Vastu Remedies: ವಾಸ್ತು ಶಾಸ್ತ್ರದ ಪ್ರಕಾರ, ನವಿಲು ಗರಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ಈ ಗರಿಯು ಎಷ್ಟು ಸುಂದರವಾಗಿದೆಯೋ, ಅದರ ವೈಭವವು ಅಷ್ಟೇ ವಿಭಿನ್ನವಾಗಿದೆ. ಶ್ರೀಕೃಷ್ಣನ ಕಿರೀಟದ ಮೇಲಿರುವ ನವಿಲು ಗರಿಯು ಮನೆಯಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಮನೆಯಲ್ಲಿ ನವಿಲು ಗರಿಗಳನ್ನು ಇರಿಸುವುದರಿಂದಾಗುವ ಲಾಭಗಳೇನು ಎಂಬುದನ್ನು ಹೇಳಿಕೊಡುತ್ತಿದ್ದೇವೆ. ಇದರೊಂದಿಗೆ, ನವಿಲು ಗರಿಗಳ ದಿಕ್ಕಿನ ಬಗ್ಗೆಯೂ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 


COMMERCIAL BREAK
SCROLL TO CONTINUE READING

ನವಿಲು ಗರಿಗಳ ಪ್ರಯೋಜನಗಳು
>> ಮನೆಯಲ್ಲಿ ನವಿಲು ಗರಿಗಳನ್ನು ಇರಿಸುವುದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮತ್ತು ವಿದ್ಯೆಯ ಅಧಿದೇವತೆ ಸರಸ್ವತಿ ಇಬ್ಬರೂ ಮನೆಯಲ್ಲಿ ನೆಲೆಸುತ್ತಾರೆ ಎನ್ನಲಾಗುತ್ತದೆ.

>> ಮನೆಯಲ್ಲಿ ನವಿಲು ಗರಿಗಳನ್ನು ಕೊಳಲಿನ ಜೊತೆಗೆ ಇರಿಸಿಕೊಂಡರೆ, ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ.


>> ದಾಂಪತ್ಯ ಜೀವನದಲ್ಲಿ ಟೆನ್ಷನ್ ಇದ್ದರೆ ಮಲಗುವ ಕೋಣೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಜೀವನದಲ್ಲಿ ಮಧುರತೆ ಹೆಚ್ಚಾಗುತ್ತೆ.


>> ಯಾರಾದರೂ ನಿಮ್ಮ ಶತ್ರುಗಳಾಗಿದ್ದರೆ ಅಥವಾ ಯಾರೊಂದಿಗಾದರೂ ದ್ವೇಷವನ್ನು ಕೊನೆಗೊಳಿಸಲು ಬಯಸುತ್ತಿದ್ದರೆ, ನಂತರ ನವಿಲಿನ ಗರಿಗಳ ಮೇಲೆ ಹನುಮಂತನ ತಲೆಯ ಸಿಂಧೂರದಿಂದ ಶತ್ರುವಿನ ಹೆಸರನ್ನು ಬರೆಯಿರಿ ಮತ್ತು ಆ ನವಿಲು ಗರಿಯನ್ನು ಮಂಗಳವಾರ ಮತ್ತು ಶನಿವಾರದಂದು ರಾತ್ರಿ ಪೂಜಾ ಸ್ಥಳದಲ್ಲಿ ಇರಿಸಿ. ಮಾರನೆಯ ದಿನ ಬೆಳಗ್ಗೆ ನವಿಲು ಗರಿಯನ್ನು ನೀರಿನಲ್ಲಿ ತೇಲಿಬಿಡಿ. ಹೀಗೆ ಮಾಡುವುದರಿಂದ ದ್ವೇಷ ಕೊನೆಗೊಳ್ಳುತ್ತದೆ.

>> ನೀವು ನಿಮ್ಮ ಜಾತಕದಲ್ಲಿ ಗ್ರಹಗಳ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಬಯಸುತ್ತಿದ್ದರೆ, ಸಂಬಂಧಿಸಿದ ಗ್ರಹದ ಮಂತ್ರವನ್ನು 21 ಬಾರಿ ಜಪಿಸುವುದರ ಮೂಲಕ, ನವಿಲು ಗರಿಗಳ ಮೇಲೆ ನೀರನ್ನು ಸಿಂಪಡಿಸಿ ಮತ್ತು ಸ್ಪಷ್ಟವಾಗಿ ಗೋಚರಿಸುವ ಸ್ಥಳದಲ್ಲಿ ಅದನ್ನು ಸ್ಥಾಪಿಸಿ. ಹೀಗೆ ಮಾಡುವುದರಿಂದ ಗ್ರಹಗಳ ಅಶುಭ ಪರಿಣಾಮಗಳು ಅಂತ್ಯವಾಗುತ್ತದೆ.

>> ನಿಮ್ಮ ಮಗುವನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ನೀವು ಬಯಸುತ್ತಿದ್ದರೆ, ನವಿಲು ಗರಿಯನ್ನು ಬೆಳ್ಳಿಯ ತಾಯಿತದಲ್ಲಿ ಧರಿಸಬೇಕು.


ಇದನ್ನೂ ಓದಿ-Nag Panchami 2022: ನಾಗರ ಪಂಚಮಿಗೆ ಎಷ್ಟು ದಿನ ಬಾಕಿ? ಈ ರೀತಿ ಹಾವುಗಳ ಆಯಸ್ಸು ಹಾಗೂ ವಿಷಕಾರಿ ಅಂಶ ನಿರ್ಧರಿಸಲಾಗುತ್ತದೆ


ನವಿಲು ಗರಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ದಿಕ್ಕಿನ ತಿಜೋರಿಯಲ್ಲಿ ನಿಂತಿರುವ ನವಿಲು ಗರಿಗಳನ್ನು ಇದ್ರಿಸಿದರೆ, ಹಣದ ಕೊರತೆ ಇರುವುದಿಲ್ಲ. ಇದಲ್ಲದೆ, ನೀವು ರಾಹುವಿನ ದೋಷವನ್ನು ತೆಗೆದುಹಾಕಲು ಬಯಸಿದರೆ, ಅದನ್ನು ಪೂರ್ವ ಮತ್ತು ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಮನೆಯ ಪೂರ್ವ ಮತ್ತು ವಾಯುವ್ಯ ಗೋಡೆಗಳ ಮೇಲೆ ನವಿಲು ಗರಿಗಳನ್ನು ಇರಿಸಿದರೆ, ರಾಹುವಿನ ಅಡೆತಡೆ ದೂರಾಗುತ್ತದೆ ಎನ್ನಲಾಗುತ್ತದೆ. ಇದರಿಂದ ಮನೆಯ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ.


ಇದನ್ನೂ ಓದಿ-ಶ್ರಾವಣ ಮೊದಲ ಸೋಮವಾರ ಭೋಲೆನಾಥನನ್ನು ಮೆಚ್ಚಿಸಲು ಹೀಗೆ ಮಾಡಿ, ಶಿವನ ಕೃಪೆಗೆ ಪಾತ್ರರಾಗುವಿರಿ
 
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ