Vastu tips: ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯೊಳಗಿಡಬೇಡಿ.!
ಪ್ರಸ್ತುತ ಸಮಯದಲ್ಲಿ, ವಾಸ್ತು ಶಾಸ್ತ್ರದ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವಾಗ ವಾಸ್ತುವಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲವೂ ವಾಸ್ತು ಪ್ರಕಾರವೇ ಇರಬೇಕು ಎಂದು ವಿಶೇಷ ಗಮನವನ್ನೂ ಹರಿಸಲಾಗುತ್ತದೆ.
ಬೆಂಗಳೂರು : ಪ್ರಸ್ತುತ ಸಮಯದಲ್ಲಿ, ವಾಸ್ತು ಶಾಸ್ತ್ರದ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವಾಗ ವಾಸ್ತುವಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲವೂ ವಾಸ್ತು ಪ್ರಕಾರವೇ ಇರಬೇಕು ಎಂದು ವಿಶೇಷ ಗಮನವನ್ನೂ ಹರಿಸಲಾಗುತ್ತದೆ. ಆದರೂ ಕೆಲವೊಂದು ಸಂದರ್ಭದಲ್ಲಿ ಕಿರಿಕಿರಿ, ಸಮಸ್ಯೆಗಳು ತಪ್ಪುವುದೇ ಇಲ್ಲ. ಇದು ಯಾಕೆ ಹೀಗೆ ಎಂದು ನೋಡಿದರೆ ಅಲ್ಲೂ ವಾಸ್ತು ಸಂಬಂಧಿ ತಪ್ಪುಗಳು ಗೋಚರಿಸಬಹುದು. ಬರೀ ಮನೆಯನ್ನು ವಾಸ್ತುವಿನ ಪ್ರಕಾರ ನಿರ್ಮಿಸಿದರೆ ಸಾಲುವುದಿಲ್ಲ. ಕೆಲವೊಂದು ವಸ್ತುಗಳನ್ನು ಮನೆಯೊಳಗೆ ಹಾಗೇ ಬಿಟ್ಟರೂ ವಾಸ್ತು ದೋಷಗಳು (Vastu problem) ಕಂಡು ಬರುತ್ತವೆ.
ವಾಸ್ತು ಶಾಸ್ತ್ರಜ್ಞರ ಪ್ರಕಾರ (Vastu tips), ಮನೆಯೊಳಗೆ ಬೇಡದ ವಸ್ತುಗಳನ್ನು ಶೇಖರಿಸಿ ಇಡಲೇ ಬಾರದು. ಬೇಡದ ವಸ್ತುಗಳು ಅಥವಾ ಗುಜರಿ ವಸ್ತುಗಳು ಯಾವತ್ತೂ ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಹರುಕು ಮುರುಕು ವಸ್ತುಗಳನ್ನು ಮನೆಯಿಂದ ಹೊರ ಹಾಕದೆ ಅವುಗಳ ಮೇಲಿನ ಮೋಹದಿಂದ ಅದನ್ನು ಮನೆಯ ಯಾವುದೋ ಮೂಲೆಯಲ್ಲಿರಲಿ ಎಂದು ಇಟ್ಟುಕೊಳ್ಳಬಾರದು. ಹರಕು ಮುರುಕು ವಸ್ತುಗಳು ಮನೆಯ ಮೂಲೆಯಲ್ಲಿ ಸಂಗ್ರಹವಾಗಿದ್ದರೆ, ನಕರಾಕ್ಮಕ ಶಕ್ತಿಗಳು (Negetive energy) ಕೂಡಾ ಮನೆಯೊಳಗೆ ಪ್ರವೇಶಿಸುತ್ತವಂತೆ. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಏನೇ ಮಾಡಿದರೂ ಕಿರಿ ಕಿರಿ ತಪ್ಪುವುದಿಲ್ಲ. ಹಾಗಾಗಿ ನಿಮ್ಮ ಮನೆಯಲ್ಲೂ ಬೇಡದ ಅನಗತ್ಯ ವಸ್ತುಗಳು ಇದ್ದಲ್ಲಿ ಕೂಡಲೇ ಅವುಗಳನ್ನು ಮನೆಯಿಂದ ಹೊರ ಹಾಕಿ.
ಇದನ್ನೂ ಓದಿ : Devi Lakshmi Money Signal - ದೇವಿ ಲಕ್ಷ್ಮಿಯ ಈ ಸಂಕೇತಗಳನ್ನು ನೀವು ತಿಳಿದುಕೊಂಡು ಧನವಂತರಾಗಿ
ಈ ವಸ್ತುಗಳನ್ನು ಮನೆಯಲ್ಲಿ ಇಡಲೇ ಬೆಡಿ :
ಈ ಅನಗತ್ಯ ವಸ್ತುಗಳು ಅಂದರೆ ಯಾವುದು ಎಂಬ ಪ್ರಶ್ನೆ ಬರಬಹುದು. ಹೌದು ಅವು ಯಾವುವೆಂದರೆ, ಹಾಳಾದ ಫ್ರಿಜ್ (Fridge) , ರೇಡಿಯೋ, ಟಿವಿ, ಮೊಬೈಲ್ (Mobile), ಗ್ಯಾಜೆಟ್‌ಗಳು, ಹರಿದ ಕೋಟ್‌ಗಳು, ಮುರಿದ ಬಾಗಿಲುಗಳು ಮತ್ತು ಕಿಟಕಿಗಳು ಕೆಟ್ಟು ಹೋದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ದಾಸ್ತಾನು ಮಾಡಲು ಹೋಗಬೇಡಿ. ಇನ್ನು ಒಡೆದ ಕನ್ನಡಿ (Mirror), ಮುರಿದ ಆಟಿಕೆಗಳು, ಹಳೆಯ ಪುಸ್ತಕಗಳು, ಬಳಕೆಯಾಗದ ಕೀಲಿಗಳು ಅಥವಾ ಕೀಲಿ ರಹಿತ ಬೀಗಗಳನ್ನು ಕೂಡಾ ಮನೆಯೊಳಗೆ ಇಡಬಾರದು. ನಿಮ್ಮ ಮನೆಯಲ್ಲಿ ಬ್ಯಾಟರಿ ಮುಗಿದು, ನಿಂತು ಹೋದ ಗೊಡೆ ಗಡಿಯಾರವಿದ್ದರೆ, ಒಂದೋ ಅದರ ಸೆಲ್ ಬದಲಾಯಿಸಿ, ಅಥವಾ ಆ ಗಡಿಯಾರವನ್ನು ಗೋಡೆ ಮೇಲಿಂದ ತೆಗೆದುಬಿಡಿ. ಯಾಕೆಂದರೆ ಮೇಲೆ ಹೇಳಿದ ವಸ್ತುಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದೇ ಹೋದರೆ ಅದನ್ನು ವಾಸ್ತು ಶಾಸ್ತ್ರದಲ್ಲಿ ದುರಾದೃಷ್ಟ ಎಂದು ಹೇಳಲಾಗುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ವಸ್ತುಗಳನ್ನು ರಾಶಿ ಹಾಕಿಡಬೇಡಿ :
ಮನೆಯ ಈಶಾನ್ಯ ಮೂಲೆಯಲ್ಲಿ ವಸ್ತುಗಳನ್ನು ರಾಶಿ ಹಾಕಿಟ್ಟರೆ, ಮನೆಯಲ್ಲಿರುವವರಿಗೆ ಮಾನಸಿಕ ಒತ್ತಡ ಕಾಡುತ್ತದೆಯಂತೆ. ಅಲ್ಲದೆ ಸಾಲದ ಸಮಸ್ಯೆಯೂ ಕೂಡಾ ಬಾಧಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra). ಇದರೊಂದಿಗೆ, ಮನೆಯ ಪೂರ್ವ ದಿಕ್ಕಿನಲ್ಲಿ ಕೂಡಾ, ವಸ್ತುಗಳನ್ನು ರಾಶಿ ಹಾಕಿಡಬಾರದು.
ಇದನ್ನೂ ಓದಿ : ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ? ಅವುಗಳ ಮಹತ್ವವೇನು? ಇಲ್ಲಿದೆ ಮಹತ್ವದ ಮಾಹಿತಿ
ಮನೆಯಲ್ಲಿ ಜೇಡರ ಬಲೆ ಇರಬಾರದು :
ಮನೆಯಲ್ಲಿ ಜೇಡರ ಬಲೆ (Spider web) ಇರಲೇ ಬಾರದು. ಹಳೆಯ ಬೂಟುಗಳನ್ನು ಇಟ್ಟಿರಲೇ ಬಾರದು. ಹಳೆಯ ಬೂಟುಗಳಿದ್ದರೆ, ದಾನ ಮಾಡಿ ಬಿಡಿ. ಮನೆಯಲ್ಲಿ ಯಾವುದೇ ಟ್ಯಾಪ್ (tap) ಸೋರಬಾರದು. ಟ್ಯಾಂಕ್ ನಲ್ಲಿ ನೀರು ಒಸರಬಾರದು. ಇವೆಲ್ಲಾ ದುರಾದೃಷ್ಟ ತರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.