Vaikuntha Ekadashi 2023: ಹಿಂದೂ ಧರ್ಮದಲ್ಲಿ ಉಪವಾಸಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇತರ ಉಪವಾಸಗಳಿಗೆ ಹೋಲಿಸಿದರೆ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಒಂದು ತಿಂಗಳಲ್ಲಿ ಎರಡು ಏಕಾದಶಿಗಳು ಬರುತ್ತವೆ. 2023 ರ ಹೊಸ ವರ್ಷದಲ್ಲಿ ವೈಕುಂಠ ಏಕಾದಶಿಯನ್ನು ಜನವರಿ 2 ರಂದು ಆಚರಿಸಲಾಗುತ್ತಿದೆ. ಪುಷ್ಯ ಮಾಸದ ಶುಕ್ಲ ಪಕ್ಷದ ಈ ಏಕಾದಶಿಯನ್ನು ಪೌಷ್ಯ ಪುತ್ರಾದ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ಶ್ರೀ ವಿಷ್ಣುವನ್ನು ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಈ ವ್ರತವನ್ನು ಆಚರಿಸುವವರಿಗೆ ಯೋಗ್ಯ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಲ್ಲದ ದಂಪತಿಗಳು ಈ ಉಪವಾಸವನ್ನು ಕೈಗೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಈ ಏಕಾದಶಿಯಂದು ಅಂದರೆ ಜನವರಿ 2 ರಂದು 3 ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಆದ್ದರಿಂದಲೇ ಅದರ ಪ್ರಾಮುಖ್ಯತೆ ಹೆಚ್ಚಾಗಿದೆ. ಉಪವಾಸ, ಮಂಗಳಕರ ಯೋಗ ಮತ್ತು ಪೂಜೆಯ ವಿಧಿ ವಿಧಾನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, 


ಶುಭ ಮುಹೂರ್ತ ಯಾವುದು? 
ಪಂಚಾಂಗದ ಪ್ರಕಾರ, ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯು ಜನವರಿ 1 ರಂದು ರಾತ್ರಿ 7.11 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 2 ರಂದು ರಾತ್ರಿ 8.23 ​​ರವರೆಗೆ ಮುಂದುವರಿಯುತ್ತದೆ. ಆದರೆ, ಏಕಾದಶಿ ಸೂರ್ಯೋದಯವು ಜನವರಿ 2 ರಂದು ಇರಲಿದೆ, ಆದ್ದರಿಂದ ಈ ಉಪವಾಸವನ್ನು ಜನವರಿ 2 ರಂದು ಕೈಗೊಳ್ಳಲಾಗುವುದು. ಈ ದಿನಾಂಕದಂದು ಸ್ಥಿರ, ಚರಗಳಲ್ಲದೆ ಸದ್ಯ ಎಂಬ ಎಂಬ ಒಟ್ಟು ಮೂರು ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಮೂರು ಯೋಗಗಳು ನಿರ್ಮಾಣಗೊಂಡ ಸಂದರ್ಭದಲ್ಲಿ ಪೂಜೆ ಸಲ್ಲಿಸುವುದುರಿಂದ ದುಪ್ಪಟ್ಟು ಫಲಪ್ರಾಪ್ತಿಯಾಗುತ್ತದೆ.


ಈ ಉಪವಾಸದ ಮಹತ್ವವೇನು?
ವೈಕುಂಠ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ಉಪವಾಸದ ಬಗ್ಗೆ ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದಾನೆ. ಇದರಿಂದ ಸುಸಂತಾನ ಪ್ರಾಪ್ತಿಯಾಗುವುದರ ಜೊತೆಗೆ  ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂಆಗುತ್ತವೆ. ನಿಮ್ಮ ಮಗುವಿನ ಆರೋಗ್ಯ ಚೆನ್ನಾಗಿಲ್ಲದಿದ್ದರೂ, ನೀವು ಈ ಉಪವಾಸವನ್ನು ಆಚರಿಸಬೇಕು. ಈ ಉಪವಾಸದ ಮಹತ್ವವನ್ನು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.


ಪೂಜೆಗೆ ವಿಧಿ-ವಿಧಾನ ಇಲ್ಲಿದೆ
>> ಈ ದಿನ, ಬೆಳಗ್ಗೆ ಬೇಗನೆ ಎದ್ದು ಉಪವಾಸದ ಸಂಕಲ್ಪ ಮಾಡಿ ಮತ್ತು ದೈನಂದಿನ ಆಚರಣೆಗಳು ಮತ್ತು ಸ್ನಾನ ಇತ್ಯಾದಿಗಳ ನಂತರ ಪೂಜೆ ಮಾಡಿ. ಈ ವ್ರತದಲ್ಲಿ ವಿಷ್ಣುವಿನ ಜೊತೆಗೆ ಬಾಲ ಗೋಪಾಲನನ್ನೂ ಪೂಜಿಸಬೇಕು.


>> ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಸ್ವಚ್ಛವಾದ ಸ್ಥಳದಲ್ಲಿ ಶ್ರೀ ವಿಷ್ಣುವಿನ ಭಾವಚಿತ್ರ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸಿ. ಅವನ ಬಳಿ ಬಾಲ ಗೋಪಾಲನ ಚಿತ್ರವನ್ನು ಇರಿಸಿ. ನಂತರ ಚಿತ್ರಗಳು ಅಥವಾ ವಿಗ್ರಹಗಳಿಗೆ ಹಸುವಿನ ಹಾಲಿನಿಂದ ಅಭಿಷೇಕ ನೆರವೇರಿಸಿ.


>> ಇದಾದ ಬಳಿಕ ಅವರಿಗೆ ಹೂಮಾಲೆಯನ್ನು ಅರ್ಪಿಸಿ, ಕುಂಕುಮ ತಿಲಕವನ್ನು ಹಚ್ಚಿ. ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ ನಂತರ ಅಬಿರ್, ಗುಲಾಲ್, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿ.


>> ಕಾಲೋಚಿತ ಹಣ್ಣುಗಳೊಂದಿಗೆ ನೈವೇದ್ಯವನ್ನು ದೇವರಿಗೆ ಅರ್ಪಿಸಿ ಮತ್ತು ಅದರಲ್ಲಿ ತುಳಸಿ ಎಲೆಗಳನ್ನು ಇರಿಸಿ. ದೇವರಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ.


ಇದನ್ನೂ ಓದಿ-Vastu Tips 2023: ಹೊಸವರ್ಷದಂದು ಮನೆಯ ಮುಖ್ಯದ್ವಾರದ ಬಳಿ ಇರಲಿ ಈ 6 ಸಂಗತಿಗಳು


>> ಶ್ರೀವಿಷ್ಣುವಿನ ಆರತಿಯ ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಿ. ಈ ವ್ರತವನ್ನು ಆಚರಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.


ಇದನ್ನೂ ಓದಿ-Chanakya Niti: ಹುಂಜದ ಈ 4 ಅಭ್ಯಾಸಗಳಲ್ಲಡಗಿದೆ ಯಶಸ್ಸಿನ ಗುಟ್ಟು, ಅನುಸರಿಸುವವರಿಗೆ ಯಶಸ್ಸು ಗ್ಯಾರಂಟಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.