ಬೆಂಗಳೂರು : ಕೂದಲು ಒಣಗುವುದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಲ್ಲಿ ಒಂದಾಗಿದೆ. ಒಣ ಕೂದಲಿನ ಸಮಸ್ಯೆ ಪರಿಹಾರಕ್ಕೆ ಅನೇಕ ಮಹಿಳೆಯರು ಸಲೂನ್‌ನಿಂದ ಕೆರಾಟಿನ್ ಟ್ರೀಟ್ ಮೆಂಟ್ ಪಡೆಯುತ್ತಾರೆ. ಆದರೆ ಇದು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ.   ಅಲ್ಲದೆ ಇದರಲ್ಲಿ ರಾಸಾಯನಿಕಗಳನ್ನು ಕೂಡಾ ಬಳಸುವುದರಿಂದ ಕೂದಲಿಗೆ  ಹಾನಿಯಗುವುದರಲ್ಲಿ ಕೂಡಾ ಯಾವುದೇ ಸಂದೇಹವಿಲ್ಲ. ಆದರೆ ಈ ಒಂದು ಮನೆ ಮದ್ದಿನ ಮೂಲಕ ಶುಷ್ಕ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.  ಈ ಮನೆ ಮದ್ದಿಗೆ ಹೆಚ್ಚು ಖರ್ಚು ಮಾಡುವ ಅಗತ್ಯ ಕೂಡಾ ಇಲ್ಲ.  


COMMERCIAL BREAK
SCROLL TO CONTINUE READING

ರೇಷ್ಮೆಯಂತಹ ಕೂದಲು ಪಡೆಯಲು ಮಜ್ಜಿಗೆ ಬಳಕೆ : 
ರೇಷ್ಮೆಯಂತಹ ಕೂದಲಿಗೆ ಮಜ್ಜಿಗೆಯನ್ನು ಹೇಗೆ ಬಳಸುವುದು ? 
ಮಜ್ಜಿಗೆ ಸಾಮಾನ್ಯವಾಗಿ ಆಹಾರದ ಒಂದು ಭಾಗವಾಗಿದೆ. ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು   ಉಪಯುಕ್ತವಾಗಿದೆ. ಆದರೆ, ಕೂದಲ ಆರೋಗ್ಯದಲ್ಲಿ ಕೂಡಾ ಮಜ್ಜಿಗೆ ಪ್ರಮುಖ ಪಾತ್ರ ವಹಿಸುತ್ತದೆ. 


ಇದನ್ನೂ ಓದಿ : ಜಿಮ್, ಡಯಟ್ ಜಂಜಾಟವೇ ಬೇಡ ! ಈ ಹಣ್ಣುಗಳನ್ನು ಸೇವಿಸಿದರೆ ಸಾಕು ಸಣ್ಣಗಾಗುವುದು ದುಂಡು ಹೊಟ್ಟೆ


ಕೂದಲಿಗೆ ಮಜ್ಜಿಗೆ ಹಚ್ಚುವ ಉತ್ತಮ ವಿಧಾನವೆಂದರೆ, ಅದರಿಂದ ನಿಮ್ಮ ಕೂದಲನ್ನು ತೊಳೆಯುವುದು. ನಿಮ್ಮ ಕೂದಲನ್ನು ಮಜ್ಜಿಗೆಯಿಂದ ತೊಳೆದರೆ ನಿಮ್ಮ ಕೂದಲು ರೇಷ್ಮೆಯಂತಹ ನಯವಾಗಿರುತ್ತದೆ. ಮಜ್ಜಿಗೆಯು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ.  ಇದು ನೆತ್ತಿಯಿಂದ ಡೆಡ್ ಸೆಲ್ಸ್ ಅನ್ನು ತೆಗೆದು ಹಾಕುತ್ತದೆ. ಕೂದಲನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಇದಲ್ಲದೆ, ಮಜ್ಜಿಗೆ ಕೂದಲನ್ನು ಮೃದುವಾಗಿಸುವುದಲ್ಲದೆ ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. 


ಮಜ್ಜಿಗೆಯಿಂದ ಕೂದಲನ್ನು ತೊಳೆಯಲು ಕೂದಲಿನ ಬುಡದಿಂದ ತುದಿಯವರೆಗೂ ಮಜ್ಜಿಗೆಯನ್ನು ಹಚ್ಚಬೇಕು. ರಕ್ತ ಪರಿಚಲನೆ ಸುಧಾರಿಸಲು ಸ್ವಲ್ಪ ಸಮಯದವರೆಗೆ ನಿಮ್ಮ ಬೆರಳುಗಳಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. 10 ರಿಂದ 15 ನಿಮಿಷಗಳ ಕಾಲ ಮಜ್ಜಿಗೆಯನ್ನು ನೆತ್ತಿಯ ಮೇಲೆ ಹಾಗೆಯೇ ಬಿಡಿ. ನಂತರ, ಕೂದಲನ್ನು ನೀರಿನಿಂದ ತೊಳೆಯಿರಿ. ಮಜ್ಜಿಗೆಯಿಂದ ಕೂದಲು ತೊಳೆದ ನಂತರ ಕಂಡೀಶನರ್ ಹಚ್ಚಬಹುದು. ಇದು ಕೂದಲನ್ನು ಹೆಚ್ಚು ಸುಂದರವಾಗಿಸುತ್ತದೆ.


ಇದನ್ನೂ ಓದಿ : ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೇವಲ ಈ ಪದಾರ್ಥಗಳಿದ್ದರೆ ಸಾಕು


ಮಜ್ಜಿಗೆಯಿಂದ ಕೂದಲು ತೊಳೆಯುವುದರಿಂದ ಆಗುವ ಪ್ರಯೋಜನಗಳು 
* ಕೂದಲು ಉದುರುವುದನ್ನು ತಡೆಯುತ್ತದೆ. 
* ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
* ಕೂದಲು ಹೊಳೆಯುವಂತೆ ಮಾಡುತ್ತದೆ.
* ಬಿಳಿ ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ.


ಮಜ್ಜಿಗೆಯಲ್ಲಿ ಕಂಡುಬರುವ ಪೋಷಕಾಂಶಗಳು : 
 ಮಜ್ಜಿಗೆಯಲ್ಲಿನ ಪೋಷಕಾಂಶಗಳು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಇದು ಲ್ಯಾಕ್ಟಿಕ್ ಆಮ್ಲ, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ವಿಟಮಿನ್ ಡಿ, ಎ, ಬಿ -12, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತದೆ. ಇದು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.