Valentine Week: ಈ 4 ರಾಶಿಯವರಿಗೆ ಪ್ರೇಮಿಗಳ ವಾರ ತುಂಬಾ ವಿಶೇಷ
Valentine Week: ದ್ವಾದಶ ರಾಶಿಗಳಲ್ಲಿ 4 ರಾಶಿಯವರಿಗೆ ಪ್ರೇಮಿಗಳ ವಾರ ವಿಶೇಷವಾಗಿರುತ್ತದೆ. ಈ ರಾಶಿಚಕ್ರದ ಚಿಹ್ನೆಗಳ ಜನರಿಗೆ ಈ ವಾರವು ಪ್ರೀತಿ ಮತ್ತು ಪ್ರಣಯದಿಂದ ತುಂಬಿರುತ್ತದೆ.
Valentine Week: ಪ್ರೇಮಿಗಳ ದಿನವನ್ನು ಆಚರಿಸಲು ಪ್ರೇಮ ಜೋಡಿಗಳು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾರಂಭಿಸಿದ್ದಾರೆ. ಹುಡುಗರು ಮತ್ತು ಹುಡುಗಿಯರು ತಮ್ಮ ಪಾಲುದಾರರನ್ನು ಅಚ್ಚರಿಗೊಳಿಸಲು ಹೊಸ ಆಲೋಚನೆಗಳ ಬಗ್ಗೆ ಯೋಚಿಸುತ್ತಾರೆ. ಪ್ರಪೋಸ್ ಡೇಯೊಂದಿಗೆ ಪ್ರೀತಿಯ ಈ ವಾರ ಪ್ರಾರಂಭವಾಗಿದೆ. ಪ್ರೇಮ ಪಕ್ಷಿಗಳಿಗೆ, ಈ ಇಡೀ ವಾರ (ಫೆಬ್ರವರಿ 8 ರಿಂದ ಫೆಬ್ರವರಿ 14 ರವರೆಗೆ) ಹಬ್ಬಕ್ಕಿಂತ ಕಡಿಮೆಯಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಪ್ರೇಮ ದಂಪತಿಗಳಿಗೆ ಈ ವಾರ ಅದ್ಭುತ ಮತ್ತು ಸ್ಮರಣೀಯವಾಗಿರುತ್ತದೆ.
ಈ ರಾಶಿಯವರಿಗೆ ಪ್ರೇಮಿಗಳ ವಾರವು ಪ್ರೀತಿ-ಪ್ರಣಯದಿಂದ ತುಂಬಿರುತ್ತೆ:
ಮಿಥುನ ರಾಶಿ : ಈ ರಾಶಿಯವರಿಗೆ ಈ ಪ್ರೇಮಿಗಳ ವಾರ ತುಂಬಾ ವಿಶೇಷವಾಗಿರಲಿದೆ. ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಅವರ ಸಂಗಾತಿಯಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಾರೆ. ಮದುವೆಯಾಗಲು ಬಯಸುವ ಜೋಡಿಗಳು ತಮ್ಮ ಸಂಗಾತಿಯನ್ನು ಕುಟುಂಬಕ್ಕೆ ಪರಿಚಯಿಸಬಹುದು. ಸಂಬಂಧ ಗಟ್ಟಿಯಾಗಬಹುದು. ಅದೇ ಸಮಯದಲ್ಲಿ, ವ್ಯಾಲೆಂಟೈನ್ಸ್ ವೀಕ್ (Valentine Week) ವಿವಾಹಿತ ದಂಪತಿಗಳಿಗೆ ಪ್ರೀತಿಯ ಸಂಬಂಧವನ್ನು ಸಾಬೀತುಪಡಿಸುತ್ತದೆ.
ಇದನ್ನೂ ಓದಿ- Perfect Husband: ಪರ್ಫೆಕ್ಟ್ ಪತಿ ಎಂದು ಸಾಬೀತುಪಡಿಸುತ್ತಾರೆ ಈ 3 ರಾಶಿಯ ಹುಡುಗರು
ಕರ್ಕಾಟಕ ರಾಶಿ: ಕರ್ಕ ರಾಶಿ ಜೋಡಿ ಹಕ್ಕಿಗಳಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಗಳಿವೆ. ನಿಶ್ಚಿತಾರ್ಥ ಅಥವಾ ಸಂಬಂಧವನ್ನು ಸರಿಪಡಿಸಬಹುದು. ವಿವಾಹಿತ ದಂಪತಿಗಳು ಪರಸ್ಪರ ಸಹಕರಿಸುತ್ತಾರೆ. ಇದು ಅವರ ಸಂಬಂಧವನ್ನು ಬಲಪಡಿಸುತ್ತದೆ. ಪ್ರಣಯ ಹೆಚ್ಚಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರ ಜೀವನದಲ್ಲಿ ಪ್ರೀತಿಯ ಮಳೆಯಾಗುತ್ತದೆ. ಪ್ರೇಮಿಗಳ ಮತ್ತು ವಿವಾಹಿತ ದಂಪತಿಗಳ ಸಂಬಂಧವು ಗಟ್ಟಿಯಾಗುತ್ತದೆ. ಪ್ರೇಮ ವಿವಾಹಕ್ಕೆ (Love Marriage) ಕುಟುಂಬ ಸದಸ್ಯರು ಒಪ್ಪುತ್ತಿಲ್ಲ ಎಂದು ಯೋಚಿಸುತ್ತಿರುವವರಿಗೆ ಈ ವಾರ ಶುಭ ಸುದ್ದಿ ಸಿಗಬಹುದು. ಒಂಟಿಯಾಗಿರುವವರು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ಸಮಯ.
ಇದನ್ನೂ ಓದಿ- Weekly Love Horoscope: ವ್ಯಾಲೆಂಟೈನ್ಸ್ ಡೇ ವೀಕ್: ಈ ವಾರ ನಿಮ್ಮ ಪ್ರೀತಿಯ ಜಾತಕ ಹೇಗಿದೆ ತಿಳಿಯಿರಿ
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಪ್ರೀತಿಯ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ. ಅವಿವಾಹಿತರು ತಮ್ಮ ಸಂಗಾತಿಯನ್ನು ಹುಡುಕಬಹುದು. ದಂಪತಿಗಳ ನಡುವೆ ಪ್ರೀತಿ-ಪ್ರಣಯ ಹೆಚ್ಚಾಗುತ್ತದೆ. ನೀವು ಎಲ್ಲೋ ಒಂದು ಸ್ಮರಣೀಯ ಪ್ರವಾಸಕ್ಕೆ ಹೋಗಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.