Vastu Shastra: ಮರೆತೂ ಕೂಡ ಈ 4 ವಸ್ತುಗಳನ್ನು ಎರವಲು ಪಡೆಯಲೂ ಬೇಡಿ-ಕೊಡಲೂಬೇಡಿ, ಕೈಯಲ್ಲಿ ಹಣ ನಿಲ್ಲುವುದಿಲ್ಲ
Vastu Shastra: ಸ್ನೇಹ ಮತ್ತು ಬಂಧುತ್ವದಲ್ಲಿ ವಸ್ತುಗಳ ವಿನಿಮಯವು ತುಂಬಾ ಸಾಮಾನ್ಯವಾಗಿದೆ. ಅಂತಹ ಕೆಲವು ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ, ಅದನ್ನು ಎಂದಿಗೂ ವ್ಯಾಪಾರ ಮಾಡಬಾರದು. ವ್ಯಕ್ತಿಯ ಭವಿಷ್ಯವು ಕೆಲವು ವಿಷಯಗಳೊಂದಿಗೆ ಸಂಬಂಧಿಸಿದೆ.
Vastu Shastra: ಸ್ನೇಹವಾಗಲಿ ಅಥವಾ ಭ್ರಾತೃತ್ವವಾಗಲಿ ವಸ್ತುಗಳ ವಿನಿಮಯವು ಸಾಮಾನ್ಯವಾಗಿರುತ್ತದೆ. ಅಗತ್ಯವಿರುವ ಸಮಯದಲ್ಲಿ, ನಾವು ಹಣ, ಬಟ್ಟೆ, ಪುಸ್ತಕಗಳು ಇತ್ಯಾದಿಗಳನ್ನು ಎರವಲು ಪಡೆಯುವ ಮೂಲಕ ಅವುಗಳನ್ನು ಬಳಸುತ್ತೇವೆ ಅಥವಾ ಇತರರಿಗೆ ಸಹಾಯ ಮಾಡಲು ಈ ವಸ್ತುಗಳನ್ನು ನೀಡುತ್ತೇವೆ. ಆದರೆ, ಧರ್ಮಗ್ರಂಥಗಳ ಪ್ರಕಾರ ಕೆಲ ವಸ್ತುಗಳ ವಿಷಯದಲ್ಲಿ ಅದನ್ನು ಎಂದಿಗೂ ಮಾಡಬಾರದು ಎಂದು ಹೇಳಲಾಗಿದೆ. ಏಕೆಂದರೆ ನಮ್ಮ ಭವಿಷ್ಯವು ಕೆಲವು ವಸ್ತುಗಳಿಗೂ ಕೂಡ ಸಂಬಂಧಿಸಿರುತ್ತದೆ. ಈ ವಸ್ತುಗಳನ್ನು ಬಳಸುವುದರಿಂದ, ನಮ್ಮ ಅದೃಷ್ಟವು ದುರಾದೃಷ್ಟವಾಗಿ ಬದಲಾಗಬಹುದು. ಮನೆಯಲ್ಲಿ ಬಡತನ ಎದುರಾಗುವ ಸಾಧ್ಯತೆ ಇದೆ.ಹಾಗಾದರೆ ಬನ್ನಿ ಯಾವ ವಸ್ತುಗಳನ್ನು ಎರವಲು ರೂಪದಲ್ಲಿ ಪಡೆಯಬಾರರು ಮತ್ತು ಕೊಡಲೂಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಗಡಿಯಾರ
ಧರ್ಮಗ್ರಂಥಗಳ ಪ್ರಕಾರ, ಓರ್ವ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಗಡಿಯಾರಕ್ಕೆ ಸಂಬಂಧಿಸಿರುತ್ತದೆ ಎನ್ನಲಾಗುತ್ತದೆ. ಬೇರೊಬ್ಬರ ಗಡಿಯಾರವನ್ನು ಧರಿಸುವುದರಿಂದ ಆ ವ್ಯಕ್ತಿಯ ಕೆಟ್ಟ ಸಮಯ ನಿಮ್ಮ ಪಾಲಿಗೂ ಕೂಡ ಬರುತ್ತದೆ ಎನ್ನಲಾಗುತ್ತದೆ. ಗಡಿಯಾರವು ವ್ಯಕ್ತಿಯ ಭವಿಷ್ಯವನ್ನು ಸಮಯದೊಂದಿಗೆ ನಿರ್ಧರಿಸುತ್ತದೆ, ಆದ್ದರಿಂದ ಗಡಿಯಾರದ ವಿನಿಮಯ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಪೊರಕೆ
ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ, ಯಾರಿಗಾದರೂ ಪೊರಕೆಯನ್ನು ಕೊಡುವುದರಿಂದ ಲಕ್ಷ್ಮಿ ಮನೆಯನ್ನು ತೊರೆಯುತ್ತಾಳೆ. ಇದರಿಂದ ವ್ಯಕ್ತಿಯ ಆರ್ಥಿಕ ಭಾಗ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಹಣದ ನಷ್ಟ ಪ್ರಾರಂಭವಾಗುತ್ತದೆ. ಹಣವನ್ನು ನೀರಿನಂತೆ ಹರಿದುಹೋಗಲಾರಮ್ಭಿಸುತ್ತದೆ. ಹೀಗಾಗಿ ಪೊರಕೆಯನ್ನು ಎಂದಿಗೂ ಕೂಡ ಎರವಲು ಪಡೆಯಬೇಡಿ, ನೀಡಬೇಡಿ ಮತ್ತು ದಾನದ ರೂಪದಲ್ಲಿಯೂ ಕೂಡ ಕೊಡಬೇಡಿ.
ಪೆನ್ನು
ಸಾಮಾನ್ಯವಾಗಿ ಜನರು ಶಾಲೆ, ಕಾಲೇಜು ಅಥವಾ ಇನ್ನಾವುದೇ ಸ್ಥಳದಲ್ಲಿ ಪೆನ್ನು ಕೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಪೆನ್ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುತ್ತದೆ. ನೀವು ಯಾರಿಂದಲಾದರೂ ಪೆನ್ನು ಎರವಲು ಪಡೆದಿದ್ದರೆ, ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ, ಖಂಡಿತವಾಗಿಯೂ ಅದನ್ನು ಹಿಂತಿರುಗಿಸಿ ಮತ್ತು ನಿಮ್ಮಿಂದ ಪೆನ್ನನ್ನು ಎರವಲು ಪಡೆದವರಿಂದ ಅದನ್ನು ಮರಳಿ ಪಡೆದುಕೊಳ್ಳಿ. ಏಕೆಂದರೆ ಲೇಖನಿಯ ಜೊತೆಗೆ ನಿಮ್ಮ ಅದೃಷ್ಟವೂ ಇತರರೊಂದಿಗೆ ಹಂಚಿಹೋಗುತ್ತದೆ. ನಿಮ್ಮ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಇತರರು ಪಡೆಯುತ್ತಾರೆ ಅಥವಾ ಅವರ ಕೆಟ್ಟ ಹಾಗೂ ಒಳ್ಳೆಯ ಫಲಗಳು ನಿಮ್ಮದಾಗುತ್ತವೆ.
ಉಪ್ಪು
ಬಹುತೇಕ ಮನೆಗಳಲ್ಲಿ ಆಹಾರ ಪದಾರ್ಥಗಳ ವಿನಿಮಯ ಮಾಡಿಕೊಳ್ಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಶಾಸ್ತ್ರಗಳ ಪ್ರಕಾರ, ಉಪ್ಪನ್ನು ಯಾರಿಗೂ ಎರವಲು ನೀಡಬೇಡಿ ಅಥವಾ ದಾನದ ರೂಪದಲ್ಲಿ ನೀಡಬೇಡಿ. ಉಪ್ಪು ಚಂದ್ರ ಮತ್ತು ಶುಕ್ರಕ್ಕೆ ಸಂಬಂಧಿಸಿದೆ, ಉಪ್ಪನ್ನು ಎರವಲು ಪಡೆದ ನಂತರ ಈ ಎರಡೂ ಗ್ರಹಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಇದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಇದನ್ನೂ ಓದಿ-Onion Juice: ಅಧಿಕ ರಕ್ತದೊತ್ತಡ ನಿಯಂತ್ರಿಸಲು ಖಾಲಿ ಹೊಟ್ಟೆ ಈ ಜ್ಯೂಸ್ ಸೇವಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.