Vastu Tips: ಬೆಳಗ್ಗೆ ಎದ್ದಾಕ್ಷಣ ಅಪ್ಪಿತಪ್ಪಿಯೂ ಕೂಡ ಈ 5 ಕೆಲಸಗಳನ್ನು ಮಾಡಬೇಡಿ, ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ

Morning Vastu Tips: ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಳಗ್ಗೆ ಎದ್ದು ಯಾವ  ಕೆಲಸಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Aug 15, 2022, 07:57 PM IST
  • ದಿನದ ಆರಂಭ ಚೆನ್ನಾಗಿದ್ದರೆ ದಿನದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳೂ ಸಫಲವಾಗುತ್ತವೆ ಎಂದು ಹೇಳಲಾಗುತ್ತದೆ.
  • ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ.
  • ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
Vastu Tips: ಬೆಳಗ್ಗೆ ಎದ್ದಾಕ್ಷಣ ಅಪ್ಪಿತಪ್ಪಿಯೂ ಕೂಡ ಈ 5 ಕೆಲಸಗಳನ್ನು ಮಾಡಬೇಡಿ, ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ title=
Morning Wakeup Mantra

Morning Vastu Tips: ದಿನದ ಆರಂಭ ಚೆನ್ನಾಗಿದ್ದರೆ ದಿನದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳೂ ಸಫಲವಾಗುತ್ತವೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.  ಇಂತಹುದೇ ಕೆಲ ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳನ್ನು ಬೆಳಗ್ಗೆ ಎದ್ದ ನಂತರ ಮಾಡಬಾರದು, ಏಕೆಂದರೆ ಅದೃಷ್ಟದ ಬದಲಿಗೆ, ದುರದೃಷ್ಟವು ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ. ಮುಂಜಾನೆ ಯಾವ 5 ಕೆಲಸಗಳನ್ನು ಮಾಡುವುದು ಅಶುಭಕರವೆಂದು ಪರಿಗಣಿಸಲಾಗಿದೆ ತಿಳಿದುಕೊಳ್ಳೋಣ ಬನ್ನಿ

ಕನ್ನಡಿಯಲ್ಲಿ ನೋಡುವುದು
ಸಾಮಾನ್ಯವಾಗಿ ಜನರು ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡುತ್ತಾರೆ, ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಮೊದಲು ದೇವರ ದರ್ಶನ ಮಾಡಬೇಕು. ಹೀಗೆ ಮಾಡುವುದರಿಂದ ದಿನ ಉತ್ತಮವಾಗಿ ಆರಂಭದೊಂದು ಉತ್ತಮವಾಗಿ ಕಳೆಯುತ್ತದೆ.

ನಿಂತು ಹೋಗಿರುವ ಗಡಿಯಾರ ನೋಡುವುದು
ವ್ಯಕ್ತಿಯ ಭವಿಷ್ಯವು ಗಡಿಯಾರದೊಂದಿಗೆ ಸಂಬಂಧಿಸಿದೆ. ಮನೆಯಲ್ಲಿ ನಿಂತುಹೋದ ಗಡಿಯಾರವು ಕೆಟ್ಟ ಸಮಯವನ್ನು ಸೂಚಿಸುತ್ತದೆ. ಧರ್ಮಗ್ರಂಥಗಳ ಪ್ರಕಾರ, ನಿಂತುಹೋದ ಗಡಿಯಾರವನ್ನು ನೋಡುವುದು ಮನೆಯಲ್ಲಿ ವಿವಾದಕ್ಕೆ ಕಾರಣವಾಗಬಹುದು. ಪ್ರತಿದಿನದ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.

ಮುಸುರಿ ಪಾತ್ರೆಗಳು ನೋಡುವುದು
ಬೆಳಗ್ಗೆ ಎದ್ದ ತಕ್ಷಣ ಮುಸುರಿ ಪಾತ್ರೆಗಳನ್ನು ನೋಡುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಕಡಿಮೆಯಾಗುತ್ತದೆ. ಶಾಸ್ತ್ರಗಳ ಪ್ರಕಾರ ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಮಲಗಬೇಕು. ಮುಸುರಿ ಪಾತ್ರೆಗಳನ್ನು ಹಾಗೆಯೇ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ.

ನೆರಳು ದೃಷ್ಟಿಗೆ ಬೀಳುವುದು
ಬೆಳಗ್ಗೆ ಎದ್ದ ತಕ್ಷಣ ನಮ್ಮ ಮೊದಲ ದೃಷ್ಟಿ ನಮ್ಮ ಅಥವಾ ಇತರರ ನೆರಳಿನ ಮೇಲೆ ಬೀಳುವುದು ಒಳ್ಳೆಯ ಸಂಕೇತವಲ್ಲ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನೆರಳು ಕಣ್ಣಿಗೆ ಬೀಳುವುದು ರಾಹುವಿನ ಸಂಕೆತೆ ಎಂದು ಪರಿಗಣಿಸಲಾಗುತ್ತದೆ. ನೆರಳನ್ನು ನೋಡುವುದು ವ್ಯಕ್ತಿಯಲ್ಲಿ ಉದ್ವೇಗ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ದಿನವಿಡೀ ಕೆಲಸದಲ್ಲಿ ತೊಂದರೆಗಳು ಎದುರಾಗುತ್ತವೆ ಮತ್ತು ಇದು ಏಕಾಗ್ರತೆಗೆ ಭಂಗ ತರುತ್ತದೆ.

ಇದನ್ನೂ ಓದಿ-Janmashtami 2022: ಜನ್ಮಾಷ್ಟಮಿಯ ದಿನ ನಿರ್ಮಾಣಗೊಳ್ಳುತ್ತಿದೆ ಈ ಅತ್ಯಂತ ಅಪರೂಪದ ಯೋಗ, ಧನವೃದ್ಧಿಗೆ ಈ ಉಪಾಯ ಅನುಸರಿಸಿ

ಕ್ರೂರ ಪ್ರಾಣಿಗಳ ಫೋಟೋ ನೋಡುವುದು
ಬೆಳಗ್ಗೆ ಎದ್ದ ತಕ್ಷಣ ಹಸು ಕಂಡರೆ ಅದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಮುಂಜಾನೆಯ ಮೊದಲ ದೃಷ್ಟಿ ಕ್ರೂರ ಪ್ರಾಣಿಗಳ ಮೇಲೆ ಅಥವಾ ಪ್ರಾಣಿಯ ಚಿತ್ರದ ಮೇಲೆ ಬೀಳಬಾರದು ಎಂದು ಹೇಳಲಾಗಿದೆ. ಇದು ಸಂಬಂಧಗಳಲ್ಲಿ ವಿರಸಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಕೆಲಸದ ಸ್ಥಳದಲ್ಲಿಯೇ ಇದರಿಂದ ವಿವಾದ ಉಂಟಾಗಬಹುದು.

ಇದನ್ನೂ ಓದಿ-Sun Transit 2022: ಸಿಂಹ ಸಂಕ್ರಮಣ ಯಾವಾಗ? ಈ ದಿನ ಒಂದು ಪದಾರ್ಥ ಸೇವನೆಯಿಂದ ಲಭಿಸುತ್ತದೆ ಅಪಾರ ಕೀರ್ತಿ-ಯಶಸ್ಸು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News