Rahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ!

ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ.

Last Updated : Mar 20, 2021, 04:50 PM IST
  • ರಾಹು ಗ್ರಹವನ್ನು ಛಾಯಾ ಗ್ರಹವೆಂದು ಸಹ ಕರೆಯುತ್ತಾರೆ.
  • ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ.
  • ರೋಹಿಣಿ ನಕ್ಷತ್ರದಲ್ಲಿರುವ ರಾಹು ಗ್ರಹವು ಪ್ರತ್ಯೇಕ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರಲಿದೆ.
Rahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ! title=

ರಾಹು ಗ್ರಹವನ್ನು ಛಾಯಾ ಗ್ರಹವೆಂದು ಸಹ ಕರೆಯುತ್ತಾರೆ. ಈ ಗ್ರಹಕ್ಕೆ ತನ್ನದೇ ಆದ ಭೌತಿಕ ಸ್ವರೂಪ ಇಲ್ಲವಾದರು ರಾಹುವಿನ ಸ್ಥಾನ ಪರಿವರ್ತನೆಯು ಮನುಷ್ಯ ಜೀವನದ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಈಗ ರಾಹು ಗ್ರಹವು ರೋಹಿಣಿ ನಕ್ಷತ್ರದಲ್ಲಿದ್ದು, ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ. ಈ ನಕ್ಷತ್ರದ ಅಧಿಪತಿ ಚಂದ್ರದೇವನಾಗಿದ್ದಾನೆ. ಈ ವರ್ಷದ ಕೊನೆಯವರೆಗೂ ರಾಹು ಗ್ರಹವು ಇದೇ ನಕ್ಷತ್ರದಲ್ಲಿ ಸ್ಥಿತವಾಗಿರಲಿದೆ. ರೋಹಿಣಿ ನಕ್ಷತ್ರದಲ್ಲಿರುವ ರಾಹು ಗ್ರಹವು ಪ್ರತ್ಯೇಕ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರಲಿದೆ.

ಮೇಷ ರಾಶಿ: ರಾಹು ಗ್ರಹವು ಈ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಹಾಗಾಗಿ ಈ ರಾಶಿಯವರಿಗೆ ಧನಪ್ರಾಪ್ತಿಯ ಸುಯೋಗವಿದೆ. ಆಸ್ತಿ, ಜಮೀನು ಅಥವಾ ಮನೆಯನ್ನು ಖರೀದಿಸಲು(Home Buy) ಈ ಸಮಯವು ಯೋಗ್ಯವಾಗಿದೆ. ಇದರಿಂದ ಲಾಭ ಪಡೆಯುವಲ್ಲಿ ಸಫಲರಾಗಬಹುದಾಗಿದೆ. ಕೌಟುಂಬಿಕ ನೆಮ್ಮದಿಯು ಸಿಗಲಿದೆ.

Daily Horoscope: ದಿನಭವಿಷ್ಯ 20-03-2021 Today astrology

ವೃಷಭ ರಾಶಿ: ಈ ರಾಶಿಯವರು ಮಾನಸಿಕ ಖಿನ್ನತೆಯನ್ನು ಅನುಭವಿಸಬೇಕಾಗುತ್ತದೆ. ಈ ರಾಶಿ(Zodiac Sign)ಯವರು ಯಾರನ್ನು ಸಹ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ. ಯೋಚಿಸಿ ಹೆಜ್ಜೆಯನ್ನಿಡುವುದು ಉತ್ತಮ.

ಮಿಥುನ ರಾಶಿ: ರಾಹು ಗ್ರಹದ ಪ್ರಭಾವದಿಂದ ಈ ರಾಶಿಯವರಿಗೆ ಖರ್ಚು ಹೆಚ್ಚಲಿದೆ. ಅಕಸ್ಮಾತ್ ಆಗಿ ಹಣ ಕಳೆದುಕೊಳ್ಳುವ ಸಂಭವವಿದೆ. ಆರ್ಥಿಕ(Financial) ಸ್ಥಿತಿಯ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಹಣಕ್ಕೆ ಸಂಬಂಧಿಸಿದಂತೆ ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು.

Housing - ಕಡಿಮೆ ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಹೇಗೆ ಮಾಡಬೇಕು?

ಕರ್ಕಾಟಕ ರಾಶಿ: ರಾಹುವಿನ ಶುಭ ಪ್ರಭಾವದಿಂದ ಈ ರಾಶಿಯವರ ಆದಾಯ ಹೆಚ್ಚಲಿದೆ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭವನ್ನು ಪಡೆಯುವ ಯೋಗವಿದೆ. ವೈವಾಹಿಕ ಜೀವನವು ಅತ್ಯಂತ ಖುಷಿಯನ್ನು ನೀಡಲಿದೆ. ಕರ್ಕಾಟಕ ರಾಶಿಯವರ ಮಕ್ಕಳು(Childrens) ಯಶಸ್ಸನ್ನು ಪಡೆಯುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಒಳಿತಾಗುತ್ತದೆ.

ಸಿಂಹ ರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಸಂಭವವಿರುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಸಿಗುವುದಿಲ್ಲ. ವ್ಯಾಪಾರ(Business) ಕ್ಷೇತ್ರದಲ್ಲಿರುವವರು ಕೊಂಚ ನೆಮ್ಮದಿಯನ್ನು ಕಾಣಬಹುದಾಗಿದೆ. ಖರ್ಚು ಹೆಚ್ಚುವ ಸಂಭವವಿದೆ.

ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?

ಕನ್ಯಾ ರಾಶಿ: ಈ ರಾಶಿಯವರು ಕಷ್ಟಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ. ಗೌರವಾದರಗಳು ಕಡಿಮೆಯಾಗುತ್ತವೆ. ತಂದೆಯೊಂದಿಗಿನ ಬಾಂಧವ್ಯ ಹದಗೆಡುವ ಸಂಭವವಿದೆ. ದೂರದ ಪ್ರಯಾಣ(Journey)ದಿಂದ ಅಶುಭವಾಗುವ ಸಾಧ್ಯತೆ ಇದೆ.

ತುಲಾ ರಾಶಿ: ರಾಹು ಗ್ರಹವು ಈ ರಾಶಿಯವರ ಮಾರ್ಗದಲ್ಲಿ ತೊಡಕನ್ನು ಉಂಟುಮಾಡುವುದರಿಂದ, ಎಚ್ಚರಿಕೆಯಿಂದ ಮುನ್ನಡೆಯುವುದು ಉತ್ತಮ. ಮಾನಸಿಕ ಕಷ್ಟವು ಎದುರಾಗುವ ಸಾಧ್ಯತೆ ಇದೆ. ಹಣ(Money) ಮಾಡಲು ಸುಲಭದ ಮಾರ್ಗವನ್ನು ಹಿಡಿಯುವುದರಿಂದ, ನಷ್ಟ ಸಂಭವಿಸುವ ಸಂಭವವಿದೆ.

Holi 2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆದರೆ?

ವೃಶ್ಚಿಕ ರಾಶಿ: ಈ ರಾಶಿಯವರು ಸಾಲ(Lone) ಕೊಡುವುದು ಅಥವಾ ತೆಗೆದುಕೊಳ್ಳುವ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ರಾಹುವಿನ ಅಶುಭ ಪ್ರಭಾವದಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದವರಿಗೆ ಈ ವರ್ಷ ಅತ್ಯಂತ ಶುಭವಾಗಿದೆ. ಅಷ್ಟೇ ಅಲ್ಲದೆ ಕಾರ್ಯಕ್ಷೇತ್ರದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ.

ಧನು ರಾಶಿ: ಈ ರಾಶಿಯವರಿಗೆ ರಾಹು ಗ್ರಹದ ಈ ಪ್ರಭಾವವು ಉತ್ತಮವಾಗಿರುತ್ತದೆ. ಅಕಸ್ಮಾತ್ ಖರ್ಚು ಹೆಚ್ಚುವ ಸಂಭವವಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ.

Kambala: ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಪ್ರವಾಸೋದ್ಯಮ ಇಲಾಖೆ ಉಡುಗೊರೆ

ಮಕರ ರಾಶಿ: ಈ ರಾಶಿಯವರು ಕಷ್ಟಗಳನ್ನು ಎದುರಿಸ ಬೇಕಾಗುವ ಸಂಭವವಿದೆ. ಕೌಟುಂಬಿಕ ಜೀವನವು ಸಾಧಾರಣವಾಗಿರುತ್ತದೆ. ಆದಾಯ(Income)ವು ಹೆಚ್ಚುವ ಸಂಭವವಿದೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚುತ್ತದೆ.

ಕುಂಭ ರಾಶಿ: ಈ ರಾಶಿಯವರ ಸುಖ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ಕೋರ್ಟ್(Court) ಕಚೇರಿಗೆ ಸಂಬಂಧಿಸಿದ ಕೆಲಸಗಳು ಸುಗಮವಾಗಿ ಆಗಲಿವೆ.

ಮೀನ ರಾಶಿ: ಈ ರಾಶಿಯವರ ಸಾಹಸ ಮತ್ತು ಶಕ್ತಿ ವೃದ್ಧಿಸಲಿದೆ. ಶತೃಗಳಿಂದ ಜಯ ಸಿಗಲಿದೆ. ಹೆಚ್ಚೆಚ್ಚು ಪ್ರಯಾಣ ಮಾಡುವ ಸಂಭವವಿದ್ದು, ಅದರಿಂದ ಲಾಭವನ್ನು ಪಡೆಯಬಹುದಾಗಿದೆ.

Daily Horoscope: ದಿನಭವಿಷ್ಯ 19-03-2021 Today astrology

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News