ಬೆಂಗಳೂರು: ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಹಜ ಪ್ರಕ್ರಿಯೆ, ಆದರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಇಂದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಪೋಷಕಾಂಶಗಳು ಮತ್ತು ವಿಟಮಿನ್-ಖನಿಜದ ಕೊರತೆಯಿಂದಾಗಿ, ಕೂದಲು ಅಕಾಲಿಕವಾಗಿ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಆದರೆ ಕೆಲವೊಮ್ಮೆ ಕೂದಲು ಬಿಳಿಯಾಗಲು ಫ್ಯಾಷನ್ ಕೂಡ ಕಾರಣವಾಗುತ್ತದೆ. ಅತಿಯಾದ ಕೆಮಿಕಲ್ ಟ್ರೀಟ್ಮೆಂಟ್, ಫ್ಯಾಶನ್ ಹೇರ್ ಕಲರ್ ಅಥವಾ ಕೂದಲಿನ ಮೇಲೆ ಬ್ಲೀಚ್ ಮಾಡುವುದರಿಂದಲೂ ಕೂಡ ಕೂದಲುಗಳು  ಬಿಳಿಯಾಗುತ್ತವೆ.


COMMERCIAL BREAK
SCROLL TO CONTINUE READING

ಯಾವುದೇ ಕಾರಣಾಂತರದಿಂದ ಒಂದು ವೇಳೆ ನಿಮ್ಮ ಕೂದಲುಗಳು ಕೂಡ ಬೆಳ್ಳಗಿದ್ದರೆ ಅವುಗಳನ್ನು ನೈಸರ್ಗಿಕವಾಗಿ ಕಪ್ಪಾಗಿಸುವತ್ತ ಗಮನ ಹರಿಸಬೇಕು. ಏಕೆಂದರೆ ರಾಸಾಯನಿಕ ಕೂದಲಿನ ಡೈಗಳು ಅಥವಾ ಬಣ್ಣಗಳು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತವೆ, ಆದರೆ ಇದೇ ಸಮಯದಲ್ಲಿ ಅವು ಉಳಿಕ ಕಪ್ಪು ಕೂದಲನ್ನು ಬಿಳಿಯಾಗಿಸಲು ಸಹ ಕೆಲಸ ಮಾಡುತ್ತವೆ. ರಾಸಾಯನಿಕಗಳ ಬಳಕೆಯಿಂದ ಕಪ್ಪು ಕೂದಲು ಕೂಡ ಬೇಗ ಬೆಳ್ಳಗಾಗುತ್ತವೆ, ಹೀಗಾಗಿ ಇಂದು ನಾವು ಮನೆಯಲ್ಲಿಯೇ ನೈಸರ್ಗಿಕವಾಗಿ ಹೇರ್ ಕಲರ್ ಡೈ ಮಾಡುವುದು ಹೇಗೆ ಎಂದು ನಿಮಗೆ ಹೇಳಿಕೊಡಳಿದ್ದೇವೆ. ಅವು ಕೂದಲಿನ ಬಣ್ಣದಂತೆ ನಿಮ್ಮ ಕೂದಲಿಗೆ ನೈಸರ್ಗಿಕ ಶಾಶ್ವತ ಕಪ್ಪು ಬಣ್ಣವನ್ನು ನೀಡುತ್ತದೆ.


ಈ 4 ವಸ್ತುಗಳಿಂದ ನೈಸರ್ಗಿಕ ಕೂದಲು ಬಣ್ಣವನ್ನು ತಯಾರಿಸಿ
ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ನೀವು ಹೇರ್ ಡೈ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದಕ್ಕಾಗಿ, ಮೊದಲು 1 ಬೌಲ್ ಗೋರಂಟಿ ತೆಗೆದುಕೊಂಡು ಅದರಲ್ಲಿ  ಕಾಫಿ-ಟೀ ಎಲೆಗಳು ಮತ್ತು ಅರಿಶಿನವನ್ನು ಕುದಿಸಿದ ನೀರನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದರ ನಂತರ, 10 ಚಮಚ ಭೃಂಗರಾಜ್ ಪುಡಿ, ಅರ್ಧ ಬೌಲ್ ಇಂಡಿಗೋ ಪೌಡರ್ ಮತ್ತು 10 ಚಮಚ ಗುಜಧಾಲ್ ಅಥವಾ ಬೀಟ್ರೂಟ್ ಪುಡಿಯನ್ನು ನೀರಿನಲ್ಲಿ ಕರಗಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಕೂದಲು ಬಣ್ಣಕ್ಕೆ ಬೇಕಾಗುವ ಎರಡು ಪೇಸ್ಟ್ ಗಳು ಸಿದ್ಧವಾಗಿದೆ.


ಇದನ್ನೂ ಓದಿ-ದಿನದ ಈ ಹೊತ್ತಿನಲ್ಲಿ ಎಂದಿಗೂ ಶಾರೀರಿಕ ಸಂಬಂಧ ಬೆಳೆಸಬೇಡಿ... ಇಲ್ದಿದ್ರೆ..!


ಹೇಗೆ ಅನ್ವಯಿಸಬೇಕು?
ಮೊದಲು ಬಿಳಿ ಕೂದಲಿಗೆ ಗೋರಂಟಿ ಪೇಸ್ಟ್ ಅನ್ನು ಅನ್ವಯಿಸಿ ಮತ್ತು ಕನಿಷ್ಠ 2 ಗಂಟೆಗಳ ಕಾಲ ಬಿಡಿ, ನಂತರ ಸರಳ ನೀರಿನಿಂದ ತೊಳೆಯಿರಿ. ಇದರ ನಂತರ, ಭೃಂಗರಾಜ್-ಇಂಡಿಗೊ ಮತ್ತು ದಾಸವಾಳದ ಪುಡಿಯನ್ನು ಹೊಂದಿರುವ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಒಣಗಲು ಬಿಡಿ. ಒಣಗಿದ ನಂತರ, ಸರಳ ನೀರಿನಿಂದ ತೊಳೆಯಿರಿ ಮತ್ತು ನಂತರ ಸಾಸಿವೆ ಎಣ್ಣೆಯನ್ನು ಅನ್ವಯಿಸಿ. ಕನಿಷ್ಠ 3 ದಿನಗಳವರೆಗೆ ಶಾಂಪೂ ಬಳಸಿ ಅದನ್ನು ತೊಳೆಯಬೇಡಿ. 3 ದಿನಗಳ ನಂತರ ಶಾಂಪೂ ಬಳಸಿ ತೊಳೆಯಿರಿ ಮತ್ತು ನಿಮ್ಮ ಕೂದಲಿಗೆ ಎಷ್ಟು ಸುಂದರವಾದ ಬಣ್ಣ ಬರುತ್ತದೆ ಎಂಬುದನ್ನು ನೀವೇ ನೋಡಿ. ಇದರಿಂದ ನೀವು ಹೊಳಪಾದ ನೈಸರ್ಗಿಕ ಕಪ್ಪು ಕೂದಲನ್ನು ಪಡೆಯುತ್ತೀರಿ.


ಇದನ್ನೂ ಓದಿ-ಮನೆಯಲ್ಲಿ ಎಂತಹ ಬಡತನವೆ ಇರಲಿ, ಇವರನ್ನು ಆಗರ್ಭ ಶ್ರೀಮಂತರಾಗುವುದರಿಂದ ತಡೆಯೋಕಾಗಲ್ಲ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ