Gemstone: ಈ ರತ್ನ ಧಾರಣೆಯಿಂದ ಸಿಗುತ್ತೆ ನಿಜವಾದ ಪ್ರೀತಿ

Gemstone:  ರತ್ನ ಶಾಸ್ತ್ರದ ಪ್ರಕಾರ ನೀಲಮಣಿ ಗರುವಿನ ರತ್ನವಾಗಿದೆ. ಇದನ್ನು ಧರಿಸುವುದರಿಂದ ಗುರು ಗ್ರಹ ಬಲಗೊಳ್ಳುತ್ತದೆ. ಆದಾಗ್ಯೂ, ಈ ರತ್ನವನ್ನು ಧರಿಸುವಾಗ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.

Written by - Yashaswini V | Last Updated : Feb 7, 2022, 12:50 PM IST
  • ನಿಮ್ಮ ಕಡೆಗೆ ನಿಮ್ಮ ಸಂಗಾತಿಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ
  • ಈ ರತ್ನವು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಸಹಾಯಕ
  • ಇದರಿಂದ ದಾಂಪತ್ಯ ಜೀವನದ ಸಮಸ್ಯೆ ದೂರವಾಗುತ್ತದೆ
Gemstone: ಈ ರತ್ನ ಧಾರಣೆಯಿಂದ ಸಿಗುತ್ತೆ ನಿಜವಾದ ಪ್ರೀತಿ  title=
Blue Topaz Benefits

Gemstone: ರತ್ನ ಶಾಸ್ತ್ರದ ಪ್ರಕಾರ, ಕೆಲವು ರತ್ನಗಳನ್ನು (Gemstone) ಧರಿಸುವುದರಿಂದ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತದೆ. ರತ್ನ ಶಾಸ್ತ್ರದ ಪ್ರಕಾರ ನೀಲಮಣಿ ಗರುವಿನ ರತ್ನ. ಇದನ್ನು ಧರಿಸುವುದರಿಂದ ಗುರು ಗ್ರಹ ಬಲಗೊಳ್ಳುತ್ತದೆ. ಆದಾಗ್ಯೂ, ಈ ರತ್ನವನ್ನು ಧರಿಸುವಾಗ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು, ಇಲ್ಲವೇ ಇದು ಹಾನಿಯನ್ನುಂಟುಮಾಡುತ್ತದೆ. ವಾಸ್ತವವಾಗಿ, ರತ್ನಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನೀಲಮಣಿಯೂ ಒಂದು. 

ನೀಲಮಣಿ ಐದು ಬಣ್ಣಗಳಲ್ಲಿ ಲಭ್ಯವಿದೆ:
ನೀಲಮಣಿ ಐದು ಬಣ್ಣಗಳಲ್ಲಿ ಕಂಡುಬರುತ್ತದೆ. ನೀಲಮಣಿ ಹಳದಿ, ಕಂದು, ಬಿಳಿ, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. ನಿಜವಾದ ನೀಲಮಣಿ (Blue Topaz) ಪಾರದರ್ಶಕವಾಗಿರುತ್ತದೆ. ಈ ರತ್ನವನ್ನು 24 ಗಂಟೆಗಳ ಕಾಲ ಹಾಲಿನಲ್ಲಿಟ್ಟ ನಂತರ, ಅದು ಮಸುಕಾಗದಿದ್ದರೆ, ಅದು ನಿಜವೆಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ- Perfect Husband: ಪರ್ಫೆಕ್ಟ್ ಪತಿ ಎಂದು ಸಾಬೀತುಪಡಿಸುತ್ತಾರೆ ಈ 3 ರಾಶಿಯ ಹುಡುಗರು

ನೀಲಿ ನೀಲಮಣಿ ಧರಿಸುವುದರ ಪ್ರಯೋಜನಗಳು:
>> ನೀಲಿ ನೀಲಮಣಿ ಧರಿಸುವುದರಿಂದ ಕೋಪವನ್ನು ನಿಯಂತ್ರಿಸಲಾಗುತ್ತದೆ. >> ಇದರೊಂದಿಗೆ ಇದನ್ನು ಧರಿಸುವುದರಿಂದ ಆಕರ್ಷಣೆಯ ಶಕ್ತಿಯೂ ಹೆಚ್ಚುತ್ತದೆ. 
>> ಇದಲ್ಲದೆ, ಈ ರತ್ನವು ಪ್ರೇಮ ಸಂಬಂಧಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. 
>> ಈ ಕಲ್ಲು ಧರಿಸಿದರೆ ನಿಜವಾದ ಪ್ರೀತಿ ಸಿಗುತ್ತದೆ ಎಂದು ನಂಬಲಾಗಿದೆ. >> ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಸಹಕಾರಿ. 

ನೀಲಮಣಿಯನ್ನು ಯಾರು ಧರಿಸಬಾರದು?
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ವೃಷಭ, ಮಿಥುನ, ತುಲಾ, ಮಕರ, ಕನ್ಯಾ ಮತ್ತು ಕುಂಭ ರಾಶಿಯವರು ನೀಲಮಣಿ ಧರಿಸುವುದನ್ನು ತಪ್ಪಿಸಬೇಕು. ಅಲ್ಲದೆ, ಪುಷ್ಪಮಂಜರಿಯೊಂದಿಗೆ ವಜ್ರ ಮತ್ತು ಪಚ್ಚೆಯನ್ನು ಧರಿಸಬಾರದು. ಮತ್ತೊಂದೆಡೆ, ಧನು ರಾಶಿಯಲ್ಲಿ ಗುರುವಿನ ಸ್ಥಾನವು ಸರಿಯಾಗಿಲ್ಲದಿದ್ದರೆ, ಆಗ ನೀಲಮಣಿಯನ್ನು ಕುತ್ತಿಗೆಗೆ ಧರಿಸಬೇಕು. 

ಇದನ್ನೂ ಓದಿ-  Weekly Love Horoscope: ವ್ಯಾಲೆಂಟೈನ್ಸ್ ಡೇ ವೀಕ್: ಈ ವಾರ ನಿಮ್ಮ ಪ್ರೀತಿಯ ಜಾತಕ ಹೇಗಿದೆ ತಿಳಿಯಿರಿ

ಯಾರು ನೀಲಮಣಿ ಧರಿಸಬಹುದು ?
ಜ್ಯೋತಿಷ್ಯದ ಪ್ರಕಾರ, ಧನು ರಾಶಿ ಮತ್ತು ಮೀನ ರಾಶಿಯ ಜನರು ನೀಲಮಣಿ ಧರಿಸಲು ಸಲಹೆ ನೀಡಲಾಗುತ್ತದೆ. ಇದಲ್ಲದೆ, ಜಾತಕದಲ್ಲಿ ಗುರು ಗ್ರಹದ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಮೇಷ, ಕರ್ಕ, ಸಿಂಹ, ವೃಶ್ಚಿಕ ಮತ್ತು ಧನು ರಾಶಿಯವರೂ ನೀಲಮಣಿಯನ್ನು ಧರಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News