Guru Rashi Parivartan: 2022 ರಲ್ಲಿ ಗುರುವಿನ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Guru Rashi Parivartan: ಜ್ಯೋತಿಷ್ಯದಲ್ಲಿ ಗ್ರಹಗಳ ಬದಲಾವಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

Written by - Yashaswini V | Last Updated : Dec 15, 2021, 08:47 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಅಂದರೆ ಬೃಹಸ್ಪತಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ
  • ಬೃಹಸ್ಪತಿಯನ್ನು ದೇವ ಗುರು ಎಂದು ಪರಿಗಣಿಸಲಾಗುತ್ತದೆ
  • 2022 ರಲ್ಲಿ ಗುರುವಿನ ಸ್ಥಾನಪಲ್ಲಟವು 4 ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ
Guru Rashi Parivartan: 2022 ರಲ್ಲಿ ಗುರುವಿನ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ title=
Guru Transit Effect On Zodiacs: 2022 ರಲ್ಲಿ ಬೃಹಸ್ಪತಿ ರಾಶಿ ಬದಲಾವಣೆಯಿಂದ 4 ರಾಶಿಯವರಿಗೆ ಅದೃಷ್ಟ

Guru Rashi Parivartan: 2021 ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ . 2022 ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ಇನ್ನೊಂದೆಡೆ ಹೊಸ ವರ್ಷದಲ್ಲಿ ಹಲವು ಗ್ರಹಗಳು ಕೂಡ ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ. ಜ್ಯೋತಿಷ್ಯದಲ್ಲಿ ಗ್ರಹಗಳ ಬದಲಾವಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.  ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಅಂದರೆ ಬೃಹಸ್ಪತಿಗೆ (Bruhaspati) ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಬೃಹಸ್ಪತಿಯನ್ನು ದೇವ ಗುರು ಎಂದು ಪರಿಗಣಿಸಲಾಗುತ್ತದೆ.

ಇತರ ಗ್ರಹಗಳಂತೆ ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಆ ಘಟನೆಯನ್ನು ವಿಶೇಷ ಪ್ರಾಮುಖ್ಯತೆಯ ಘಟನೆಯಾಗಿ ನೋಡಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ 12, 2022 ರಂದು, ಗುರು ತನ್ನದೇ ಆದ ರಾಶಿಯನ್ನು ಪ್ರವೇಶಿಸಲಿದ್ದಾನೆ. 2022 ರಲ್ಲಿ ಗುರುವಿನ ಸ್ಥಾನಪಲ್ಲಟವು (Guru Rashi Parivartan) 4 ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.

2022 ರಲ್ಲಿ ಗುರುವಿನ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ:
ಕನ್ಯಾ ರಾಶಿ:
ಗುರುವಿನ ರಾಶಿ ಪರಿವರ್ತನೆಯು (Bruhaspati Rashi Parivartan) ಕನ್ಯಾ ರಾಶಿಯ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಹೊಸ ವರ್ಷದ ಮಧ್ಯದಲ್ಲಿ ಕನ್ಯಾ ರಾಶಿಯ ಜನರು ಇದರ ಹೆಚ್ಚು ಲಾಭವನ್ನು ಪಡೆಯುತ್ತಾರೆ. ಇವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿಯು ಬಹಳ ಸುಧಾರಿಸುತ್ತದೆ. ಅಲ್ಲದೆ, ಹೂಡಿಕೆಯ ಮೇಲೆ ದೊಡ್ಡ ಆದಾಯವಿದೆ. ಭೂಮಿಯಿಂದಲೂ ಕೂಡ ಅಧಿಕ ಲಾಭ ಸಿಗಲಿದೆ. 

ಇದನ್ನೂ ಓದಿ-  ಹೊಸ ವರ್ಷದಲ್ಲಿ ಈ ರಾಶಿಗಳ ಮೇಲೆ ‘ಕೇತು’ ಪ್ರಭಾವ: ಯಾವ ರಾಶಿಯ ಮೇಲೆ ಯಾವ ಪರಿಣಾಮ?

ವೃಶ್ಚಿಕ ರಾಶಿ: ಗುರುವಿನ ರಾಶಿ ಬದಲಾವಣೆ ವೃಶ್ಚಿಕ ರಾಶಿಯವರಿಗೆ ವರದಾನ . ಈ ಬದಲಾವಣೆಯ ಪ್ರಭಾವದ ಅಡಿಯಲ್ಲಿ, ಜೀವನವು ಅದ್ಭುತ ಮತ್ತು ಅಗಾಧವಾಗಿರುತ್ತದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯ ಜನರಿಗೆ ಹಣ ಸಂಪಾದಿಸಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. 2022 ಉದ್ಯೋಗ ಪ್ರಗತಿಗೆ ಉತ್ತಮ ವರ್ಷವಾಗಿರುತ್ತದೆ. ಅನೇಕ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಇದರ ಹೊರತಾಗಿ, ಆರ್ಥಿಕ ಲಾಭವು ಉತ್ತಮವಾಗಿರುತ್ತದೆ. ಒಟ್ಟಿನಲ್ಲಿ ಈ ವರ್ಷ ಗುರುವಿನ ಆಶೀರ್ವಾದದಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಯೋಗವಿದೆ.

ಧನು ರಾಶಿ: ಹೊಸ ವರ್ಷದಲ್ಲಿ ಗುರು ಭಗವಾನ್ ಮೀನರಾಶಿಗೆ (Jupiter in Pisces) ಹೋಗುವುದರಿಂದ ಧನು ರಾಶಿಯವರಿಗೆ ಧನಾತ್ಮಕ ಲಾಭಗಳು ಉಂಟಾಗುತ್ತವೆ. ಇದರೊಂದಿಗೆ ಇಷ್ಟು ದಿನಗಳ ನಿಮ್ಮ ಆರ್ಥಿಕ ಸವಾಲುಗಳು ಕೊನೆಗೊಳ್ಳಲಿವೆ. ಇದಲ್ಲದೆ, ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಲಾಭವನ್ನು ಹೆಚ್ಚಿಸಲು ಹಲವು ಅವಕಾಶಗಳಿವೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿವೆ.

ಇದನ್ನೂ ಓದಿ- ಈ ನಕ್ಷತ್ರದಲ್ಲಿ ಹುಟ್ಟಿದ ಮಗುವಿನ ಮುಖವನ್ನು ತಂದೆ ಕೂಡ ನೋಡಬಾರದಂತೆ... ಏಕೆ ಗೊತ್ತಾ?

ಕುಂಭ ರಾಶಿ: ಕುಂಭ ರಾಶಿಯವರಿಗೆ ಗುರು ಪಲ್ಲಟ ಬಹಳ ಅನುಕೂಲಕರವಾಗಿದೆ. ಇದರ ಹೊರತಾಗಿ, ಕೆಲಸದಲ್ಲಿ ಬಡ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬೇಕೆಂಬ ಬಲವಾದ ಆಸೆ ಈಡೇರುತ್ತದೆ. ವಿವಾಹಕ್ಕಾಗಿ ಯತ್ನಿಸುತ್ತಿರುವವರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರಲಿದೆ. ಆರ್ಥಿಕ ಬಿಕ್ಕಟ್ಟು ಸಹ ಕೊನೆಗೊಳ್ಳಲಿದೆ. 

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ದೃಢಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News