ನಿಮ್ಮ ಕಂಕುಳ ಕಪ್ಪಾಗಿದೆಯೇ? ಈ ಪುಡಿಯನ್ನು ಹಚ್ಚಿದ್ರೆ ಚಿಟಿಕೆಯಲ್ಲಿ ಕಪ್ಪು ಕಲೆ ಹೋಗಿ ಬಿಳಿಯಾದ ಅಂಡರ್ ಆರ್ಮ್ಸ್ ನಿಮ್ಮದಾಗುತ್ತೆ!

Underarm Black Removal Home Remedies: ಅಂಡರ್ ಆರ್ಮ್ಸ್ ಕಪ್ಪು ಆಗಲು ಕಾರಣ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು. ಹೈಪರ್ಪಿಗ್ಮೆಂಟೇಶನ್, ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕೂದಲು ತೆಗೆಯಲು ರೇಜರ್ ಬಳಸುವುದು ಮತ್ತು ಆ ಪ್ರದೇಶದಲ್ಲಿ ಡೆಡ್ ಸ್ಕಿನ್ ಸಂಗ್ರಹವಾಗುವುದು ಸಹ ಇದಕ್ಕೆ ಕಾರಣ.

Written by - Bhavishya Shetty | Last Updated : Apr 6, 2024, 04:12 PM IST
    • ಅಂಡರ್ ಆರ್ಮ್ಸ್ ಕಪ್ಪು ಆಗಲು ಕಾರಣ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು
    • ಅಂಡರ್ ಆರ್ಮ್ಸ್ ಡಾರ್ಕ್ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ
    • ಇದನ್ನು ಕೆಲವು ಮನೆಮದ್ದುಗಳ ಮೂಲಕ ಹೋಗಲಾಡಿಸಬಹುದು.
ನಿಮ್ಮ ಕಂಕುಳ ಕಪ್ಪಾಗಿದೆಯೇ? ಈ ಪುಡಿಯನ್ನು ಹಚ್ಚಿದ್ರೆ ಚಿಟಿಕೆಯಲ್ಲಿ ಕಪ್ಪು ಕಲೆ ಹೋಗಿ ಬಿಳಿಯಾದ ಅಂಡರ್ ಆರ್ಮ್ಸ್ ನಿಮ್ಮದಾಗುತ್ತೆ! title=
underarms whitening

Underarm Black Removal Home Remedies: ಅಂಡರ್ ಆರ್ಮ್ಸ್‌’ನಿಂದಾಗಿ, ನಿಮ್ಮ ನೆಚ್ಚಿನ ಉಡುಪನ್ನು ಧರಿಸಲು ಸಾಧ್ಯವಾಗುತ್ತಿಲ್ಲವೇ? ಇದಕ್ಕೆಲ್ಲಾ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಮಸ್ಯೆಗಳ ಬಗ್ಗೆ ನಾಚಿಕೆಪಡುವ ಬದಲು ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಅದರಿಂದ ಶೀಘ್ರ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ಮಧುಮೇಹ ಇದ್ದವರು ಈ ತರಕಾರಿ ಸೇವಿಸಿ, ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ಬ್ಲಡ್ ಶುಗರ್ !

ಅಂಡರ್ ಆರ್ಮ್ಸ್ ಕಪ್ಪು ಆಗಲು ಕಾರಣ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು. ಹೈಪರ್ಪಿಗ್ಮೆಂಟೇಶನ್, ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕೂದಲು ತೆಗೆಯಲು ರೇಜರ್ ಬಳಸುವುದು ಮತ್ತು ಆ ಪ್ರದೇಶದಲ್ಲಿ ಡೆಡ್ ಸ್ಕಿನ್ ಸಂಗ್ರಹವಾಗುವುದು ಸಹ ಇದಕ್ಕೆ ಕಾರಣ.

ಅಂಡರ್ ಆರ್ಮ್ಸ್ ಡಾರ್ಕ್ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೆಲವು ಮನೆಮದ್ದುಗಳ ಮೂಲಕ ಹೋಗಲಾಡಿಸಬಹುದು.

ನಿಂಬೆ ರಸ: ನಿಂಬೆ ರಸವನ್ನು ಕಂಕುಳಕ್ಕೆ ಹಚ್ಚುವುದರಿಂದ ಚರ್ಮದ ಕಪ್ಪನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ನಿಂಬೆಹಣ್ಣಿನ ರಸವನ್ನು ಕಂಕುಳಕ್ಕೆ ಹಚ್ಚಿ 15-20 ನಿಮಿಷಗಳ ನಂತರ ತೊಳೆಯಿರಿ.

ಅಡಿಗೆ ಸೋಡಾ: ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಬಳಿಕಿ ಅದನ್ನು ಅಂಡರ್ ಆರ್ಮ್ಸ್ ಮೇಲೆ ಉಜ್ಜಿಕೊಳ್ಳಿ. ಇದರಿಂದ ತ್ವಚೆಯ ಕಪ್ಪನ್ನು ಕಡಿಮೆ ಮಾಡಬಹುದು.

ಆಲೂಗಡ್ಡೆ ರಸ: ಆಲೂಗೆಡ್ಡೆಯ ರಸವನ್ನು ಕಂಕುಳಕ್ಕೆ ಹಚ್ಚುವುದರಿಂದ ತ್ವಚೆಯ ಕಪ್ಪನ್ನೂ ಕಡಿಮೆ ಮಾಡಬಹುದು. ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಅದರ ರಸವನ್ನು ಹಿಂಡಿ, ಕಂಕುಳಕ್ಕೆ ಹಚ್ಚಿದರೆ ಸಾಕು.

ತುಳಸಿ ಎಲೆಗಳು: ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ತೆಗೆದು ಕಂಕುಳಕ್ಕೆ ಹಚ್ಚಿಕೊಳ್ಳಿ. ಇದು ಚರ್ಮದ ಕಪ್ಪನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಲ್ತಾನಿ ಮಿಟ್ಟಿ: ಮುಲ್ತಾನಿ ಮಿಟ್ಟಿಯನ್ನು ನೀರು ಮತ್ತು ರೋಸ್ ವಾಟರ್‌ಗೆ ಬೆರೆಸಿ ಪೇಸ್ಟ್ ತಯಾರಿಸಿ. ಅದನ್ನು ಕಂಕುಳಕ್ಕೆ ಹಚ್ಚಿ. ಇದರಿಂದ ತ್ವಚೆಯ ಕಪ್ಪನ್ನು ಕಡಿಮೆ ಮಾಡಬಹುದು.

ತುಪ್ಪ ಮತ್ತು ಅರಿಶಿನ: ಅರಿಶಿನವನ್ನು ತುಪ್ಪದಲ್ಲಿ ಬೆರೆಸಿ ಕಂಕುಳಕ್ಕೆ ಹಚ್ಚಿಕೊಳ್ಳಿ. ಅರಿಶಿನದ ನೈಸರ್ಗಿಕ ಗುಣಲಕ್ಷಣಗಳು ಚರ್ಮದ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Summer Herbs: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಅದ್ಭುತ ಗಿಡಮೂಲಿಕೆಗಳು!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News