Unique Valentine Week experiences new love: ಕೋಟಿ ಪದಗಲ್ಲಿ ಪ್ರೀತಿ ಅನ್ನೋ ಪದಕ್ಕೆ ಶ್ರೇಷ್ಠತೆ ಹೆಚ್ಚು... ಅದು ಎರಡು ಮನಸ್ಸುಗಳ ಸಮ್ಮಿಲನ... ತುಟಿ ಅಂಚಿನ ನಗುವಲ್ಲಿ ರೋಮಾಂಚನ ನೀಡುವ ಸುಂದರ ಕ್ಷಣವೇ ಪ್ರೀತಿ.. ಅವಳಲ್ಲಿ ಅವನಾಗಿ.. ಅವನಲ್ಲಿ ಅವಳಾಗಿ ಬದುಕಿನ ಗೋಪುರಕ್ಕೆ ಹೊಸ ಹೊಸ ಮಜಲುಗಳನ್ನು ಕಟ್ಟುತ್ತ ಸಾಗುವ ದಿನಗಳದು.. ಹೇಳಿದ್ದು ಆಗತ್ತೋ ಬಿಡುತ್ತೋ ಗೊತ್ತಿಲ್ಲ ಆದ್ರೆ ಮಾತಿನ ಕಚಗುಳಿಗೆ ಬಾಡಿಗೆ ಇಲ್ಲ ಎನ್ನುವಂತೆ ಪ್ರತಿ ದಿನವೂ ಪ್ರತಿಕ್ಷಣವೂ ಮುಂದಿನ ಬದುಕಿನ ಹಾದಿಗೆ ಪದ ಜೋಡಿಸಿ ಹೋಗುತ್ತಿರುವುದೇ ಪ್ರೀತಿ.. 


COMMERCIAL BREAK
SCROLL TO CONTINUE READING

ಅದೆಷ್ಟೋ ಜನ ಈಗ ಪ್ರೀತಿ ಬಗ್ಗೆ ವ್ಯಾಖ್ಯಾನ ಬೇರೆಯೇ ಹೇಳ್ತಾರೆ. ಆದ್ರೆ ಮುಗ್ಧ ಮನಸ್ಸುಗಳ ನಡುವೆ ಹೊಸದಾಗಿ ಚಿಗುರಿದ ಆ ಭಾವನೆಗಳನ್ನು ವರ್ಣಿಸಲು ಪದಗಳು ಕೂಡ ಸಾಲದು.. ಕೊಂಚ ಭಯ.. ಕೊಂಚ ನಾಚಿಕೆ... ಮೊದಲ ಸಲ ಎದುರಾದಾಗ ಜೋರಾಗಿ ಬಡಿದುಕೊಳ್ಳುವ ಹೃದಯ.. ರಾತ್ರಿಯೆಲ್ಲ ಹೀಗೆ ಮಾತಾಡಬೇಡು ಅಂದುಕೊಂಡಿದ್ದ ಒಂದೇ ಒಂದು ಪದವೂ ಅಲ್ಲಿ ನೆನಪಾಗೋದಿಲ್ಲ.. ಅದು ಕ್ಷಣಮಾತ್ರದ ಕುತೂಹಲವೂ ಅಲ್ಲ.. ಅರೆಗಳಿಗೆಯ ಭಯವೂ ಅಲ್ಲ... ಅಲ್ಲಿ ಭಾವನೆಗಳೇ ನಲಿಯುತ್ತ.. ಹೃದಯದಲ್ಲಿ ಮಾತುಗಳು ಕುಣಿಯುತ್ತ.. ನಮ್ಮನ್ನೇ ನಾವು ಮರೆಯುವ ಕ್ಷಣವದು...  


ಇದನ್ನೂ ಓದಿ- ಸ್ಯಾಂಡಲ್‍ವುಡ್‍ನಲ್ಲಿ ಪ್ರೀತಿಸಿ ಮದುವೆಯಾದ ಸ್ಟಾರ್ ಜೋಡಿಗಳು  


ಕನಸಿನ ಲೋಕವೇ ಪ್ರೀತಿ.. ರಾಜ ರಾಣಿಯೂ ಆಗಬಹುದು... ಯಾರೂ ಇಲ್ಲದ ಜಾಗದಲ್ಲಿ ಹಕ್ಕಿಯಂತೆಯೂ ಹಾರಾಡಬಹುದು. ಮೊದಮೊದಲು ಅನಿಸೋದು ಹಾಗೆ, ದಿನಕ್ಕೊಂದು ಸಂತೋಷ ನೀಡುವ ಅಪ್ಪಟ ನಲಿದಾಟ ಅಲ್ಲಿ ಕಾಣುತ್ತೇವೆ. ಮಾತುಗಳು ಕಮ್ಮಿ ಇದ್ದರೂ ನೋಟದಲ್ಲೇ ಕೋಟಿ ಭಾವನೆ ಹಂಚಿಕೊಳ್ಳುತ್ತೇವೆ. ಕೊಂಚ ನೋವಾದ್ರೂ ಜೀವವೇ ಹೋಯ್ತು ಅನ್ನೋ ಹಾಗೆ ಆಗತ್ತೆ. ಪ್ರೀತಿಯ ಎರಡು ಮನಸ್ಸಿಗೆ ಸಂತೋಷವೇ ಕೂಡಿರುತ್ತೆ. ಯಾವ ಸಂಬಂಧಗಳೂ ಬೇಡ ಇದೇ ಜೀವನ ಎನಿಸಿಬಿಡುತ್ತೆ. ಸ್ನೇಹಿತರ ಮಾತುಗಳು ಕೂಡ ಕಿರಿಕಿರಿ ಎನಿಸಿಬಿಡುತ್ತೆ. ಜೊತೆಗಿದ್ದಾಗ ಸಮಯ ಜೋರಾಗಿ ಓಡುತ್ತಿದೆ. ದೂರ ಇದ್ದಾಗ ಸಮಯ ನಿಧಾನವಾಗಿದೆ ಎನಿಸುತ್ತೆ. 


ಇದನ್ನೂ ಓದಿ- ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರು


ಒಂದೊಂದು ಮಾತಿಗೂ ನಗುನಗುತ್ತ ಇರುವ ಮುದ್ದು ಮನಸ್ಸುಗಳು ಎಂದೆಂದಿಗೂ ಹೀಗೆ ಇರಬೇಕು ಅನ್ನೋ ಹಾಗೆಯೇ ಕಾಲ ಕಳೆಯುತ್ತಾರೆ. ಅಕ್ಕರೆ ಹೆಚ್ಚಾದರೂ ಮಮತೆ ಕಡಿಮೆಯಾದರೂ ಸಣ್ಣ ಜಗಳವೂ ಇರುತ್ತೆ. ಅದರಲ್ಲೂ ನಮ್ಮನ್ನ ಬಿಟ್ಟು ಬೇರೆಯವರಿಗೆ ಹೆಚ್ಚಿನ ಸಮಯ ಕೊಟ್ರೂ.. ಅಲ್ಲಿ ಸುಂದರ ಮುನಿಸು ಇರುತ್ತೆ.. ಚೆಂದವೋ ಅಂದವೋ ಗೊತ್ತಿಲ್ಲ. ಆರಂಭದ ಪ್ರೀತಿ ಎಂದೆಂದಿಗೂ ಜೊತೆಜೊತೆಯಾಗಿ ಇರುತ್ತೆ... ಮೊದಲ ಪ್ರೀತಿಗೆ ಎಂದು ಮರೆಯಿಲ್ಲ. ಮೊದಲ ಮಾತಿಗೆ ಎಂದಿಗೂ ಹೋಲಿಕೆಯಿಲ್ಲ... ಇಂತಿ ನಿಮ್ಮ ಮೊದಲ ಪ್ರೀತಿ ಮಾತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.