Ghee For Hair: ಕೂದಲಿಗೆ ʻತುಪ್ಪʼ ಹಚ್ಚುವುದರಿಂದ ಆಗುವ ಲಾಭ

Ghee For Hair: ತುಪ್ಪದಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು ಇದು ಕೂದಲಿನ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ತುಪ್ಪವನ್ನು ಬಳಸುವ ಸರಿಯಾದ ವಿಧಾನ ತಿಳಿದರೆ ಸಾಕು ಉದ್ದ ದಪ್ಪ ಕಪ್ಪು ಕೂದಲು ನಿಮ್ಮದಾಗುವುದು. 

Written by - Chetana Devarmani | Last Updated : Feb 24, 2024, 12:56 PM IST
  • ತುಪ್ಪದಲ್ಲಿ ಹಲವು ಆರೋಗ್ಯಕರ ಗುಣಗಳಿವೆ
  • ಕೂದಲಿನ ಹಲವು ಸಮಸ್ಯೆಗಳಿಗೆ ತುಪ್ಪ ಪರಿಹಾರ
  • ಕೂದಲಿಗೆ ತುಪ್ಪ ಹಚ್ಚುವುದರಿಂದ ಆಗುವ ಲಾಭ
Ghee For Hair: ಕೂದಲಿಗೆ ʻತುಪ್ಪʼ ಹಚ್ಚುವುದರಿಂದ ಆಗುವ ಲಾಭ title=

Ghee Benefits For Hair : ತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಊಟದ ರುಚಿಯನ್ನು ತುಪ್ಪ ಹೆಚ್ಚಿಸುತ್ತದೆ. ಇದರ ಜೊತೆಗೆ ತುಪ್ಪ ಕೂದಲಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಬಳಸುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತುಪ್ಪದಲ್ಲಿ ವಿಟಮಿನ್-ಎ, ವಿಟಮಿನ್-ಇ ಹಾಗೂ ಹಲವು ಪೋಷಕಾಂಶಗಳಿದ್ದು, ಕೂದಲಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ತುಪ್ಪವನ್ನು ಬಳಸುವುದರಿಂದ ನಿಮ್ಮ ಕೂದಲನ್ನು ದಪ್ಪ, ಉದ್ದ ಮತ್ತು ಮೃದುವಾಗಿ ಮಾಡಬಹುದು. ಹಾಗಾದರೆ ಕೂದಲಿಗೆ ತುಪ್ಪ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.

ತಲೆಹೊಟ್ಟು ಸಮಸ್ಯೆ: ತಲೆಹೊಟ್ಟು ಸಮಸ್ಯೆಯಿದ್ದರೆ ತುಪ್ಪವನ್ನು ಉಪಯೋಗಿಸಿ ಪರಿಹಾರ ಪಡೆಯಬಹುದು. ಇದರಲ್ಲಿರುವ ವಿಟಮಿನ್ ಇ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಲೆಹೊಟ್ಟು ಹೋಗಲಾಡಿಸಲು ನಿಮ್ಮ ಕೂದಲನ್ನು ತುಪ್ಪದಿಂದ ಮಸಾಜ್ ಮಾಡಬಹುದು.

ಇದನ್ನೂ ಓದಿ: ಕೇವಲ 2 ನಿಮಿಷದಲ್ಲಿ ಕೊಳಕು ಹಳದಿ ಹಲ್ಲು ಮುತ್ತಿನಂತೆ ಹೊಳೆಯಲು ಇದೊಂದೇ ಉಪಾಯ.!

ಕೂದಲು ಬೆಳವಣಿಗೆ: ತುಪ್ಪದಲ್ಲಿ ಪ್ರೋಟೀನ್ ಮತ್ತು ಅನೇಕ ವಿಟಮಿನ್ ಗಳು ಕಂಡುಬರುತ್ತವೆ. ಇದು ಕೂದಲನ್ನು ದಪ್ಪವಾಗಿಸುತ್ತದೆ. ಇದು ಕೂದಲನ್ನು ಒಡೆಯದಂತೆ ರಕ್ಷಿಸುತ್ತದೆ. ದಪ್ಪ ಕೂದಲು ಬೇಕೆಂದರೆ ತುಪ್ಪ ಬಳಸಬಹುದು.

ನೈಸರ್ಗಿಕ ಕಂಡಿಷನರ್: ತುಪ್ಪದ ಬಳಕೆಯಿಂದ ಕೂದಲಿಗೆ ತೇವಾಂಶ ಸಿಗುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಇ ನೆತ್ತಿಯ ಸ್ಥಿತಿಯನ್ನು ಸುಧಾರಿಸುತ್ತದೆ. ಇದರಿಂದ ಕೂದಲನ್ನು ಹೊಳೆಯುವಂತೆ ಮಾಡಬಹುದು.

ಮೃದುವಾದ ಕೂದಲು: ಆಂಟಿ ಆಕ್ಸಿಡೆಂಟ್ ಗುಣಗಳು ತುಪ್ಪದಲ್ಲಿ ಕಂಡುಬರುತ್ತವೆ. ಇದರ ಬಳಕೆಯಿಂದ ಕೂದಲಿನ ಕೊಳೆಯನ್ನು ತೆಗೆದುಹಾಕಬಹುದು. ಇದರಿಂದಾಗಿ ನಿಮ್ಮ ಕೂದಲು ದಪ್ಪ ಮತ್ತು ಮೃದುವಾಗಬಹುದು.

ಇದನ್ನೂ ಓದಿ: ತೆಂಗೆನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ, ಮರಳಿ ಬರೋದಿಲ್ಲ.!

ಬಿಳಿ ಕೂದಲು: ತುಪ್ಪವನ್ನು ಬಳಸುವುದರಿಂದ ಬಿಳಿ ಕೂದಲು ಸಮಸ್ಯೆಯಿಂದ ಸಹ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಇ ಕೂದಲಿನ ಕೆರಾಟಿನ್ ಅನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನೀವು ಕೂದಲಿನ ಸಮಸ್ಯೆಗಳನ್ನು ತಪ್ಪಿಸಬಹುದು.

ತುಪ್ಪವನ್ನು ಕೂದಲಿಗೆ ಹೇಗೆ ಬಳಸುವುದು? 

ಕೂದಲಿಗೆ ತುಪ್ಪವನ್ನು ಹಚ್ಚಿ ಮಸಾಜ್‌ ಮಾಡಬೇಕು. ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ನೆತ್ತಿಗೆ ಹಚ್ಚಿ, ಬೆರಳುಗಳಿಂದ ಮಸಾಜ್‌ ಮಾಡಿಕೊಳ್ಳಬೇಕು. ಕೂದಲಿನ ಬೇರುಗಳಿಗೆ ಮಸಾಜ್‌ ಮಾಡಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News