Skin Care Tips: ಉತ್ತಮ ಆರೋಗ್ಯಕ್ಕೆ ಮೆಂತ್ಯ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಈ ಮೆಂತ್ಯ ಕಾಳುಗಳ ಸಹಾಯದಿಂದ ಆರೋಗ್ಯಕರ, ಆಕರ್ಷಕ ತ್ವಚೆಯನ್ನೂ ನಿಮ್ಮದಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಚರ್ಮ ರೋಗ ತಜ್ಞರ ಪ್ರಕಾರ, ಚರ್ಮದ ಆರೈಕೆಯಲ್ಲಿ ಮೆಂತ್ಯ ಬೀಜಗಳು ತುಂಬಾ ಪ್ರಯೋಜನಕಾರಿ ಆಗಿವೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಮೆಂತ್ಯ ಬೀಜದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ನಂತಹ ಹಲವು ಖನಿಜಗಳು ಕಂಡು ಬರುತ್ತದೆ. ಇದರ ಬಳಕೆಯಿಂದ ಕೂದಲು ಉದುರುವಿಕೆ, ತಲೆಹೊಟ್ಟು ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಾತ್ರವಲ್ಲ, ಇದು ಚರ್ಮಕ್ಕೂ ಪ್ರಯೋಜನಕಾರಿ ಆಗಿದೆ. ಮೆಂತ್ಯ ಬೀಜಗಳ ಸಹಾಯದಿಂದ ನೈಸರ್ಗಿಕವಾಗಿ ಆರೋಗ್ಯಕರವಾದ ಕಾಂತಿಯುತ ತ್ವಚೆಯನ್ನು ನಮ್ಮದಾಗಿಸಬಹುದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಮೆಂತ್ಯವನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. 


ಇದನ್ನೂ ಓದಿ- ಕಾಫಿ ಪುಡಿ ʼಕಾಫಿʼ ಬಳಕೆಯಲ್ಲಿ ಮಾತ್ರವಲ್ಲದೇ ಇದು ಸೌಂದರ್ಯವರ್ಧಕ ಕೂಡ ಹೌದು..!


ಮಾಯಿಶ್ಚರೈಸರ್‌ ಆಗಿ ಮೆಂತ್ಯ ಬಳಕೆ: 
ಮೆಂತ್ಯವನ್ನು ಉತ್ತಮ ಮಾಯಿಶ್ಚರೈಸರ್‌ ಆಗಿ ಬಳಸಬಹುದು. ಕಾರಣ, ಮೆಂತ್ಯವು ಚರ್ಮದಿಂದ ಶುಷ್ಕತೆಯನ್ನು ತೊಡೆದು ಹಾಕಿ ಚರ್ಮವನ್ನು ಹೈಡ್ರೇಟ್ ಮಾಡಿ ಪೋಷಿಸುತ್ತದೆ.  ಮೆಂತ್ಯ ಬೀಜಗಳು ನೈಸರ್ಗಿಕ ತೈಲಗಳು, ಲಿಪಿಡ್ಗಳು ಮತ್ತು ಲೋಳೆಗಳನ್ನು ಹೊಂದಿರುತ್ತವೆ, ಇದು ಚರ್ಮವನ್ನು ಹೈಡ್ರೇಟ್ ಮಾಡಲು, ಆರ್ಧ್ರಕಗೊಳಿಸಲು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ. 


ಮೆಂತ್ಯ ಬೀಜಗಳನ್ನು ಈ ರೀತಿ ಬಳಸಿ: 
ಮೆಂತ್ಯ ಬೀಜಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ಇದನ್ನು ನೆನೆಸಿ ಇಡಿ. ಬಳಿಕ ಇದನ್ನು ಮಿಕ್ಸರ್ ನಲ್ಲಿ ಹಾಕಿ ಇದಕ್ಕೆ 2 ಸ್ಪೂನ್ ಮೊಸರು, 1 ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ವಾರಕ್ಕೆ ಒಂದೆರಡು ಬಾರಿ ಇದನ್ನು ಮುಖಕ್ಕೆ ಹೆಚ್ಚುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 


ಇದನ್ನೂ ಓದಿ- Beauty Tips : ಎಣ್ಣೆಯುಕ್ತ ತ್ವಚೆಯ ಆರೈಕೆಗಾಗಿ ಇಲ್ಲಿವೆ ಕೆಲವು ವಿಶೇಷ ಸಲಹೆಗಳು


ತ್ವಚೆಗೆ ಮೆಂತ್ಯ ಬಳಕೆಯಿಂದ ಸಿಗುವ ಪ್ರಯೋಜನಗಳೇನು? 
ಚರ್ಮ ತಜ್ಞರ ಪ್ರಕಾರ, ಮುಖಕ್ಕೆ ಮೆಂತ್ಯ ಬಳಕೆಯಿಂದ ಹಲವು ಪ್ರಯೋಜನಗಳಿವೆ. ಅವುಗಳೆಂದರೆ... 
>> ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕಾಗಿ ಇದು ತುಂಬಾ ಉಪಯುಕ್ತವಾಗಿದೆ. >> ಮೆಂತ್ಯ ಬೀಜಗಳಲ್ಲಿರುವ ಗುಣಲಕ್ಷಣಗಳಿಂದಾಗಿ, ಮೆಂತ್ಯವು ಮುಖವನ್ನು ತೇವಗೊಳಿಸುತ್ತದೆ ಮತ್ತು ತೇವಾಂಶವನ್ನು ಹೆಚ್ಚಿಸುತ್ತದೆ.
>> ಮುಖಕ್ಕೆ ನಿಯಮಿತವಾಗಿ ಮೆಂತ್ಯ ಬೀಜವನ್ನು ಬಳಸುವುದರಿಂದ ಚರ್ಮವನ್ನು ಮೃದು, ಸುಂದರ ಮತ್ತು ಹೊಳೆಯುವಂತೆ ಮಾಡುತ್ತದೆ. 
>> ಮೆಂತ್ಯವು ತ್ವಚೆಗೆ ವಯಸ್ಸಾಗುವುದನ್ನು ತಡೆಯುವ ಗುಣಗಳಿಂದ ಸಮೃದ್ಧವಾಗಿದೆ. ಇದು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. 
>> ಮೆಂತ್ಯವು ಚರ್ಮದ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮುಖದ ಹೊಳಪನ್ನು ಹೆಚ್ಚಿಸುತ್ತದೆ. 
>> ಮುಖದ ಕಲೆಗಳು, ಮೊಡವೆಗಳಿಗೆ ಚಿಕಿತ್ಸೆ ನೀಡಲು ಮತ್ತು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹ ಮೆಂತ್ಯ ಅತ್ಯುತ್ತಮ ಮನೆಮದ್ದು ಎಂದು ಸಾಬೀತುಪಡಿಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ