ನವದೆಹಲಿ: Vastu Shastra - ಸ್ವಂತ ಮನೆ ಹೊಂದಬೇಕೆಂಬು ಕನಸು ಎಲ್ಲರೂ ನೋಡುತ್ತಾರೆ. ಅದಕ್ಕಾಗಿ ಕಷ್ಟಪಟ್ಟು ದುಡಿದು, ಅನೇಕ ಜನರು ತಮ್ಮ ಕನಸಿನ ಮನೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಕೆಲವೊಮ್ಮೆ ಹೊಸ ಮನೆಯಲ್ಲಿಯೂ (House) ಕೂಡ ಕೆಲ ಜನರಿಗೆ ಸುಖ ಸಂತೋಷದ ಬದಲು ಸಂಕಷ್ಟಗಳೇ ಎದುರಾಗುತ್ತವೆ ಮತ್ತು ಇದು ಏಕೆ ನಡೆಯುತ್ತಿದೆ ಎಂದು ಅವರಿಗೆ ಅರ್ಥವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಇಲ್ಲಿ ಅಡಗಿರುತ್ತದೆ ಮನೆಯ ಅಶಾಂತಿಯ ಗುಟ್ಟು (Secret Of Disturbance In Home)
ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಹಲವು ಬಾರಿ ಮನೆಯಲ್ಲಿನ ಅಶಾಂತಿಯ ರಹಸ್ಯ ಮನೆಯ  ಭೂಮಿಯಲ್ಲಿ ಅಡಗಿರುತ್ತದೆ ಎನ್ನಲಾಗಿದೆ. ಆ ಭೂಮಿಯ ಮೇಲೆ ನೀವು ನಿಮ್ಮ ಮನೆಯನ್ನು ನಿರ್ಮಿಸುತ್ತಿರಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಾಂತಿ ಇಲ್ಲದಿದ್ದರೆ, ಎಲ್ಲವೂ ನಿಮ್ಮ ಪಾಲಿಗೆ ನಿರರ್ಥಕ. ಆದ್ದರಿಂದ, ನೀವು ನಿಮಗಾಗಿ ಒಂದು ಪ್ಲಾಟ್ ಅಥವಾ ಫ್ಲ್ಯಾಟ್ ಅನ್ನು ಖರೀದಿಸಲು ಹೋದಾಗಲೆಲ್ಲಾ, ಅದರ ಭೂಮಿಯ ಬಗ್ಗೆ ಒಳ್ಳೆಯ ಮಾಹಿತಿಯನ್ನು ಪಡೆಯಿರಿ. ಜೊತೆಗೆ ಬಹಳಷ್ಟು ವಿಷಯಗಳು ನಿಮ್ಮ ಮನೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ.


ನಿಮ್ಮ ಮನೆ ಜಾಗ ಯಾವ ಕಾರಣಕ್ಕೆ ಬಳಕೆಯಾಗುತ್ತಿತ್ತು ತಿಳಿದುಕೊಳ್ಳಿ
ವಾಸ್ತು ಶಾಸ್ತ್ರದ (Vastu) ಪ್ರಕಾರ, ನಿವೇಶನ ಅಥವಾ ಫ್ಲಾಟ್ ಖರೀದಿಸುವ ಮುನ್ನ, ಆ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಮೊದಲು ಬಳಸಲಾಗಿದೆ ಎಂಬುದನ್ನು ಪರಿಶೀಲಿಸಿ. ಮೊದಲು ಆ ಭೂಮಿಯಲ್ಲಿ ಶ್ಮಶಾನ ಅಥವಾ ಹೂಳುವ ಭೂಮಿಯಂತೆ ಬಳಕೆಯಾಗುತ್ತಿತ್ತೆ ಎಂಬುದನ್ನು ತಿಳಿದುಕೊಳ್ಳಿ. ಇದೇ ವೇಳೆ ನಿಮ್ಮ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿಯ ಹರಿವಿನ ಸಾಧ್ಯತೆ ಇರುತ್ತದೆ. ಇದರೊಂದಿಗೆ, ನಿಮ್ಮ ಭೂಮಿಯಲ್ಲಿ ಈಗಾಗಲೇ ಮೃತ ದೇಹ ಅಥವಾ ಇನ್ನಾವುದೇ ಕೆಟ್ಟ ವಿಷಯ ಹೂಳಿದ್ದರೂ, ಅದು ನಿಮ್ಮ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಕುಟುಂಬದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಸಾಧ್ಯವಾದರೆ, ಅಂತಹ ಸ್ಥಳದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳದೆ ಇರುವುದು ಒಳ್ಳೆಯದು.


ಮನೆ ಕಟ್ಟುವ ಮುನ್ನ ವಾಸ್ತು ಕುರಿತು ಗಮನ ಹರಿಸಿ
ಮನೆ ನಿರ್ಮಿಸುವಾಗ ವಾಸ್ತು ಕುರಿತು ಗಮನ ಹರಿಸಿ. ಮನೆಯಲ್ಲಿ ಮಲಗುವ ಕೋಣೆ ಎಂದಿಗೂ ಪೂರ್ವ-ದಕ್ಷಿಣ ದಿಕ್ಕಿನಲ್ಲಿರಬಾರದು ಎಂಬುದನ್ನು ಗಮನಿಸಿ. ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮನೆಯ ಸಂತೋಷದ ಮೇಲೆ  ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದರೊಂದಿಗೆ, ಸ್ನಾನಗೃಹ ಮತ್ತು ಶೌಚಾಲಯ ನೈಋತ್ಯ  ಮತ್ತು ಈಶಾನ್ಯದಲ್ಲಿ ಇರಬಾರದು. ಇದು ಮನೆಯಲ್ಲಿ ಅಪಶ್ರುತಿ ಮತ್ತು ಉದ್ವಿಗ್ನತೆಗೆ ಕಾರಣವಾಗುತ್ತದೆ. ಪಶ್ಚಿಮ ಕೋನವನ್ನು ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಶೌಚಾಲಯಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ-Krishna Janmashtami 2021: ಶ್ರೀಕೃಷ್ಣನು ಸದಾ ತನ್ನ ಮುಡಿಯಲ್ಲಿ ನವಿಲುಗರಿ ಧರಿಸುವುದರ ಹಿಂದಿನ ರಹಸ್ಯವೇನು ಗೊತ್ತೇ!


ಈ ದಿಕ್ಕಿನಲ್ಲಿ ಅಡುಗೆ ಮನೆ ಇರುವುದು ಶ್ರೇಷ್ಠ
ಮನೆಯ ಅಡುಗೆ ಮನೆ ಕುರಿತು ಹೇಳುವುದಾದರೆ, ಆಗ್ನೇಯ  ಕೋನದಲ್ಲಿ ಮಾಡಿದ ಅಡುಗೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ವಿದ್ಯುತ್ ಉಪಕರಣಗಳನ್ನು ಇರಿಸಲು ಯಾವುದೇ ಸಮಸ್ಯೆ ಇಲ್ಲ. ಇದೇ ವೇಳೆ ಈಶಾನ್ಯ ಅಂದರೆ ಈಶಾನ್ಯ ಕೋನವನ್ನು ನೀರಿನ ಸಂಕೇತವೆಂದು ಪರಿಗಣಿಸಲಾಗಿದೆ. ಆರ್‌ಒ ಅಥವಾ ವಾಟರ್ ಕೂಲರ್‌ನಂತಹ ಕುಡಿಯುವ ನೀರಿನ ಮೂಲವನ್ನು ಅಲ್ಲಿ ಸ್ಥಾಪಿಸಬೇಕು. ಒಬ್ಬ ವ್ಯಕ್ತಿಯು ವಾಸ್ತು ನಿಯಮಗಳನ್ನು ಅನುಸರಿಸಿದರೆ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷ ಉಳಿಯುತ್ತದೆ.


ಇದನ್ನೂ ಓದಿ-Shani Dev: ಶನಿದೇವನನ್ನು ಸಂತೋಷಪಡಿಸಲು ಈ ಎರಡು ಕೆಲಸ ಮಾಡಿದರೆ ಸಾಕಂತೆ!


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಲು ಸಲಹೆ)


ಇದನ್ನೂ ಓದಿ-Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ