water Benefits: ಹೆಚ್ಚಾದ ತೂಕದಿಂದ ತೊಂದರೆಗೀಡಾಗಿದ್ದೀರಾ? ತಕ್ಷಣ ಈ ನೀರನ್ನು ಒಮ್ಮೆ ಟ್ರೈ ಮಾಡಿ ನೋಡಿ

ರಕ್ತಹೀನತೆ ಹೊಂದಿರುವ ಜನರು ಸೇವಿಸಬಾರದು
ಅರಿಶಿಣ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯುಂಟಾಗುತ್ತದೆ. ಕಬ್ಬಿಣ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಿರುವಾಗ, ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ, ನೀವು ಅರಿಶಿಣ ಹಾಲು ಸೇವಿಸುವುದನ್ನು ತಪ್ಪಿಸಬೇಕು.


ಇದನ್ನೂ ಓದಿ-ಹೃದಯಾಘಾತಕ್ಕೂ ಮುನ್ನ ಶರೀರ ನೀಡುತ್ತದೆ ಈ ಲಕ್ಷಣಗಳನ್ನು .! ನಿರ್ಲಕ್ಷಿಸಿದರೆ ಪ್ರಾಣಕ್ಕೇ ಆಪತ್ತು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.