ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಅನೇಕ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಸಲೂನ್ ನಲ್ಲಿ ಹಲವು ಐಷಾರಾಮಿ ಹಾಗೂ ದುಬಾರಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವೆಲ್ಲವೂ ಕೆಮಿಕಲ್ ಯುಕ್ತ ಎನ್ನುವುದು ಕೂಡಾ ಸತ್ಯ.ಕೂದಲಿಗೆ ರಾಸಾಯನಿಕ ಮುಕ್ತ ಉತ್ಪನ್ನವನ್ನು ಹುಡುಕುತ್ತಿದ್ದರೆ, ಕ್ಯಾರೆಟ್ ಅತ್ಯುತ್ತಮ ಆಯ್ಕೆ. ವಿಟಮಿನ್ ಎ, ಬಿ6, ಬಿ1, ಬಿ3, ಬಿ2, ಕೆ ಮತ್ತು ಸಿ ಯಲ್ಲಿ ಸಮೃದ್ಧವಾಗಿರುವ ಕ್ಯಾರೆಟ್, ಮನೆಯಲ್ಲಿಯೇ ಕೂದಲಿಗೆ ಸಲೂನ್ ಟ್ರೀಟ್ ಮೆಂಟ್ ನೀಡುತ್ತದೆ. ಇದು ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ಸತು, ರಂಜಕ, ಬೀಟಾ-ಕ್ಯಾರೋಟಿನ್ ಸೇರಿದಂತೆ ಅನೇಕ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. 


COMMERCIAL BREAK
SCROLL TO CONTINUE READING

ಕ್ಯಾರೆಟ್ ಕೂದಲಿಗೆ ಪ್ರಯೋಜನಕಾರಿ : 
ಕ್ಯಾರೆಟ್‌ನಲ್ಲಿರುವ ಬಯೋಟಿನ್‌ನಂತಹ ಅಂಶಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕೂದಲು ಒಡೆಯುವುದನ್ನು ಕಡಿಮೆ ಮಾಡುತ್ತದೆ.ಅಧ್ಯಯನದ ಪ್ರಕಾರ,ವಿಟಮಿನ್ ಎ ಕೊರತೆಯಿಂದಾಗಿ ಕೂದಲು ಒಣಗಿ ನಿರ್ಜೀವವಾಗುತ್ತದೆ ಮತ್ತು ತೆಳುವಾಗುತ್ತದೆ.ಕ್ಯಾರೆಟ್‌ನಲ್ಲಿರುವ ಬಯೋಟಿನ್ ಮತ್ತು ವಿಟಮಿನ್ ಎ ಕೆರಾಟಿನ್ ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇ ಕೂಡಾ ಕೂದಲಿಗೆ ಪೋಷಣೆ ನೀಡುತ್ತವೆ. ಕ್ಯಾರೆಟ್‌ಗಳು ಅನೇಕ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.ಕ್ಯಾರೆಟ್ ಎಣ್ಣೆ ಕೂಡಾ ಕೂದಲಿಗೆ ಟಾನಿಕ್ ಇದ್ದಂತೆ.ಈ ಎಣ್ಣೆಯಲ್ಲಿ ಕ್ಯಾರಿಟೋಲ್,ಲೈಕೋಪೀನ್,ಕೆಫೀಕ್ ಆಸಿಡ್, ಪಾಲಿಅಸೆಟಿಲೀನ್ ಮತ್ತು ಆಂಥೋಸಯಾನಿನ್ ಅಂಶಗಳಿವೆ. ಇದು ನೆತ್ತಿಯ ಬ್ಯಾಕ್ಟೀರಿಯಾ ಮತ್ತು ಸೋಂಕನ್ನು ತೆಗೆದುಹಾಕುತ್ತದೆ. ಕ್ಯಾರೆಟ್ ಬಯೋಆಕ್ಟಿವ್ ಪಾಲಿಅಸೆಟಿಲೀನ್ ಅನ್ನು ಹೊಂದಿರುತ್ತದೆ.ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್,ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.ಕ್ಯಾರೆಟ್ ಕಣ್ಣಿಗೆ ಮಾತ್ರವಲ್ಲ ಕೂದಲಿಗೂ ಸೂಪರ್ ಫುಡ್ ಇದ್ದಂತೆ.ಇದು ಕೂದಲು ಬಿಳಿಯಾಗುವುದನ್ನು ಕೂಡಾ ನಿಧಾನಗೊಳಿಸುತ್ತದೆ.


ಇದನ್ನೂ ಓದಿ :  Side Effect Of Drinking Cold Water: ಫ್ರಿಡ್ಜ್‌ನಿಂದ ತಣ್ಣೀರು ಕುಡಿಯುವ ಮೊದಲು, ಈ 5 ವಿಷಯಗಳನ್ನು ತಿಳಿದುಕೊಳ್ಳಿ..!


ಕ್ಯಾರೆಟ್ ಹೇರ್ ಮಾಸ್ಕ್  :
ಕ್ಯಾರೆಟ್ ಹೇರ್ ಮಾಸ್ಕ್ ಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಅವುಗಳ ನಿಯಮಿತ ಬಳಕೆಯಿಂದ,ಕೂದಲು ದಪ್ಪ,ಕಪ್ಪು,ಉದ್ದ ಮತ್ತು  ಕಾಂತಿಯುತವಾಗುತ್ತದೆ.  


ಹೇರ್ ಮಾಸ್ಕ್ 1:  
ಬೇಕಾಗುವ ಸಾಮಗ್ರಿ :

ಕ್ಯಾರೆಟ್ - 1
ಆಲಿವ್ ಎಣ್ಣೆ - 2 ಟೀಸ್ಪೂನ್
ಈರುಳ್ಳಿ - 1
ನಿಂಬೆ ರಸ - 2 ಟೀಸ್ಪೂನ್


ವಿಧಾನ: ಮೊದಲನೆಯದಾಗಿ,ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಈಗ ಅದಕ್ಕೆ ಎರಡು ಚಮಚ ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿ. ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಈ ಹೇರ್ ಪ್ಯಾಕ್ ಹಚ್ಚಿ. ಕನಿಷ್ಠ 20 ನಿಮಿಷಗಳವರೆಗೆ ಒಣಗಲು ಬಿಡಿ.ನಂತರ ಶಾಂಪೂ ಮಾಡಿ. 


ಇದನ್ನೂ ಓದಿ :  ನಿಮ್ಮ ಕಂಕುಳ ಕಪ್ಪಾಗಿದೆಯೇ? ಈ ಪುಡಿಯನ್ನು ಹಚ್ಚಿದ್ರೆ ಚಿಟಿಕೆಯಲ್ಲಿ ಕಪ್ಪು ಕಲೆ ಹೋಗಿ ಬಿಳಿಯಾದ ಅಂಡರ್ ಆರ್ಮ್ಸ್ ನಿಮ್ಮದಾಗುತ್ತೆ!


ಹೇರ್ ಮಾಸ್ಕ್ 2 - 
ಬೇಕಾಗುವ ಸಾಮಗ್ರಿ :

ಕ್ಯಾರೆಟ್ - 1
ಮೊಸರು - 2 ಟೀಸ್ಪೂನ್
ಜೇನುತುಪ್ಪ - 1 ಟೀಸ್ಪೂನ್
ವಿಧಾನ: ಮೊದಲು ಕ್ಯಾರೆಟ್ ಅನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.ಈಗ ಅದಕ್ಕೆ ಮೊಸರು ಮತ್ತು ಜೇನುತುಪ್ಪ ಸೇರಿಸಿ.ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಕೂದಲು ಮತ್ತು ನೆತ್ತಿಯ ಮೇಲೆ  ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಟ್ಟು ನಂತರ ಶಾಂಪೂ ಮತ್ತು ಕಂಡೀಷನರ್ ಮಾಡಿ.


ಹೇರ್ ಮಾಸ್ಕ್ 3 - 
ಬೇಕಾಗುವ ಸಾಮಗ್ರಿ : 

ಕ್ಯಾರೆಟ್ - 1
ಅಲೋವೆರಾ ಜೆಲ್ - 1 ಟೀಸ್ಪೂನ್
ತೆಂಗಿನ ಎಣ್ಣೆ - 1 ಟೀಸ್ಪೂನ್
ವಿಧಾನ: ಮೊದಲು ಕ್ಯಾರೆಟ್ ಪೇಸ್ಟ್ ಮಾಡಿ. ಈಗ ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.ಈ ಮಾಸ್ಕ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಸಂಪೂರ್ಣವಾಗಿ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಕೂದಲಿನ ಮೇಲೆ ಹಾಗೆಯೇ ಬಿಡಿ. ನಂತರ ಶಾಂಪೂ ಮತ್ತು ಕಂಡಿಷನರ್ ಮಾಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ