Mars retrograde 2022 : ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮಂಗಳವು ಧೈರ್ಯ, ಬಲ, ಮದುವೆ, ಭೂಮಿಯ ಪ್ರತೀಕವಾಗಿದೆ. ಜಾತಕದಲ್ಲಿ ಮಂಗಳನ ಸ್ಥಾನ ಉತ್ತಮವಾಗಿದ್ದರೆ, ವ್ಯಕ್ತಿಯ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ. ಅಕ್ಟೋಬರ್ 30 ರಿಂದ, ಮಂಗಳ ಗ್ರಹದ ಹಿಮ್ಮುಖ ಚಲನೆ ಆರಂಭವಾಗಲಿದೆ. ಮಂಗಳನ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ದೆಆದಶ ರಾಶಿಗಳ ಪೈಕಿ ನಾಲ್ಕು ರಾಶಿಗಳ ಮೇಲೆ ಮಂಗಳ ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ. ಹೌದು, ಮಂಗಳನ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ,  ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ.  ಇದರಿಂದಾಗಿ ನಾಲ್ಕು ರಾಶಿಯವರ ಅದೃಷ್ಟ ಖುಲಾಯಿಸಲಿದೆ. 


COMMERCIAL BREAK
SCROLL TO CONTINUE READING

ಹಿಮ್ಮುಖವಾಗಿ ಚಲಿಸುವ ಮಂಗಳ ಈ ರಾಶಿಯವರಿಗೆ ಲಾಭವನ್ನು ನೀಡಲಿದ್ದಾನೆ :  
ವೃಷಭ ರಾಶಿ : ಮಂಗಳಗ್ರಹದ ಹಿನ್ನೆಡೆಯಿಂದ ರೂಪುಗೊಳ್ಳುತ್ತಿರುವ ಮಹಾಪುರುಷ ರಾಜಯೋಗವು ವೃಷಭ ರಾಶಿಯವರಿಗೆ ಧನಲಾಭವನ್ನು ನೀಡಲಿದೆ. ಅವರ ಆದಾಯ ಹೆಚ್ಚಾಗಬಹುದು. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. ದೀರ್ಘ ಪ್ರಯಾಣಕ್ಕೆ ತೆರಳುವ  ಅವಕಾಶ ಸಿಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿಶೇಷವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವ ಜನರು ದೊಡ್ಡ ಸ್ಥಾನ ಅಥವಾ ಗೌರವವನ್ನು ಪಡೆಯಬಹುದು. ಪೂರ್ವಿಕರ ಆಸ್ತಿ, ಪೂರ್ವಿಕರ ವ್ಯವಹಾರಗಳಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. 


ಇದನ್ನೂ ಓದಿ : ಮನೆಯ ಈ ಭಾಗದಲ್ಲಿ ಆಂಜನೇಯನ ಫೋಟೋ ಇಟ್ಟರೆ ಅದೃಷ್ಟದ ಬಾಗಿಲು ತೆರೆಯುತ್ತೆ


ಸಿಂಹ ರಾಶಿ : ಮಂಗಳನ ಹಿಮ್ಮುಖ ಚಲನೆಯು ಸಿಂಹ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟವನ್ನು ತರುತ್ತದೆ. ನಿಂತು ಹೋಗಿದ್ದ ಕೆಲಸ ಮತ್ತೆ ಚುರುಕು ಪಡೆಯುವುದು. ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು ಹಾಗೆಯೇ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಮತ್ತು ಗೌರವ ಸಿಗುವುದು. ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಪರೀಕ್ಷೆ, ಸಂದರ್ಶನದಲ್ಲಿ ಯಶಸ್ಸು  ಸಿಗಲಿದೆ. ಕುಟುಂಬದಲ್ಲಿ ಧಾರ್ಮಿಕ ಅಥವಾ ಮಂಗಳ ಕಾರ್ಯ ಆಯೋಜಿಸಬಹುದು. 


ಕನ್ಯಾ ರಾಶಿ : ಮಂಗಳನ ಹಿಮ್ಮುಖ ಚಲನೆಯಿಂದ ರೂಪುಗೊಂಡ ಮಹಾಪುರುಷ ರಾಜಯೋಗವು ಕನ್ಯಾ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪೇಕ್ಷಿತ ಯಶಸ್ಸನ್ನು ನೀಡುತ್ತದೆ. ಆಸ್ತಿ ಖರೀದಿಗೆ ಅವಕಾಶವಿದೆ. ಹೊಸ ಕಾರು ಖರೀದಿಸುವ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಲಾಭವಾಗಲಿದೆ. ಕೆಲಸದಲ್ಲಿ ನಿಮ್ಮ ವ್ಯಾಪ್ತಿ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. 


ಇದನ್ನೂ ಓದಿ : Upcoming Wedding Dates: ಶೀಘ್ರದಲ್ಲಿಯೇ ಚಾತುರ್ಮಾಸ ಅಂತ್ಯ, ವಿವಾಹಗಳ ಸುಗ್ಗಿ ಆರಂಭ, ಇಲ್ಲಿದೆ ಶುಭ ಮುಹೂರ್ತಗಳ ಪಟ್ಟಿ


ಕುಂಭ ರಾಶಿ : ಕುಂಭ ರಾಶಿಯವರಿಗೆ ವಕ್ರೀ ಮಂಗಳನು ​​ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿ ನಿಮ್ಮ ಶಕ್ತಿ ಮತ್ತು ಉತ್ಸಾಹ ಕಂಡು ಬರುತ್ತದೆ. ಈ ಕಾರಣದಿಂದಾಗಿ ನಿಮ್ಮ ದಕ್ಷತೆಯು ಹೆಚ್ಚಾಗುತ್ತದೆ ಮತ್ತು ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.