Vastu Shastra: ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದೇ? ನಿಮಗಿದು ಗೊತ್ತಿರಲಿ
Vastu Shastra: ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿ ಇಡುವಾಗ ವಿಶೇಷ ಕಾಳಜಿ ವಹಿಸಬೇಕು. ಮಲಗುವಾಗ ದೇಹದ ಯಾವ ಭಾಗವೂ ಕನ್ನಡಿಯಲ್ಲಿ ಕಾಣಿಸದ ರೀತಿಯಲ್ಲಿ ಕೋಣೆಯಲ್ಲಿ ಕನ್ನಡಿಯನ್ನು ಇಡಬೇಕು.
Vastu Shastra: ಸಾಮಾನ್ಯವಾಗಿ ಅಲಂಕಾರ ಮಾಡಿಕೊಳ್ಳಲು ಕನ್ನಡಿಯನ್ನು ಬಳಸಲಾಗುತ್ತದೆ. ನಮ್ಮ ವ್ಯಕ್ತಿತ್ವದ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ನಾವು ಇರುವಂತೆ ನಮ್ಮನ್ನು ಬಿಂಬಿಸುವ ಏಕೈಕ ಸಾಧನ ಎಂದೂ ಕೂಡ ಇದನ್ನು ಬಣ್ಣಿಸಬಹುದು. ಕನ್ನಡಿ ಇಲ್ಲದೆ ನಿಮ್ಮ ವ್ಯಕ್ತಿತ್ವದ ದರ್ಶನ ಪಡೆಯುವುದು ಕಷ್ಟ. ವಾಸ್ತು ಶಾಸ್ತ್ರದಲ್ಲೂ ಕನ್ನಡಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ವಾಸ್ತು ಪ್ರಕಾರ, ಮನೆಯಲ್ಲಿ ಅಳವಡಿಸಿರುವ ಕನ್ನಡಿ (Mirror Vastu Tips) ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ, ಅದು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಮನೆಯಲ್ಲಿರುವ ಕನ್ನಡಿ ವಾಸ್ತು ಪ್ರಕಾರವಾಗಿದ್ದರೆ, ಮನೆಯ ಪ್ರಗತಿಯಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗಲೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಇದನ್ನೂ ಓದಿ- ಶನಿದೇವನ ಕೃಪೆಯಿಂದ 2022 ರಲ್ಲಿ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ
ಮಲಗುವ ಕೋಣೆಯಲ್ಲಿ ಈ ಸ್ಥಳದಲ್ಲಿ ಕನ್ನಡಿ ಇಡಬೇಡಿ:
ವಾಸ್ತು ಪ್ರಕಾರ, ಕನ್ನಡಿಯನ್ನು ನಿಖರವಾಗಿ ಹಾಸಿಗೆಯ ಮುಂದೆ ಇಡಬಾರದು. ಒಂದೊಮ್ಮೆ ನೀವು ಈಗಾಗಲೇ ಈ ಸ್ಥಳದಲ್ಲಿ ಕನ್ನಡಿ ಸ್ಥಾಪಿಸಿದ್ದರೆ, ತಕ್ಷಣವೇ ಅದನ್ನುತೆಗೆದುಹಾಕಬೇಕು. ಹಾಸಿಗೆಯ ಮುಂಭಾಗದಲ್ಲಿರುವ ಕನ್ನಡಿಯು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ಮಲಗುವ ಕೋಣೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ, ಕೋಣೆಯ ಕಿಟಕಿ ಅಥವಾ ಬಾಗಿಲಿನ ಮುಂದೆ ಕನ್ನಡಿಯನ್ನು ಇಡಬಾರದು. ಏಕೆಂದರೆ ಹೊರಗಿನ ಬೆಳಕು ಬೆಳಕಿನೊಂದಿಗೆ ಡಿಕ್ಕಿ ಹೊಡೆದು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರಿಂದ ಮನೆಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.
ಮಲಗುವ ಕೋಣೆಯಲ್ಲಿ ಬಾಗಿಲಿನೊಳಗೆ ಕನ್ನಡಿ (Bedroom Mirror Vastu Tips) ಇಡುವುದು ವಾಸ್ತುವಿನ ದೃಷ್ಟಿಯಿಂದ ಸರಿಯಲ್ಲ. ಬೆಡ್ ರೂಂ ಬಾಗಿಲಿಗೆ ಅಂಟಿದಂತೆ ಸ್ಥಾಪಿಸಲಾದ ಕನ್ನಡಿಯಿಂದ ನಕಾರಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ, ಇದರಿಂದಾಗಿ ಮನೆಯ ಪ್ರಗತಿಗೆ ಅಡ್ಡಿ ಉಂಟಾಗುತ್ತದೆ.
ವಾಸ್ತು ಪ್ರಕಾರ, ಕೋಣೆಯ ಬಾಗಿಲು ಈಶಾನ್ಯ ಮೂಲೆಯಲ್ಲಿದ್ದರೆ, ಕನ್ನಡಿಯನ್ನು ಅಳವಡಿಸಬಹುದು. ಇದಲ್ಲದೆ, ಮನೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬಾರದು. ಏಕೆಂದರೆ ಇದು ಅಪಶ್ರುತಿ ಅಥವಾ ಸಂಕಟವನ್ನು ಹೆಚ್ಚಿಸುತ್ತದೆ. ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿ ಇಡುವಾಗ ವಿಶೇಷ ಕಾಳಜಿ ವಹಿಸಬೇಕು. ಮಲಗುವಾಗ ದೇಹದ ಯಾವ ಭಾಗವೂ ಕನ್ನಡಿಯಲ್ಲಿ ಕಾಣಿಸದ ರೀತಿಯಲ್ಲಿ ಕೋಣೆಯಲ್ಲಿ ಕನ್ನಡಿಯನ್ನು ಇಡಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ ಎಂದೂ ಸಹ ಹೇಳಲಾಗುತ್ತದೆ.
ಇದನ್ನೂ ಓದಿ- ಉದ್ಯೋಗ ನಷ್ಟದ ಸಂಕೇತ ನೀಡುತ್ತದೆ ಈ ರೀತಿಯ ಕನಸುಗಳು, ಎದುರಾಗಬಹುದು ಆರ್ಥಿಕ ನಷ್ಟ
ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು:
ಕನ್ನಡಿಯನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಮನೆಯಲ್ಲಿ ಈ ದಿಕ್ಕಿಗೆ ಕನ್ನಡಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಕನ್ನಡಿ ತುಂಬಾ ದೊಡ್ಡದಾಗಿರಬಾರದು. ದುಂಡನೆಯ ಆಕಾರವನ್ನು ಹೊರತುಪಡಿಸಿ ಯಾವುದೇ ಆಕಾರದ ಕನ್ನಡಿಯನ್ನು ಮನೆಯಲ್ಲಿ ಸ್ಥಾಪಿಸಬಹುದು. ಮತ್ತೊಂದೆಡೆ, ತೀಕ್ಷ್ಣವಾದ, ಮುರಿದ ಮತ್ತು ಕೊಳಕು ಕನ್ನಡಿಯು ಮನೆಯಲ್ಲಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.