ಬೆಂಗಳೂರು : ಕೂದಲು ಬಿಳಿಯಾಗುವುದು ಬಹುತೇಕರನ್ನು ಕಾಡುವ ಸಮಸ್ಯೆ.  ವಯಸ್ಸಾದ ಕಾರಣ ಕೂದಲು ಬಿಳಿಯಾಗುವುದು ಸಹಜ ಪ್ರಕ್ರಿಯೆ. ಆದರೆ ಕಿರಿ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಹಜವಲ್ಲ. ಇದು ಮುಜುಗರಕ್ಕೆ ಕಾರಣವಾಗುತ್ತದೆ. ಕೂದಲು ಬಿಳಿಯಾಯಿತು ಎಂದು ಕೂದಲಿಗೆ ಬಣ್ಣ ಹಚ್ಚುವುದರಿಂದ ಕೂದಲ ಆರೋಗ್ಯ ಹದಗೆಡುವುದು ಗ್ಯಾರಂಟಿ. ಅಲ್ಲದೆ ಇದರಿಂದ ಚರ್ಮದ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುವ ಸಾಧ್ಯತೆ ಕೂಡಾ  ಹೆಚ್ಚು. ಅದರ ಬದಲು ನೈಸರ್ಗಿಕ ಹೇರ್ ಡೈ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹೇರ್ ಡೈಗಿಂತ ಇದು ಬಹಳಷ್ಟು ಪ್ರಯೋಜನಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ನಾವು ಹೇಳುತ್ತಿರುವಂತೆ ನ್ಯಾಚ್ಯುರಲ್ ಬಣ್ಣ ತಯಾರಿಸುವುದಕ್ಕಾಗಿ ಮಾವಿನ ಎಲೆಗಳು ಬೇಕಾಗುತ್ತವೆ. ಮಾವಿನ ಎಲೆಗಳಲ್ಲಿ ಕೂದಳಿಗೆ ಕಪ್ಪು ಬಣ್ಣ ನೀಡುವ ಅನೇಕ ಗಣಗಳಿವೆ. ಇವುಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರವಿದ್ದು ಇದು ಕೂದಲಿಂ ಆರೋಗ್ಯವನ್ನು ಹೆಚ್ಚಿಸುತ್ತದೆ. ಮಾವಿನ ಎಲೆಗಳಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್ ಗಳು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಹಾಗಿದ್ದರೆ ಈ ಎಲೆಗಳನ್ನು ಕೂದಲಿಗೆ ಹೇಗೆ ಹಚ್ಚುವುದು ನೋಡೋಣ. 


ಇದನ್ನೂ ಓದಿ : ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಹೆಚ್ಚಿನ ಜನರು ಹುಷಾರು ತಪ್ಪುವುದೇಕೆ?


ಬಿಳಿ ಕೂದಲಿಗೆ ಮಾವಿನ ಎಲೆ  : 
ಮಾವಿನ ಎಲೆಗಳನ್ನು ಬಿಳಿ ಕೂದಲಿಗೆ ಹಚ್ಚುವ ಮೊದಲ ವಿಧಾನವೆಂದರೆ ಈ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈ ಎಲೆಗಳನ್ನು ನುಣ್ಣಗೆ ರುಬ್ಬಿದ ನಂತರ, ಅವುಗಳನ್ನು ಕೂದಲಿನ ಎಲ್ಲಾ ಭಾಗಗಳಿಗೆ ಹಚ್ಚಿ. ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಕೂದಲಿನ ಮೇಲೆ ಈ ಪೇಸ್ಟ್ ಅನ್ನು ಹಾಗೆಯೇ ಬಿಡಿ. ಮಾವಿನ ಎಳೆಯ ಪೇಸ್ಟ್ ಅನ್ನು ಈ ರೀತಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಮತ್ತು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. 


ಮಾವಿನ ಎಲೆಗಳನ್ನು ಕೂದಲಿಗೆ ಹಚ್ಚುವ ಇನ್ನೊಂದು ವಿಧಾನವೆಂದರೆ ಈ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸುವುದು. ನೀರಿನ ಬಣ್ಣ ಬದಲಾದಾಗ, ಅದನ್ನು ಗ್ಯಾಸ್ ನಿಂದ ಕೆಳಗಿಳಿಸಿ. ಈ ನೀರನ್ನು ಕೂದಲಿನ ಮೇಲೆ  ಬುಡದಿಂದ  ತುದಿಯವರೆಗೆ  ಹಚ್ಚಿ. ಈ ನೀರನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ :ಮಹಿಳೆಯ ದೇಹದ ಈ ಭಾಗ ನೋಡಿ ಹೇಳಬಹುದು ಆಕೆ ಎಂಥವಳು ಅಂತಾ!!


ಈ ಎಲೆಗಳನ್ನು ಬಳಸುವ ಮೂರನೇ ವಿಧಾನವೆಂದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡುವುದು. ಈ ಎಲೆಗಳಿಗೆ  ಬ್ಲಾಕ್ ಟೀ ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳವರೆಗೆ ಹಾಗೆಯೇ ಇರಿಸಿ ನಂತರ ತೊಳೆಯಿರಿ. ಹೆಚ್ಚಿನ ಪರಿಣಾಮಕ್ಕಾಗಿ ಈ ಪೇಸ್ಟ್‌ಗೆ ಮೆಹಂದಿಯನ್ನು ಕೂಡಾ ಸೇರಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.