ದಿನದ ಈ ಹೊತ್ತಿನಲ್ಲಿ ಎಂದಿಗೂ ಶಾರೀರಿಕ ಸಂಬಂಧ ಬೆಳೆಸಬೇಡಿ... ಇಲ್ದಿದ್ರೆ..!

Garud Puran: ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಇಡೀ ಜೀವನವೇ ಸುಖಮಯವಾಗುತ್ತದೆ (Lifestyle News In Kannada). 

Written by - Nitin Tabib | Last Updated : Aug 20, 2023, 10:42 PM IST
  • ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ.
  • ಒಣ ಮತ್ತು ಹಳಸಿದ ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ.
  • ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರುತ್ತವೆ ಮತ್ತು ಅವು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು.
ದಿನದ ಈ ಹೊತ್ತಿನಲ್ಲಿ ಎಂದಿಗೂ ಶಾರೀರಿಕ ಸಂಬಂಧ ಬೆಳೆಸಬೇಡಿ... ಇಲ್ದಿದ್ರೆ..! title=

Garud Puran: ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಇಡೀ ಜೀವನವೇ ಸುಖಮಯವಾಗುತ್ತದೆ. ಇದಲ್ಲದೇ ಕೆಲವು ಕೆಲಸಗಳನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳನ್ನು ಮಾಡಬಾರದು ಎಂದು ಹೇಳಲಾಗಿದೆ. ವಾಸ್ತವದಲ್ಲಿ ಈ ಕೆಲಸಗಳು ವ್ಯಕ್ತಿಯ ವಯಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. ಗರುಡ ಪುರಾಣದ (Lifestyle News In Kannada) ಪ್ರಕಾರ, ಯಾವ 5 ಕೆಲಸಗಳನ್ನು ಮಾಡಬಾರದು ತಿಳಿದುಕೊಳ್ಳೋಣ ಬನ್ನಿ.

1. ತಡವಾಗಿ ಏಳುವುದರಿಂದ ಆಯಸ್ಸು ಕಮ್ಮಿಯಾಗುತ್ತದೆ

ಗರುಡ ಪುರಾಣದ ಪ್ರಕಾರ ಬೆಳಗ್ಗೆ ತಡವಾಗಿ ಏಳುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ವಾಸ್ತವದಲ್ಲಿ ಬೆಳಗ್ಗೆ  ಗಾಳಿಯು ಶುದ್ಧವಾಗಿರುತ್ತದೆ. ಅದು ಹಲವು ರೋಗಗಳನ್ನು ಗುಣಪಡಿಸುತ್ತದೆ. ತಡವಾಗಿ ಎದ್ದ ನಂತರ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ

2, ರಾತ್ರಿ ಹೊತ್ತು ಮೊಸರನ್ನು ಸೇವಿಸಬಾರದು 

ಗರುಡ ಪುರಾಣದ ಪ್ರಕಾರ ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು. ಮೊಸರು ತಂಪು ಗುಣಧರ್ಮ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದು ವಯಸ್ಸಿನ ಮೇಲೂ ಕೂಡ ಪರಿಣಾಮ ಬೀರುತ್ತದೆ.

3. ಸ್ಮಶಾನದ ಹೊಗೆಯಿಂದ ದೂರವಿರಿ

ಶವಸಂಸ್ಕಾರದ ಸಮಯದಲ್ಲಿ, ಸತ್ತವರ ದೇಹದಿಂದ ಅನೇಕ ರೀತಿಯ ಹಾನಿಕಾರಕ ವಸ್ತುಗಳು ಹೊರಬರುತ್ತವೆ. ಸತ್ತ ವ್ಯಕ್ತಿಯ ದೇಹವನ್ನು ಸುಟ್ಟಾಗ, ಕೆಲವು ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮೃತದೇಹದೊಂದಿಗೆ ನಾಶವಾಗುತ್ತವೆ ಮತ್ತು ಕೆಲವು ಹೊಗೆಯೊಂದಿಗೆ ವಾತಾವರಣದಲ್ಲಿ ಹರಡುತ್ತವೆ. ಒಬ್ಬ ವ್ಯಕ್ತಿಯು ಆ ಹೊಗೆಯ ಸಂಪರ್ಕಕ್ಕೆ ಬಂದಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅವನ ದೇಹಕ್ಕೆ ಅಂಟಿಕೊಳ್ಳುತ್ತವೆ ಮತ್ತು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಆ ಕಾಯಿಲೆಗಳಿಂದಾಗಿ ವ್ಯಕ್ತಿಯ ವಯಸ್ಸು ಕಡಿಮೆಯಾಗಬಹುದು.

ಇದನ್ನೂ ಓದಿ-ಮನೆಯಲ್ಲಿ ಎಂತಹ ಬಡತನವೆ ಇರಲಿ, ಇವರನ್ನು ಆಗರ್ಭ ಶ್ರೀಮಂತರಾಗುವುದರಿಂದ ತಡೆಯೋಕಾಗಲ್ಲ!

4. ಬೆಳಗ್ಗೆ  ಶಾರೀರಿಕ ಸಂಬಂಧ ಬೆಳೆಸಬಾರರು

ಗರುಡ ಪುರಾಣದ ಪ್ರಕಾರ, ಬೆಳಗ್ಗೆ ದೈಹಿಕ ಸಂಬಂಧ ಬೆಸೆಯಬಾರದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

ಇದನ್ನೂ ಓದಿ-ರಕ್ತ ನಾಳಗಳಲ್ಲಿ ಸಂಗ್ರಹಿಸಿರುವ ಕೆಟ್ಟ ಕೊಲೆಸ್ಟ್ರಾಲ್ ಆನ್ನು ಈ ರೀತಿ ನೈಸರ್ಗಿಕವಾಗಿ ಹೊರಹಾಕಿ!

5. ಒಣ ಮತ್ತು ಹಳಸಿದ ಮಾಂಸ ಸೇವಿಸಬಾರದು

ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ. ಒಣ ಮತ್ತು ಹಳಸಿದ ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ. ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರುತ್ತವೆ ಮತ್ತು ಅವು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News