Breakfast, ಲಂಚ್ ಹಾಗೂ ಡಿನ್ನರ್ ನ ಈ ವೇಳಾಪಟ್ಟಿ ಪಾಲಿಸಿದರೆ ತೂಕ ಎಂದಿಗೂ ಹೆಚ್ಚಾಗುವುದಿಲ್ಲ

Health Tips - ತೂಕ ಹೆಚ್ಚಾಗುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಮತ್ತು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ನೀವು ಬಯಸುತ್ತಿದ್ದರೆ, ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ.

Written by - Nitin Tabib | Last Updated : Aug 22, 2022, 10:19 PM IST
  • ತೂಕ ಹೆಚ್ಚಾಗುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ
  • ಮತ್ತು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ನೀವು ಬಯಸುತ್ತಿದ್ದರೆ,
  • ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ.
Breakfast, ಲಂಚ್ ಹಾಗೂ ಡಿನ್ನರ್ ನ ಈ ವೇಳಾಪಟ್ಟಿ ಪಾಲಿಸಿದರೆ ತೂಕ ಎಂದಿಗೂ ಹೆಚ್ಚಾಗುವುದಿಲ್ಲ title=
Weight Loss Tips

Right Time To Eat Food :ಇಂದಿನ ಕಾಲದಲ್ಲಿ ತೂಕ ಹೆಚ್ಚಾಗುವುದು ಒಂದು ಗಂಭೀರ ಸಮಸ್ಯೆಯಾಗಿದೆ. ಕಛೇರಿಯಲ್ಲಿ ಒಂದೆಡೆ ಕೂತು, ಹೆಚ್ಚು ನಡೆದಾಡದಿರುವುದು, ಜಂಕ್ ಫುಡ್ ತಿನ್ನುವುದು. ಇವೆಲ್ಲವೂ ತೂಕ ಹೆಚ್ಚಾಗಲು ಕಾರಣಗಳಾಗಿವೆ. ನೀವೂ ಕೂಡ ನಿಮ್ಮ ಹೆಚ್ಚಿದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ, ಕೆಲವು ಚಿಕ್ಕ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಯಾವ ಸಮಯಕ್ಕೆ ಯಾವ ಆಹಾರ ಸೇವಿಸಬೇಕು, ಯಾವ ಆಹಾರಕ್ರಮವನ್ನು ಇಟ್ಟುಕೊಳ್ಳಬೇಕು ಎಂಬುದು ಇಲ್ಲಿ ತುಂಬಾ ಮುಖ್ಯ. ತೂಕವನ್ನು ಕಳೆದುಕೊಳ್ಳುವುದು ಎಂದರೆ ನೀವು ತಿನ್ನುವುದನ್ನು ನಿಲ್ಲಿಸುವುದು ಎಂದಲ್ಲ. ಬದಲಿಗೆ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಆಹಾರವನ್ನು ತಿನ್ನುವುದು ತುಂಬಾ ಮುಖ್ಯ. ಆದರೆ ಸರಿಯಾದ ಸಮಯದಲ್ಲಿ ಆಹಾರ ಸೇವಿಸಬೇಕು. ತೂಕ ಇಳಿಸಿಕೊಳ್ಳಲು ನಾವು ಯಾವ ಸಮಯದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
 
ಉಪಹಾರ
ಬೆಳಗಿನ ಉಪಾಹಾರವು ದಿನದ ಪ್ರಮುಖ ಮತ್ತು ಆರೋಗ್ಯಕರ ಆಹಾರವಾಗಿದೆ. ಆದ್ದರಿಂದ ನಿಮ್ಮ ತೂಕ ಇಳಿಸುವ ಪ್ರಯಾಸದಲ್ಲಿ, ನೀವು ಬೆಳಗ್ಗೆ 6 ರಿಂದ 10 ರವರೆಗೆ ಪ್ರೋಟೀನ್ ಭರಿತ ಉಪಹಾರವನ್ನು ತೆಗೆದುಕೊಳ್ಳಬೇಕು. ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಹಸಿವನ್ನು ಕಡಿಮೆ ಮಾಡುತ್ತದೆ. ಅಂಕಿಅಂಶಗಳ ಪ್ರಕಾರ, ಬೆಳಗ್ಗೆ 6 ರಿಂದ 10 ರ ನಡುವೆ ಉಪಹಾರ ಸೇವಿಸಿದ ಸುಮಾರು ಶೇ. 80 ಪ್ರತಿಶತದಷ್ಟು ಜನರು ಇತರರಿಗಿಂತ 15 ಕೆಜಿ ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ.
 
ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ 
ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ನಿಮಗೆ ಅಗತ್ಯವಿಲ್ಲ ಎಂದಾದಲ್ಲಿ ನೀವು ಅದನ್ನು ಬಿಡಬಹುದು, ಆದರೆ, ಇದು ನಿಮಗೆ ಹಸಿವಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ನಾವು ಸೇವಿಸಿದ ಆಹಾರ ಜೀರ್ಣಿಸಿಕೊಳ್ಳಲು ನಮ್ಮ ದೇಹವು ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಬೆಳಗಿನ ಉಪಾಹಾರದ ನಂತರ 2 ರಿಂದ 4 ಗಂಟೆಗಳ ನಂತರ ನೀವು ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ತೆಗೆದುಕೊಳ್ಳಬಹುದು. 
 
ಮಧ್ಯಾಹ್ನದ ಊಟ
ಯಾವುದೇ ಪರಿಸ್ಥಿತಿಯಲ್ಲಿ ನೀವು ಮಧ್ಯಾಹ್ನ 3 ಗಂಟೆಯ ಮೊದಲು ಊಟ ಮಾಡಲು ಪ್ರಯತ್ನಿಸಬೇಕು. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಶೋಧಕರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ 300 ಡಯಟರ್ಸ್ ರನ್ನು ಪರೀಕ್ಷಿಸಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಮೊದಲು ಊಟ ಮಾಡಿದವರು ಹೆಚ್ಚು ಕಿಲೋಗಳನ್ನು ಕಳೆದುಕೊಳ್ಳಲು ಸಮರ್ಥರಾಗಿದ್ದರು ಎಂಬುದನ್ನು ಕಂಡುಹಿಡಿದಿದ್ದಾರೆ.
 
ಸಂಜೆ ತಿಂಡಿ
 ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ನಂತೆಯೇ ಸಂಜೆಯ ತಿಂಡಿ ಸೇವಿಸುವುದು ತುಂಬಾ ಮುಖ್ಯ. ಆದ್ದರಿಂದ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ಅಂತರವನ್ನು ತುಂಬಲು, ಖಂಡಿತವಾಗಿಯೂ ಸಂಜೆ ಚಹಾದೊಂದಿಗೆ ಕೆಲವು ತಿಂಡಿಗಳನ್ನು ತೆಗೆದುಕೊಳ್ಳಿ. ನೀವು ಬಯಸಿದರೆ, ಸಂಜೆ 5 ರಿಂದ 6 ರ ನಡುವೆ, ನೀವು ಚಹಾದೊಂದಿಗೆ ಬಿಸ್ಕತ್ತು ಅಥವಾ ಬೇಳೆಕಾಳು  ಅಥವಾ ಮಖಾನಾವನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ-Green Tea ಅಷ್ಟೇ ಅಲ್ಲ Green Coffee
 
ರಾತ್ರಿ ಊಟ
ರಾತ್ರಿಯಲ್ಲಿ ಲಘು ಭೋಜನವನ್ನು ಮಾಡುವುದು ಒಳ್ಳೆಯದು ಮತ್ತು ಅದು ಕೂಡ ಸಂಜೆ 7 ಗಂಟೆಯ ಮೊದಲು. ರಾತ್ರಿಯಲ್ಲಿ ತುಂಬಾ ಹಗುರವಾದ ಆಹಾರವನ್ನು ಸೇವಿಸಬೇಕು ಅದು ಸುಲಭವಾಗಿ ಜೀರ್ಣವಾಗುತ್ತದೆ. ನಿಮಗೆ ಬೇಕಾದರೆ ರಾತ್ರಿಯಲ್ಲಿ ಸೂಪ್, ಖಿಚಡಿ ಅಥವಾ ಸ್ವಲ್ಪ ಓಟ್ಸ್ ತಯಾರಿಸಿ ಸೇವಿಸಬಹುದು. ಆದಷ್ಟು ಸಂಜೆ 7 ಗಂಟೆಯ ಮೊದಲು ನಿಮ್ಮ ಭೋಜನವನ್ನು ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ-Healthy Diet Plan: ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲ ಕಾರಣ ಕೆಟ್ಟ ಕೊಲೆಸ್ಟ್ರಾಲ್, ಈ ರೀತಿ ನಿಯಂತ್ರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News