ನವದೆಹಲಿ: Benefits Of Peacock Feather - ನವಿಲುಗರಿ ಸುಂದರವಾಗಿರುವುದರ ಜೊತೆಗೆ ಎಷ್ಟೊಂದು ಪವಿತ್ರವಾಗಿದೆ ಎಂದರೆ ಶ್ರೀ ಕೃಷ್ಣ ಕೂಡ ತನ್ನ ಮುಡಿಯಲ್ಲಿ ನವಿಲುಗರಿಗೆ (Peacock Feather) ಸ್ಥಾನ ನೀಡಿದ್ದಾನೆ . ಇದೆ ಕಾರಣದಿಂದ ನವಿಲುಗರಿ ಶ್ರೀವಿಷ್ಣು ಹಾಗೂ ಮಾತೆ ಲಕ್ಷ್ಮಿಗೆ ಪ್ರೀಯ ಕೂಡ ಹೌದು. ಇನ್ನೊಂದೆಡೆ ಕಾರ್ತಿಕೇಯನ ವಾಹನ ಕೂಡ ನವಿಲಾಗಿದೆ. ಇದಲ್ಲದೆ ಶ್ರೀಗಣೇಶನಿಂದ ದೇವಿ ಸರಸ್ವತಿಯವರೆಗೆ ಇತರೆ ದೇವ-ದೇವತೆಗಳೂ ಕೂಡ ನವಿಲುಗರಿಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಇದು ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅಷ್ಟೇ ಲಾಭದಾಯಕ ಕೂಡ ಆಗಿದೆ. ಗ್ರಹದೋಷ ದಿಂದ ಹಿಡಿದು ವಾಸ್ತುದೋಷ ನಿವಾರಣೆಗೂ ಕೂಡ ಇದರಿಂದ ಸಹಾಯವಾಗುತ್ತದೆ. 


COMMERCIAL BREAK
SCROLL TO CONTINUE READING

ಮನೆಯಲ್ಲಿ ನವಿಲು ಗರಿ ಇಟ್ಟುಕೊಳ್ಳುವ ಲಾಭಗಳು
1.  ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative Energy) ಪ್ರವೇಶವನ್ನು ತಡೆಯಲು ಮನೆಯ ಮುಖ್ಯದ್ವಾರದ ಮೇಲೆ 3 ನವಿಲು ಗರಿಗಳನ್ನು ಇರಿಸಿ ಹಾಗೂ ಅದರ ಕೆಳಗಡೆ ಗಣೇಶನ ಮೂರ್ತಿ ಇರಿಸಿ. ಇದರಿಂದ ಋಣಾತ್ಮಕ ಶಕ್ತಿ ಮನೆ ಪ್ರವೇಶಿಸುವುದಿಲ್ಲ.
2. ಮನೆಯ ದೇವರ ಕೊಠಡಿಯಲ್ಲಿ ದೇವರ ವಿಗ್ರಹಗಳ ಜೊತೆಗೆ ನವಿಲುಗರಿ ಇಡುವುದು ತುಂಬಾ ಶುಭಕರ 


ಇದನ್ನೂ ಓದಿ - ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?

3. ಒಂದು ವೇಳೆ ನೀವೂ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶ ಬಯಸುತ್ತಿದ್ದರೆ ಮತ್ತು ಮನೆಯ ಎಲ್ಲ ಸದಸ್ಯರ ನಡುವೆ ಅಂತರ ಕಡಿಮೆಯಾಗಿ ಪ್ರೀತಿ ಹೆಚ್ಚಾಗಲು ಬಯಸುತ್ತಿದ್ದರೆ ಲಿವಿಂಗ್ ರೂಮ್ ನಲ್ಲಿ ನವಿಲುಗರಿಯನ್ನಿಡಿ.
4. ನವಿಲುಗರಿ ಪ್ರೇಮದ ಪ್ರತೀಕ ಕೂಡ ಹೌದು. ಹೀಗಾಗಿ ಬೆಡ್ ರೂಂ ನಲ್ಲಿಯೂ ಕೂಡ ನವಿಲುಗರಿ ಹಚ್ಚುವುದು ಲಾಭ ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಡ್ರೂಮ್ ನಲ್ಲಿ ಎರಡು ನವಿಲುಗರಿಯನ್ನು ಒಟ್ಟಿಗೆ ಹಚ್ಚುವುದರಿಂದ ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಹಾಗೂ ಪ್ರೀತಿ ನೆಲೆಸುತ್ತದೆ.


ಇದನ್ನೂ ಓದಿ - Rahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ!

5. ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಕೊಳಲಿನ ಜೊತೆಗೆ ಒಂದು ವೇಳೆ ನೀವು ನವಿಲುಗರಿಯನ್ನು ಇರಿಸಿದರೆ ಇದರಿಂದಲೂ ಕೂಡ ಮನೆಯಲ್ಲಿನ ವಾಸ್ತು ದೋಷ (Vastu Dosha) ನಿವಾರಣೆಯಾಗುತ್ತದೆ.
6. ದೇವಿ ಸರಸ್ವತಿಗೂ ಕೂಡ ನವಿಲುಗರಿ ಇಷ್ಟ. ಹೀಗಾಗಿ ಒಂದು ವೇಳೆ ನಿಮ್ಮ ಮಗು ವ್ಯಾಸಂಗದಲ್ಲಿ ಹಿಂದೆ ಇದ್ದರೆ, ಮಗುವಿನ ಪುಸ್ತಕಗಳ ನಡುವೆ ನವಿಲುಗರಿ ಇಡಿ. ಇದರಿಂದ ಮಗುವಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
7. ಮನೆಯ ಯಾವ ಜಾಗದಲ್ಲಿ ನೀವು ಹಣ ಮತ್ತು ಒಡವೆಗಳನ್ನು ಇಡುತ್ತಿರೂ ಆ ಜಾಗದಲ್ಲಿ ನವಿಲುಗರಿ ಇಡಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.


ಇದನ್ನೂ ಓದಿ - Housing - ಕಡಿಮೆ ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಹೇಗೆ ಮಾಡಬೇಕು?


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಸಲಹೆಗಳು ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿವೆ. ಝೀ ಹಿಂದೂಸ್ತಾನ್ ಕನ್ನಡ ಅವುಗಳನ್ನು ಪುಷ್ಟೀಕರಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.