ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಈ 5 ಸಿಂಪಲ್ ಟಿಪ್ಸ್ ಟ್ರೈ ಮಾಡಿ

Home Remedies: ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಕೆಲವರಲ್ಲಿ ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಗೆ ಇರುವ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. 

Written by - Yashaswini V | Last Updated : Oct 30, 2023, 03:15 PM IST
  • ನಿಮಗೂ ಕುತ್ತಿಗೆ ಸುತ್ತ ಕಪ್ಪು ಕಲೆ ಬಾಧಿಸುತ್ತಿದೆಯೇ?
  • ಡೋಂಟ್ ವರಿ, ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಇದಕ್ಕೆ ಪರಿಹಾರ
  • ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಇಲ್ಲಿವೆ ಅತ್ಯುತ್ತಮ ಮನೆಮದ್ದು
ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಈ 5 ಸಿಂಪಲ್ ಟಿಪ್ಸ್ ಟ್ರೈ ಮಾಡಿ  title=

Home Remedies: ಕುತ್ತಿಗೆ ಕಪ್ಪಾಗುವುದು ಸರ್ವೇ ಸಾಮಾನ್ಯ. ಆದರೆ, ಕೆಲವರಲ್ಲಿ ಇದು ಅವರ ವಿಶ್ವಾಸವನ್ನು ಕುಂದಿಸುತ್ತದೆ. ಅವರಿಗೆ ಇಷ್ಟವಾದ ಉಡುಗೆ ತೊಡಲು ಸಹ ಇದು ಅಡ್ಡಿಯಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಬೇಸರಗೊಳ್ಳುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದಾಗಿದೆ. 

ನಿಮ್ಮ ಕುತ್ತಿಗೆ ಸುತ್ತಲಿನ ಕಪ್ಪುಕಲೆ ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದು:- 
ಹಸಿ ಹಾಲು: 

ಒಂದು ಕಪ್ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ನಿಮ್ಮ ಕುತ್ತಿಗೆಯಲ್ಲಿ ಕಪ್ಪು ಕಲೆಗಳಿರುವ ಬಾಧಿತ ಪ್ರದೇಶಗಳಲ್ಲಿ ಹಚ್ಚಿ. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ನಿಮ್ಮ ಮೂಳೆಗಳನ್ನು ಶಕ್ತಗೊಳಿಸುವ ಪೋಷಕಾಂಶಗಳ ಬಗ್ಗೆ ನಿಮಗೆಷ್ಟು ಗೊತ್ತು?

ಅಲೋವೆರಾ: 
ಅಲೋವೆರಾ ಅತ್ಯುತ್ತಮ ಸೌಂದರ್ಯವರ್ಧಕ ಎಂದು ನಿಮಗೆ ತಿಳಿದೇ ಇದೆ. ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಕುತ್ತಿಗೆ ಭಾಗಕ್ಕೆ ಹಚ್ಚಿ 15-20 ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದು ಸಹ ಕಪ್ಪುಕಲೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಟೊಮೇಟೊ: 
ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಮರಳಿ ತರುವಲ್ಲಿ ಪ್ರಯೋಜನಕಾರಿ ಆಗಿರುವ ತರಕಾರಿ ಎಂದರೆ ಟೊಮೇಟೊ. ಟೊಮೇಟೊದ ಒಂದು ಭಾಗವನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಕುತ್ತಿಗೆಯ ಸುತ್ತ ಉಜ್ಜಿ ಮಸಾಜ್ ಮಾಡಿ. 15 ನಿಮಿಷಗಳ ಬಳಿಕ ಸಾಮಾನ್ಯವಾದ ನೀರಿನಿಂದ ವಾಶ್ ಮಾಡಿ. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಮಾಯವಾಗುತ್ತದೆ. 

ಆಲೂಗೆಡ್ಡೆ ರಸ: 
ಆಲೂಗೆಡ್ಡೆಯ ರಸವನ್ನು ಕುತ್ತಿಗೆ ಸುತ್ತಲಿನ ಕಪ್ಪು ಕಲೆಗಳ ಮೇಲೆ ಹಚ್ಚಿ ಕೆಲವು ನಿಮಿಷಗಳ ಬಳಿಕ ಅದನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಚರ್ಮ ಮೊದಲಿನ ಬಣ್ಣಕ್ಕೆ ತಿರುಗಲು ಸಹಾಯಕವಾಗಿದೆ. 

ಇದನ್ನೂ ಓದಿ- ಈ ವಸ್ತುಗಳ ಸಹಾಯದಿಂದ ಬಿಳಿ ಕೂದಲನ್ನು ಸಹಜವಾಗಿ ಕಪ್ಪು ಮಾಡಬಹುದು, ನೀವು ಬಣ್ಣ ಹಚ್ಚುವ ಪ್ರಮಯವೇ ಬೇಡ...!

ಹೋಂ ಮೇಡ್ ಪೇಸ್ಟ್: 
ಒಂದು ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಸಾಸಿವೆ ಎಣ್ಣೆ ಮತ್ತು ಚಿಟಿಕೆ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಕುತ್ತಿಗೆ ಸುತ್ತಲಿನ ಕಪ್ಪು ಕಲೆಯನ್ನು ಸುಲಭವಾಗಿ ನಿವಾರಿಸಬಹುದು. 

ಸೂಚನೆ :  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News