ನವದೆಹಲಿ: ಇದೀಗ ದೇಶಾದ್ಯಂತ ಎಲ್ಲರಿಗೂ ತಮ್ಮ ಆರೋಗ್ಯದ್ದೇ (Health) ಚಿಂತೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಆತಂಕ. ಇಂತಹ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸದರೂ ಕಡಿಮೆಯೇ.   ಆದರೆ ಕೆಲವೊಮ್ಮೆ ಎಷ್ಟು ಕಾಳಜಿ ವಹಿಸಿದರೂ ಮನೆಯಲ್ಲಿ ಒಬ್ಬರಿಗಲ್ಲ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅದು ಯೋಚನೆ ಮಾಡಬೇಕಾದ ವಿಷಯ.   ಇದಕ್ಕೆ  ಮನೆಯ ವಾಸ್ತುವಿನಲ್ಲಿ ಕಂಡುಬರವ ದೋಷ (Vastu Dosha) ಕಾರಣವಿರಬಹುದು. ವಾಸ್ತು ಸಂಬಂಧಿಸಿದ ದೋಷಗಳಿದ್ದರೂ ಮನೆ ಮಂದಿಗೆ ಅನಾರೋಗ್ಯ ಕಾಡುತ್ತಿರುತ್ತದಂತೆ. 


COMMERCIAL BREAK
SCROLL TO CONTINUE READING

ವಾಸ್ತುಗೆ ಸಂಬಂಧಿಸಿದ ಈ ದೋಷಗಳು ರೋಗದ ಅಪಾಯವನ್ನು ಹೆಚ್ಚಿಸುತ್ತವೆ :
1. ನಿಮ್ಮ ಮನೆಯ ಮುಖ್ಯ ದ್ವಾರದ (Main door) ಹೊರಗೆ ಹಳ್ಳವಿದ್ದರೆ ಅದನ್ನು ತಕ್ಷಣ ಮುಚ್ಚಿ ಬಿಡಿ. ಅದು ವಾಸ್ತು ದೋಷಗಳಿಗೂ (Vastu Dosha) ಕಾರಣವಾಗುತ್ತದೆ. ಮನೆಯ ಮುಂದೆ ಹಳ್ಳವಿದ್ದರೆ , ಕುಟುಂಬದ ಮುಖ್ಯಸ್ಥರು ಮತ್ತು ಇತರ ಸದಸ್ಯರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಅಪಾಯವನ್ನು ಎದುರಿಸುತ್ತಾ ಇರುತ್ತಾರೆ ಎನ್ನುತ್ತದೆ ವಾಸ್ತು ಶಾಸ್ತ್ರ(Vastu shastra) . ಅಲ್ಲದೆ, ಯಾವಾಗಲೂ ಮನೆಯ ಮುಖ್ಯ ದ್ವಾರ ಸ್ವಚ್ಛವಾಗಿರಬೇಕು. ಮನೆಯ ಮುಂದೆ ಗಲೀಜು ಇದ್ದರೆ ಅದು ಕೂಡಾ ವಾಸ್ತು ದೋಷಕ್ಕೆ ಕಾರಣವಾಗುತ್ತದೆಯಂತೆ.  


ಇದನ್ನೂ ಓದಿ : Hanuman Jayanti 2021: ಹನುಮ ಜಯಂತಿಯ ದಿನ ಸುಂದರ ಕಾಂಡ ಏಕೆ ಪಠಿಸಬೇಕು?


2. ಮನೆಯ ಕೇಂದ್ರ ಭಾಗವನ್ನು ಅಥವಾ ಮಧ್ಯ ಭಾಗವನ್ನು ಬ್ರಹ್ಮಸ್ಥಾನ ಎಂದು ಕರೆಯುತ್ತಾರೆ. ಹಳೆಯ ಕಾಲದಲ್ಲಿ ಮನೆಯ ಮಧ್ಯ ಭಾಗ ಅಂದರೆ ಬ್ರಹ್ಮಸ್ಥಾನದಲ್ಲಿ ತೆರೆದ ಪ್ರಾಂಗಣವಿರುತ್ತಿತ್ತು. ಆದರೆ ಈಗ ಆ ರೀತಿ ಇಡುವುದು ಸಾಧ್ಯವಿಲ್ಲ. ಮನೆಯ ಬ್ರಹ್ಮಸ್ಥಾನವನ್ನು ಸಾಧ್ಯವಾದಷ್ಟು ಖಾಲಿ ಇರಿಸಿ. ನೀವು ಕೆಲವು ಭಾರವಾದ ಪೀಠೋಪಕರಣಗಳನ್ನು (Furniture) ಅಲ್ಲಿ ಇರಿಸಿದ್ದರೆ, ಅದು ವಾಸ್ತು ದೋಷಗಳಿಗೂ ಕಾರಣವಾಗಬಹುದು. ಇನ್ನು ಮನೆಯ ಮಧ್ಯದಲ್ಲಿ ಮೆಟ್ಟಿಲುಗಳಿದ್ದರೆ, ಅದು ಕೂಡಾ ವಾಸ್ತು ದೋಷಗಳಿಗೆ ಕಾರಣವಾಗಬಹುದು.  


3. ಈಶಾನ್ಯ ದಿಕ್ಕನ್ನು ದೇವರ ಸ್ಥಳವೆಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಶೌಚಾಲಯಗಳು ಅಥವಾ ಮೆಟ್ಟಿಲುಗಳನ್ನು ನಿರ್ಮಿಸಿದ್ದರೆ, ಅದು ವಾಸ್ತುವಿನ ಪ್ರಮುಖ ದೋಷವಾಗಿರುತ್ತದೆ. ಈ ಕಾರಣದಿಂದಾಗಿ ಕುಟುಂಬ ಸದಸ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಅಥವಾ ಕುಟುಂಬ ಸದಸ್ಯರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಬಹುದು. 


ಇದನ್ನೂ ಓದಿ :   Saturday Remedies: ಶನಿವಾರ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನು ಖರೀದಿಸಬೇಡಿ, ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ


4. ಇನ್ನು ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ (Kitchen) ಇಲ್ಲದೇ ಹೋದರೆ, ಕುಟುಂಬ ಸದಸ್ಯರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗಿ ಯಾವತ್ತೂ  ಅಡುಗೆ ಮನೆ ಅಗ್ನಿ ಮೂಲೆಯಲ್ಲಿಯೇ ಇರಬೇಕು.  ಒಂದು ವೇಳೆ ಮನೆಯ ಅಡುಗೆ ಮನೆ ಅಗ್ನಿ ಮೂಲೆಯಲ್ಲಿ ಇಲ್ಲದೇ ಹೋದರೆ, ಅಗ್ನಿ ಮೂಲೆಯಲ್ಲಿ ಪ್ರತಿದಿನ ಕೆಂಪು ಮೇಣದಬತ್ತಿಯನ್ನು (red candale) ಬೆಳಗುತ್ತಿರಬೇಕು. ಹೀಗೆ ಮಾಡಿದರೆ ಕುಟುಂಬ ಸದಸ್ಯರ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.