ನವದೆಹಲಿ: ಭಾರತೀಯ ಪಠ್ಯಗಳಲ್ಲಿ ವಾಸ್ತು ಶಾಸ್ತ್ರದ ಮಹತ್ವದ ಬಗ್ಗೆ ಬಹಳಷ್ಟು ಹೇಳಲಾಗಿದೆ. ವಾಸ್ತು ನಿಯಮಗಳ ಪ್ರಕಾರ ನಾವು ಯಾವುದೇ ಕೆಲಸ ಮಾಡಿದಾಗ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ. ಜೊತೆಗೆ ಕುಟುಂಬದಲ್ಲಿ ಸಮೃದ್ಧಿಯನ್ನು ಪಡೆಯುತ್ತೇವೆಂದು ನಂಬಲಾಗಿದೆ. ಮತ್ತೊಂದೆಡೆ ವಾಸ್ತು ಶಾಸ್ತ್ರವನ್ನು ನಿರ್ಲಕ್ಷಿಸುವುದರಿಂದ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯು ಹದಗೆಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ. ಇಂದು ನಾವು ಮನೆಯ ಮುಖ್ಯ ದ್ವಾರಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳ ಬಗ್ಗೆ ಹೇಳುತ್ತೇವೆ.


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಎಂದಿಗೂ 5 ವಸ್ತುಗಳು ಇರಬಾರದು, ಇಲ್ಲದಿದ್ದರೆ ತಾಯಿ ಲಕ್ಷ್ಮಿದೇವಿಯು ಕೋಪಿಸಿಕೊಳ್ಳುತ್ತಾಳಂತೆ. ಕುಟುಂಬದ ಮೇಲೆ ತಾಯಿಯ ಆಶೀರ್ವಾದ  ಸಿಗದೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಹೀಗಾಗಿ ಮನೆಯ ಮುಖ್ಯದ್ವಾರದ ವಾಸ್ತುವಿನ ಬಗ್ಗೆ ನೀವು ಸರಿಯಾದ ನಿಯಮ ಪಾಲಿಸಬೇಕು. ಆ 5 ವಿಷಯಗಳು ಯಾವುವು ಎಂದು ತಿಳಿಯಿರಿ.


ಗೇಟ್‌ನಲ್ಲಿ ಕಸದ ಬಕೆಟ್ ಇಡಬೇಡಿ


ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಗೇಟ್ ಬಳಿ ಕಸ ತುಂಬಿದ ಬಕೆಟ್ ಅನ್ನು ಎಂದಿಗೂ ಇಡಬಾರದು. ಹೀಗೆ ಮಾಡುವುದು ವಾಸ್ತು ನಿಯಮಗಳಿಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮುಖ್ಯ ದ್ವಾರದ ಮುಂದೆ ಕಸದ ರಾಶಿ ಇರಬಾರದು. ಇದರಿಂದ ನಿಮ್ಮ ಪ್ರತಿಷ್ಠೆ ಕುಸಿಯುವುದಲ್ಲದೆ, ನಿಮ್ಮ ಕುಟುಂಬಸ್ಥರು ರೋಗಗಳ ಕಪಿಮುಷ್ಠಿಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ.


ಇದನ್ನೂ ಓದಿ: Venus Rise 2022: ಈ ರಾಶಿಯವರಿಗೆ ಒಳ್ಳೆಯ ದಿನ ಪ್ರಾರಂಭ! ವೃತ್ತಿ ಮತ್ತು ಅಪಾರ ಸಂಪತ್ತು ದೊರೆಯಲಿದೆ


ಮುಖ್ಯ ದ್ವಾರದ ಮುಂದೆ ಧಾರ್ಮಿಕ ಸ್ಥಳ ಇರಬಾರದು


ವಾಸ್ತು ತಜ್ಞರ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಯಾವುದೇ ಧಾರ್ಮಿಕ ಸ್ಥಳ ಇರಬಾರದು. ಇಂತಹ ಸ್ಥಳದಲ್ಲಿ ಮನೆ ಹೊಂದಿರುವ ಜನರು ಯಾವಾಗಲೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಧಾರ್ಮಿಕ ಸ್ಥಳದಿಂದ ಬರುವ ಶಬ್ದ ಮತ್ತು ಜನಸಂದಣಿಯು ಅವರ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳುತ್ತದೆ. ಇದರೊಂದಿಗೆ ಮಾನಸಿಕ ಖಿನ್ನತೆಗೂ ಬಲಿಯಾಗುತ್ತಾರೆ.


ಮುಖ್ಯ ದ್ವಾರದ ಮುಂದೆ ಕಲ್ಲುಗಳಿರಬಾರದು


ಮನೆಯ ಮುಖ್ಯ ದ್ವಾರದ ಮುಂದೆ ಕಲ್ಲುಗಳು ಸಂಗ್ರಹವಾಗಲು ಬಿಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಕಲ್ಲುಗಳ ಸಂಗ್ರಹವಿದ್ದರೆ ಕುಟುಂಬದ ಸದಸ್ಯರ ಪ್ರಗತಿ ನಿಲ್ಲುತ್ತದೆ ಮತ್ತು ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಪ್ರಮುಖ ಕೆಲಸಗಳ ಕಾರಣ ಮನೆಯ ಮುಂದೆ ಕಲ್ಲುಗಳು ಬಿದ್ದಿದ್ದರೆ, ಕೆಲಸ ಮುಗಿದ ತಕ್ಷಣ ಅವುಗಳನ್ನು ತೆಗೆದುಹಾಕಬೇಕು.


ಇದನ್ನೂ ಓದಿ: Shani Dev: ಒಂದು ರಾಶಿಯಲ್ಲಿ 3 ಗ್ರಹಗಳ ಸಂಗಮ: ಶನಿಬಲದಿಂದ ಈ ಜನರ ಜೀವನ ಅಲ್ಲೋಲ ಕಲ್ಲೋಲ!


ಕಂಬಗಳನ್ನು ತಕ್ಷಣವೇ ಸ್ಥಳಾಂತರಿಸಬೇಕು


ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ವಿದ್ಯುತ್ ಅಥವಾ ಇನ್ನಾವುದೇ ರೀತಿಯ ಕಂಬಗಳನ್ನು ಇಟ್ಟರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಕುಟುಂಬದಲ್ಲಿ ಸದಾ ಸಮಸ್ಯೆ ಇರುತ್ತದೆ. ವಿಶೇಷವಾಗಿ ಮಹಿಳೆಯರು ಇಂತಹ ಪರಿಸ್ಥಿತಿಯಿಂದ ಹೆಚ್ಚು ಪರಿಣಾಮ ಬೀರುತ್ತಾರೆ ಮತ್ತು ಅವರು ಅನಾರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.


ನೀರು ನಿಲ್ಲುವುದನ್ನು ಅಶುಭ 


ಮುಖ್ಯ ದ್ವಾರದ ಮುಂದೆ ಕೆಸರು ಅಥವಾ ಯಾವುದೇ ರೀತಿಯ ನೀರು ನಿಂತರೆ ಆರ್ಥಿಕ ಕುಸಿತದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ನಿಯಮಗಳ ಪ್ರಕಾರ ಕೊಳಕು ನೀರು ಹೆಚ್ಚಾಗಿ ತುಂಬಿರುವ ಮನೆಗಳ ಜನರು ಮತ್ತೆ ಮತ್ತೆ ರೋಗಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆರ್ಥಿಕವಾಗಿಯೂ ದುರ್ಬಲರಾಗುತ್ತಾರೆಂದು ನಂಬಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.