ಕೂದಲಿನ ಸಮಸ್ಯೆಗೆ ಮೊಟ್ಟೆಯನ್ನು ಹೀಗೆ ಬಳಸಿ, ಪಡೆಯಬಹುದು ಕೇಶ ಕಾಂತಿ
hair care tips: ಬೇಕಾಬಿಟ್ಟಿ ಆಹಾರ ಮತ್ತು ತಪ್ಪು ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವೊಮ್ಮೆ ಕೂದಲು ಉದುರುವ ಸಮಸ್ಯೆಗೂ ಕಾರಣವಾಗುತ್ತದೆ.
ನವದೆಹಲಿ : hair care tips: ಬೇಕಾಬಿಟ್ಟಿ ಆಹಾರ ಮತ್ತು ತಪ್ಪು ಜೀವನಶೈಲಿ (Lifestyle) ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವೊಮ್ಮೆ ಕೂದಲು ಉದುರುವ ಸಮಸ್ಯೆಗೂ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಜನ ಬೇರೆ ಬೇರೆ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಕೆಲವರು ವಿವಿಧ ರೀತಿಯ ಎಣ್ಣೆಯ (Oil for hair care) ಮೊರೆ ಹೋಗುತ್ತಾರೆ. ಇನ್ನು ಕೆಲವರು ಮನೆಮದ್ದುಗಳನ್ನು (Home remedies) ಹುಡುಕುತ್ತಾರೆ. ಕೂದಲು ಉದುರುವ ಸಮಸ್ಯೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಬೇಕಾದರೆ ಈ ಮನೆ ಮದ್ದನ್ನು ಪ್ರಯತ್ನಿಸಿ.
ಕೂದಲಿಗೆ ಮೊಟ್ಟೆಯ ಬಳಕೆ ಯಾಕೆ ?
ಮೊಟ್ಟೆಗಳನ್ನು ಬಳಸಿ, ಮಾಡುವ ಹೇರ್ ಮಾಸ್ಕ್ (egg mask) ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಅದರ ಸಹಾಯದಿಂದ ಕೂದಲಿನ ಆರೈಕೆ (hair care) ಮಾಡಿಕೊಳ್ಳಬಹುದು. ಕೂದಲಿಗೆ ಮೊಟ್ಟೆಯ ಮಾಸ್ಕ್ ಬಳಸುವುದು ಸಾಂಪ್ರದಾಯಿಕ ಪದ್ದತಿಗಳಲ್ಲಿ ಒಂದಾಗಿದೆ. ಇದು ಕೂದಲನ್ನು ನೈಸರ್ಗಿಕವಾಗಿ moisturize ಮಾಡುವ ವಿಧಾನವಾಗಿದೆ.
ಇದನ್ನೂ ಓದಿ : benefits of milk dates: ಹಾಲಿನೊಂದಿಗೆ ಕೇವಲ ಎರಡು ಖರ್ಜೂರ ಸೇವಿಸಿದರೆ ಪುರುಷರ ಈ ಸಮಸ್ಯೆಗೆ ಸಿಗಲಿದೆ ಪರಿಹಾರ
ಕೂದಲಿಗೆ ಮೊಟ್ಟೆ ಹೀಗೆ ಲಾಭದಾಯಕ :
ಆರೋಗ್ಯ ತಜ್ಞರ ಪ್ರಕಾರ, ಪ್ರೋಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿರುವ ಮೊಟ್ಟೆಯ ಮಾಸ್ಕ್ ಕೂದಲಿಗೆ (egg mask for hair) ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಹಾನಿಗೊಳಗಾದ ಕೂದಲಿಗೆ ಹೊಳಪನ್ನು ನೀಡುತ್ತದೆ. ಮೊಟ್ಟೆ ಕೂಡ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
1. ಅಲೋವೆರಾ, ಆಲಿವ್ ಎಣ್ಣೆ ಮತ್ತು ಮೊಟ್ಟೆ:
ಕೂದಲಿಗೆ ಮೊಟ್ಟೆಯ ಮಾಸ್ಕ್ ತಯಾರಿಸಲು, ಅಲೋವೆರಾ, ಆಲಿವ್ ಆಯಿಲ್ (olive oil) ಬೇಕು. ಅಲೋವೆರಾ ಕೂದಲಿಗೆ ಸ್ಟ್ರೆಂತನಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಆಲಿವ್ ಆಯಿಲ್ ನೊಂದಿಗೆ ಮಿಶ್ರಣ ಮಾಡುವುದರಿಂದ ಕೂದಲನ್ನು ಬಲಪಡಿಸುತ್ತದೆ.
ಈ ರೀತಿ ಬಳಸಿ :
ಒಂದು ಬಟ್ಟಲಿನಲ್ಲಿ 2-3 ಚಮಚ ಮೊಟ್ಟೆಯ ಹಳದಿ ಭಾಗ ಮತ್ತು 4-5 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ.
1 ಚಮಚ ಆಲಿವ್ ಎಣ್ಣೆಯನ್ನು ಸೇರಿಸುವ ಮೊದಲು 10 ಸೆಕೆಂಡುಗಳ ಕಾಲ ಬಿಸಿ ಮಾಡಿ.
ಮೂರೂ ಮಿಶ್ರಣ ಮಾಡಿ ಮತ್ತು ಕೂದಳಿಗೆ ಹಚ್ಚಿ. ಈ ಮಿಶ್ರಣವನ್ನು ಕೂದಲ ಬೇರುಗಳಿಂದಲೇ ಹಚ್ಚಲು ಶುರು ಮಾಡಿ.
ಇದನ್ನು 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
ಇದನ್ನೂ ಓದಿ : Raw Food: ಈ ಆಹಾರ ಪದಾರ್ಥಗಳನ್ನು ಎಂದಿಗೂ ಬೇಯಿಸಿ ತಿನ್ನಬಾರದು
2. ಮೊಟ್ಟೆ ಮತ್ತು ಮೊಸರು :
ಮೊಟ್ಟೆ ಮತ್ತು ಮೊಸರಿನ (Curd) ಹೇರ್ ಮಾಸ್ಕ್ ಕೂದಲು ಉದುರುವ ಸಮಸ್ಯೆಯನ್ನು ಕೊನೆಗೊಳಿಸುತ್ತದೆ. ಮೊಟ್ಟೆ ಮತ್ತು ಮೊಸರನ್ನು ಒಟ್ಟಿಗೆ ಬಳಸಿದರೆ ಕೂದಲು ಬಲಗೊಳ್ಳುತ್ತದೆ. ಮತ್ತು ಉದುರುವುದು ನಿಲ್ಲುತ್ತದೆ. ಕೂದಲು ಉದುರುವುದನ್ನು ತಡೆಯುವುದು ಮತ್ತು ತಲೆಹೊಟ್ಟು ದೂರವಿಡುವುದನ್ನು ಹೊರತುಪಡಿಸಿ ಮೊಸರು ಉತ್ತಮವಾದ ಕಂಡೀಷನರ್‌ನ ಗುಣಗಳನ್ನು ಹೊಂದಿದೆ.
ಮೊಟ್ಟೆ ಮತ್ತು ಮೊಸರು ಮಾಸ್ಕ್ ಅನ್ನು ಈ ರೀತಿ ಬಳಸಿ:
1 ಮೊಟ್ಟೆಗೆ 3-4 ಚಮಚ ಮೊಸರು ಮತ್ತು 1 ಚಮಚ ನಿಂಬೆ ರಸವನ್ನು (lemon) ಸೇರಿಸಿ.
ಈಗ ಬ್ರಷ್ ಸಹಾಯದಿಂದ, ನಿಮ್ಮ ನೆತ್ತಿಯ ಮೇಲೆ ಈ ಮಿಶ್ರಣವನ್ನು ನಿಧಾನವಾಗಿ ಹಚ್ಚಿ ಮತ್ತು ಸುಮಾರು ಒಂದು ಗಂಟೆ ಹಾಗೆ ಬಿಡಿ.
ನಂತರ ಶಾಂಪೂ ಬಳಸಿ ತೊಳೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ