ದೀಪಾವಳಿಯಂದು ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು.! ಹೇಗಿದೆ ನೋಡಿ ದೀಪಾವಳಿ ರಾಶಿ ಫಲ

 ದೀಪಾವಳಿ ರಾಶಿ ಫಲದ ಪ್ರಕಾರ 2022 ರ ದೀಪಾವಳಿಯಿಂದ  2023 ರ ದೀಪಾವಳಿವರೆಗಿನ ಸಮಯವು ರಾಶಿಗನುಗುಣವಾಗಿ ಹೇಗಿರಲಿದೆ? ಎನ್ನುವುದನ್ನು ನೋಡೋಣ.  

Written by - Ranjitha R K | Last Updated : Oct 18, 2022, 01:49 PM IST
  • ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ ಆರಂಭವಾಗುತ್ತದೆ.
  • ಅಕ್ಟೋಬರ್ 24 ನರಕ ಚತುರ್ದಶಿ
  • ದೀಪಾವಳಿ ರಾಶಿಫಲದ ಪ್ರಕಾರ ಯಾರಿಗೆ ಶುಭ ?
ದೀಪಾವಳಿಯಂದು ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು.!  ಹೇಗಿದೆ ನೋಡಿ ದೀಪಾವಳಿ  ರಾಶಿ ಫಲ  title=
Diwali horoscope

ಬೆಂಗಳೂರು : ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಕ್ಟೋಬರ್ 23 ರಂದು ಧನತ್ರಯೋದಶಿ. ಅಕ್ಟೋಬರ್ 24 ನರಕ ಚತುರ್ದಶಿ, 25 ಲಕ್ಷ್ಮೀ ಪೂಜೆ,  ಗೋಪೂಜೆ, 26ಕ್ಕೆ ದೀಪಾವಳಿ. ಅಕ್ಟೋಬರ್ 25 ರಂದು, 2022 ರ ಕೊನೆಯ ಸೂರ್ಯಗ್ರಹಣವೂ ಸಂಭವಿಸುತ್ತದೆ.  ದೀಪಾವಳಿ ರಾಶಿ ಫಲದ ಪ್ರಕಾರ 2022 ರ ದೀಪಾವಳಿಯಿಂದ  2023 ರ ದೀಪಾವಳಿವರೆಗಿನ ಸಮಯವು ರಾಶಿಗನುಗುಣವಾಗಿ ಹೇಗಿರಲಿದೆ? ಎನ್ನುವುದನ್ನು ನೋಡೋಣ. 

ಮೇಷ ರಾಶಿ : ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಮತ್ತು ಪ್ರಭಾವಗಳು ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಗರ್ಭಿಣಿಯರು ಒತ್ತಡದಿಂದ ದೂರವಿರಬೇಕು. ಆತ್ಮೀಯರಿಂದ ಸಹಾಯ ದೊರೆಯಲಿದೆ. ಆರ್ಥಿಕ ಪ್ರಗತಿಯಾಗಲಿದೆ. 

ವೃಷಭ ರಾಶಿ : ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯಲಿದ್ದು, ಇದು ನಿಮಗೆ ಬಡ್ತಿ ಮತ್ತು  ಹಣಕಾಸಿನ ಲಾಭ ಎರಡನ್ನೂ ನೀಡುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸಮಸ್ಯೆಗಳೆಲ್ಲ ದೂರವಾಗುವುದು. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ದೀಪಾವಳಿಯಂದು ದೊಡ್ಡ ಮಟ್ಟದ ಆರ್ಥಿಕ ಲಾಭವಾಗಬಹುದು. 

ಇದನ್ನೂ ಓದಿ : ಪೊರಕೆ ಬಳಸುವುದಕ್ಕೂ ನಿಯಮವಿದೆ.! ಅನುಸರಿಸಿದರೆ ಹಣದ ಹೊಳೆ ಹರಿಸುತ್ತಾಳೆ ಮಹಾಲಕ್ಷ್ಮೀ

ಮಿಥುನ ರಾಶಿ : ವೃತ್ತಿಯಲ್ಲಿ ತೊಂದರೆ ಎದುರಾಗಬಹುದು. ಈ ಸಮಯವನ್ನು ಧೈರ್ಯದಿಂದ ಎದುರಿಸಿ. ಕಾರ್ಯನಿರತತೆಯಿಂದಾಗಿ, ನಿಮ್ಮ ಪ್ರೀತಿಪಾತ್ರರಿಗಾಗಿ ಸಮಯ ನೀಡಲು ಸಾಧ್ಯವಾಗುವುದಿಲ್ಲ. ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ ಮತ್ತು ಮಹಿಳೆಯರಿಗೆ ಪೂರ್ಣ ಗೌರವವನ್ನು ನೀಡಿ. 

ಕರ್ಕಾಟಕ ರಾಶಿ : ನೀವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ಖರ್ಚು ಮಾಡಿ. ಇಲ್ಲವಾದರೆ ಹಣಕಾಸಿನ ಸಮಸ್ಯೆ ಎದುರಾಗಬಹುದು. ಸಂಗಾತಿಯೊಂದಿಗೆ ಆತ್ಮೀಯತೆ ಹೆಚ್ಚಾಗುತ್ತದೆ.

ಸಿಂಹ ರಾಶಿ :  ಲಕ್ಷ್ಮೀ ದೇವಿಯ ಆಶೀರ್ವಾದ  ವರ್ಷವಿಡೀ  ನಿಮ್ಮ ಮೇಲೆ ಇರಲಿದೆ. ಎದುರಾಗುವ ಎಲ್ಲಾ ಕಷ್ಟಗಳನ್ನು ಎದುರಿಸಿ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ಹಣದ ಕೊರತೆ ಇರುವುದಿಲ್ಲ. ಆದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ. 

ಕನ್ಯಾ  ರಾಶಿ : ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗಲಿವೆ. ಲಕ್ಷ್ಮೀ ಕೃಪೆಯಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.  ದೊಡ್ಡ ಆಸೆ ಅಥವಾ ಕನಸು ನನಸಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Diwali 2022: 27 ವರ್ಷಗಳ ಬಳಿಕ ದೀಪಾವಳಿಯಂದು ಸಂಭವಿಸುತ್ತಿದೆ ಸೂರ್ಯ ಗ್ರಹಣ, ಈ ರಾಶಿಗಳ ಜನರಿಗೆ ಎಚ್ಚರಿಕೆ!

ತುಲಾ ರಾಶಿ : ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಹೆಚ್ಚಿನ ವೇತನವಿರುವ ಉದ್ಯೋಗ ಒಲಿದು ಬರುವುದು. ವ್ಯಾಪಾರಸ್ಥರಿಗೂ ಲಾಭವಾಗುವುದು. ಸವಾಲುಗಳ ಮೇಲೆ ಜಯ ಸಿಗಲಿದೆ. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಪ್ರವೇಶವಾಗಲಿದೆ. ದೀಪಾವಳಿಯಂದು ನೀವು ದೊಡ್ಡ ಉಡುಗೊರೆಯನ್ನು ಪಡೆಯಬಹುದು. 

ವೃಶ್ಚಿಕ ರಾಶಿ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಅವಕಾಶಗಳು ಬರಲಿವೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ದೀರ್ಘ ಪ್ರಯಾಣಕ್ಕೆ ಹೋಗಬಹುದು. ಲಕ್ಷ್ಮೀಯ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿದೆ. ಆದರೆ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.  

ಧನು ರಾಶಿ : ಈ ದೀಪಾವಳಿಯ ನಂತರ ಮಾತ್ರ ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಖರ್ಚು ಇತಿ ಮಿತಿಯಲ್ಲಿರಲಿ. ಇಲ್ಲದಿದ್ದರೆ ಬಜೆಟ್ ಹಾಳಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾರಿಗೂ ಸಾಲ ಕೊಡಬೇಡಿ ಪ್ರೇಮ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು.  

ಮಕರ ರಾಶಿ : ವರ್ಷಪೂರ್ತಿ ಲಕ್ಷ್ಮೀ ದೇವಿಯ ಆಶೀರ್ವಾದದಿಂದ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ಬದಲಿಗೆ ಹಳೆ ಸಾಲವೂ  ತೀರಲಿದೆ. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯ ನಿರ್ಧಾರ ಪಡೆದುಕೊಳ್ಳಿ.  

ಇದನ್ನೂ ಓದಿ : Diwali 2022: ದೀಪಾವಳಿಯ ರಾತ್ರಿ ಈ ಪ್ರಾಣಿ-ಪಕ್ಷಿ ಕಂಡರೆ ಅದು ಮನೆಗೆ ಲಕ್ಷ್ಮಿಯ ಆಗಮನದ ಸಂಕೇತ

ಕುಂಭ ರಾಶಿ : 2022ರ ದೀಪಾವಳಿಯಿಂದ 2023ರ ದೀಪಾವಳಿಯ ನಡುವೆ ಹಣದ ಕೊರತೆ ಇರುವುದಿಲ್ಲ. ಆದರೂ, ಖರ್ಚಿನ ಮೇಲೆ ನಿಗಾಇರಲಿ. ನಿಮ್ಮ ಮಿತಿಗಳನ್ನು ದಾಟಿ ಹೋದರೆ ಸಮಸ್ಯೆ ಎದುರಾಗಬಹುದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಸಂಗಾತಿಯ ಮನಸ್ಸು ನೋಯಿಸಬೇಡಿ. 

ಮೀನ ರಾಶಿ : ವರ್ಷವು ಮಿಶ್ರ ಫಲ ನೀಡುತ್ತದೆ. ಆರ್ಥಿಕ ಲಾಭವಾಗಲಿದೆ.  ಆದರೆ ಒತ್ತಡವೂ ಹೆಚ್ಚಾಗುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಉದ್ಯೋಗಗಳನ್ನು ಬದಲಾಯಿಸಬಹುದು. ಜವಾಬ್ದಾರಿಗಳು ಹೆಚ್ಚಾಗಲಿವೆ. 

 
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News