ಕೋಮಲ, ಸುಂದರ, ಕಾಂತಿಯುತ ತ್ವಚೆ ನಿಮ್ಮದಾಗಿಸಲು ಬೀಟ್ರೂಟ್ ಅನ್ನು ಈ ರೀತಿ ಬಳಸಿ
Skin Care: ಬೀಟ್ರೂಟ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಬೀಟ್ರೂಟ್ ಬಳಕೆಯಿಂದ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
Beetroot For Skin: ಕಲೆರಹಿತವಾದ ಹೊಳೆಯುವ ಕಾಂತಿಯುತ ತ್ವಚೆ ನಮ್ಮದಾಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ರೀಂಗಳು ಲಭ್ಯವಿವೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಬೀಟ್ರೂಟ್ ಕೂಡ ನಿಮ್ಮ ತ್ವಚೆಗೆ ವರದಾನದಂತೆ ಕಾರ್ಯನಿರ್ವಹಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಹೌದು, ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ ಎಂದು ನಿಮಗೆ ತಿಳಿದೇಯಿದೆ. ಆದರೆ, ಇದರ ಸೇವನೆಯಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ತ್ವಚೆಯ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ.
ನಿಯಮಿತವಾಗಿ ಬೀಟ್ರೂಟ್ ಬಳಕೆಯು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಮಾತ್ರವಲ್ಲದೆ, ಬೀಟ್ರೂಟ್ ರಸದ ಬಳಕೆಯು ಚರ್ಮದ ಹಲವು ಸಮಸ್ಯೆಗಳಿಂದ ರಕ್ಷಣೆ ನೀಡಿ ಚರ್ಮವನ್ನು ಸುಂದರವಾಗಿಸುತ್ತದೆ. ಇದಕ್ಕಾಗಿ ಬೀಟ್ರೂಟ್ ಅನ್ನು ಮಾಸ್ಕ್ ರೀತಿಯಲ್ಲಿ ಬಳಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಬಿಳಿ ಕೂದಲನ್ನು ಕ್ಷಣಾರ್ಧದಲ್ಲೇ ಕಪ್ಪಾಗಿಸುತ್ತೆ ಈ ನ್ಯಾಚುರಲ್ ಹೇರ್ ಪ್ಯಾಕ್..!!
ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬೀಟ್ರೂಟ್ ಮಾಸ್ಕ್:
ಆಯುರ್ವೇದದ ಪ್ರಕಾರ, ಬೀಟ್ರೂಟ್ ಉತ್ತಮ ಸೌಂದರ್ಯವರ್ಧಕವಾಗಿದ್ದು, ಬೀಟ್ರೂಟ್ ಅನ್ನು ಮಾಸ್ಕ್ ರೀತಿಯಲ್ಲಿ ಬಳಸುವುದರಿಂದ ಇದು ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಬೀಟ್ರೂಟ್ ಅನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಹೊಳೆಯುವ ಚರ್ಮಕ್ಕಾಗಿ ಬೀಟ್ರೂಟ್ ಬಳಕೆ:
ಎರಡು ಚಮಚ ಬೀಟ್ರೂಟ್ ರಸವನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖದಿಂದ ಕುತ್ತಿಗೆಯ ಭಾಗದವರೆಗೆ ಲೇಪಿಸಿ 15 ನಿಮಿಷಗಳ ಬಳಿಕ ಒಂದು ಕಾಟನ್ ಬಟ್ಟೆಯನ್ನು ಒದ್ದೆಮಾಡಿ ಮೇಲ್ಮುಖವಾಗಿ ಮಾಸ್ಕ್ ಅನ್ನು ಸ್ವಚ್ಛಗೊಳಿಸಿ. ಬಳಿಕ ಶುಚ್ಛವಾದ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ಕಲೆರಹಿತ ತ್ವಚೆಗಾಗಿ:
ಮೊಡವೆ, ಕಲೆಯಿಂದಾಗಿ ಚರ್ಮ ಕಲೆಗುಂದಿದ್ದರೆ ಒಂದು ಬಟ್ಟಲಿನಲ್ಲಿ 1 ಚಮಚ ಕಡಲೆಹಿಟ್ಟಿಗೆ ಒಂದು ಚಮಚ ಬೀಟ್ರೂಟ್ ರಸ, ಸ್ವಲ್ಪ ಮೊಸರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್‌ಗೆ ಒಂದು ಚಮಚ ರೋಸ್ ವಾಟರ್ ಬೆರೆಸಿ ಕುತ್ತಿಗೆಯ ಭಾಗದವರೆಗೂ ಲೇಪಿಸಿ. ನಂತರ ಅರ್ಧಗಂಟೆ ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ. ವಾರದಲ್ಲಿ ಒಮ್ಮೆಯಾದರೂ ಈ ಮಾಸ್ಕ್ ಬಳಸುವುದರಿಂದ ಕಲೆರಹಿತ ತ್ವಚೆ ನಿಮ್ಮದಾಗಬಹುದು.
ಇದನ್ನೂ ಓದಿ- Ghee For Hair: ಕೂದಲಿಗೆ ʻತುಪ್ಪʼ ಹಚ್ಚುವುದರಿಂದ ಆಗುವ ಲಾಭ
ಡಾರ್ಕ್ ಸರ್ಕಲ್ ನಿಂದ ಪರಿಹಾರ:
ಒಂದು ಚಮಚ ಬೀಟ್ರೂಟ್ ರಸದಲ್ಲಿ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಆ ಪೇಸ್ಟ್ ಅನ್ನು ಕಣ್ಣುಗಳ ಸುತ್ತ ಹಚ್ಚಿ ಲಘುವಾಗಿ ಮಸಾಜ್ ಮಾಡಿ ಅರ್ಧಗಂಟೆ ಬಳಿಕ ಕಾಟನ್ ಬಟ್ಟೆಯನ್ನು ಒದ್ದೆ ಮಾಡಿ ನಿಧಾನವಾಗಿ ಆ ಮಾಸ್ಕ್ ಅನ್ನು ಒರೆಸಿ. ನಂತರ ಸರಲ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.