ನವದೆಹಲಿ : ಮನೆಯ ಕೆಲವು ವಾಸ್ತು ದೋಷಗಳು (Vastu dosh) ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದರೆ ಕೆಲವು ವಾಸ್ತು ದೋಷಗಳು ಬಹಳ ಅಪಾಯಕಾರಿಯಾಗಿರುತ್ತದೆ. ಅಂತಹ ದೋಷಗಳು ಮನೆಯನ್ನು ಹಾಳುಮಾಡುತ್ತವೆ. ಇದರೊಂದಿಗೆ, ಅವರು ಕುಟುಂಬದ ಆರೋಗ್ಯ ಮತ್ತು ಅವರ ವೃತ್ತಿಜೀವನಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಈ ವಾಸ್ತು ದೋಷಗಳು (Vastu tips) ಜೀವನದ ಪ್ರಗತಿಯ ಹಾದಿಯನ್ನು ತಡೆಯುತ್ತವೆ. ಆದ್ದರಿಂದ ಅವುಗಳನ್ನು ತಕ್ಷಣವೇ ಸರಿಪಡಿಸುವುದು ಉತ್ತಮ. 


COMMERCIAL BREAK
SCROLL TO CONTINUE READING

ಉತ್ತರ ದಿಕ್ಕಿನ ವಾಸ್ತು ದೋಷ : 
ಮನೆಯ ಉತ್ತರ ದಿಕ್ಕು ಅತ್ಯಂತ ಮುಖ್ಯವಾಗಿದೆ. ಈ ದಿಕ್ಕನ್ನು ಸರಿಯಾಗಿ ಬಳಸಿದರೆ, ಮನೆಯಲ್ಲಿ ಯಾವಾಗಲೂ ಸಂತೋಷ ಮನೆ ಮಾಡುತ್ತದೆ. ಇಲ್ಲದಿದ್ದರೆ, ಈ ದಿಕ್ಕಿನ ವಾಸ್ತು ದೋಷಗಳು (Vastu dosh) ಉದ್ಯೋಗ-ವ್ಯವಹಾರ, ಹಣದ ಆಗಮನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಈ ದಿಕ್ಕಿನಲ್ಲಿ ಶೌಚಾಲಯ-ವಾಶ್ರೂಮ್, ಅಡಿಗೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ತರುತ್ತದೆ. ಇದಲ್ಲದೆ, ಈ ದಿಕ್ಕಿನಲ್ಲಿ ಕೊಳಕು ಇಟ್ಟುಕೊಳ್ಳುವುದರಿಂದ ಸಂಪತ್ತು ಮತ್ತು ಆಸ್ತಿ ನಷ್ಟವಾಗುತ್ತದೆ. ಮುರಿದ ಅಥವಾ ಭಾರವಾದ ಪೀಠೋಪಕರಣಗಳನ್ನು ಈ ದಿಕ್ಕಿನಲ್ಲಿ ಇಡಬೇಡಿ. 


ಇದನ್ನೂ ಓದಿ : Weekly Horoscope: ಈ ಎರಡು ರಾಶಿಯವರಿಗೆ ಆಗಲಿದೆ ಭಾರಿ ಧನ ಲಾಭ, ತಿಳಿಯಿರಿ ಹೇಗಿರಲಿದೆ ನಿಮ್ಮ ವಾರ ಭವಿಷ್ಯ
  
ಗಡಿಯಾರದ ದಿಕ್ಕು ತಪ್ಪಾಗಿದ್ದರೂ
 ಅವಕಾಶಗಳು ದೂರವಾಗುತ್ತದೆ :
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಉತ್ತಮ ವೃತ್ತಿಜೀವನವೂ ಬುಡಮೇಲಾಗಬಹುದು. ಅಲ್ಲದೆ, ಮನೆಯ ದಕ್ಷಿಣ ಗೋಡೆಗೆ ಕನ್ನಡಿ ಹಾಕುವುದರಿಂದ (Mirror vastu) ಮನೆಯ ಮಹಿಳೆಯರಿಗೆ ಹಾನಿಯಾಗುತ್ತದೆ. ಅಂತಹ ಮನೆಯಲ್ಲಿ ಹೆಣ್ಣು ಮಕ್ಕಳು ಎಂದಿಗೂ ಸಂತೋಷದಿಂದ ಇರುವುದಿಲ್ಲ ಎನ್ನಲಾಗಿದೆ. ಗೋಡೆ ಗಡಿಯಾರವನ್ನು(wall clock vastu) ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸುಖ, ಸಂಪತ್ತು ವೃದ್ಧಿಯಾಗುತ್ತದೆ. 


ಕಿಟಕಿಗಳಲ್ಲಿ ದೋಷಗಳು :
ಮನೆಯ ದಕ್ಷಿಣ ದಿಕ್ಕಿನಲ್ಲಿ ಮಾಡಿದ ಕಿಟಕಿಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negetive energy) ತರುತ್ತವೆ. ಇದರಿಂದ ಮನೆ ಮಂದಿಗೆ ರೋಗ ರುಜಿನಗಳು ತಗಲುತ್ತವೆ. ಅಲ್ಲದೆ ಮನೆಯಲ್ಲಿ ಎಂದೂ ಜಗಳಗಳು ನಡೆಯುತ್ತಿರುತ್ತವೆ. ಅಷ್ಟೇ ಅಲ್ಲ, ಇಂತಹ ಮನೆಗಳ ಮಕ್ಕಳು ಓದು, ಬರವಣಿಗೆಯಲ್ಲೂ ತೀರಾ ಹಿಂದುಳಿಯುತ್ತಾರೆ.  


ಇದನ್ನೂ ಓದಿ :   Budhaditya Yoga: ಬುಧ- ಸೂರ್ಯನ ಸಂಯೋಗದಿಂದ ಈ 5 ರಾಶಿಯವರಿಗೆ ಸಿಗಲಿದೆ ಶುಭಫಲ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.